Home Karnataka State Politics Updates Gruhalaksmi: ‘ಗೃಹಲಕ್ಷ್ಮೀ’ ಬಗ್ಗೆ ಸರ್ಕಾರ ಕೊಡ್ತು ಬಿಗ್ ಅಪ್ಡೇಟ್ !! ‘ಯಜಮಾನಿ’ಯರಿಗೆ ಈಗ 2-2 ಗುಡ್...

Gruhalaksmi: ‘ಗೃಹಲಕ್ಷ್ಮೀ’ ಬಗ್ಗೆ ಸರ್ಕಾರ ಕೊಡ್ತು ಬಿಗ್ ಅಪ್ಡೇಟ್ !! ‘ಯಜಮಾನಿ’ಯರಿಗೆ ಈಗ 2-2 ಗುಡ್ ನ್ಯೂಸ್ !!

Gruhalaksmi
Image source- Star of mysore

Hindu neighbor gifts plot of land

Hindu neighbour gifts land to Muslim journalist

Gruhalakshmi: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ(Gruhalakshmi)ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನೇನು ಒಂದೆರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ಆದರೆ ಈ ಮುಂಚಿತವಾಗಿಯೇ ಸರ್ಕಾರ ‘ಯಜಮಾನಿ’ಯರಿಗೆ ಎರಡೆರಡು ಗುಡ್ ನ್ಯೂಸ್ ಕೊಟ್ಟಿದೆ.

ಹೌದು, ರಾಜ್ಯ ಸರ್ಕಾರದ(State Government)ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಮುಂದಿನ ಆಗಸ್ಟ್ ತಿಂಗಳಲ್ಲೇ ಫಲಾನುಭವಿಗಳಿಗೆ 2 ಸಾವಿರ ರೂ. ಹಾಕೋದು ಖಚಿತ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅರ್ಜಿ ಸಲ್ಲಿಸುವಾಗ ಉಂಟಾಗುವ ಒತ್ತಡ ತಪ್ಪಿಸಲು ಹಾಗೂ ಅರ್ಜಿದಾರರಿಗೆ ಅನುಕೂಲದ ದೃಷ್ಠಿಯಿಂದ, ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ‘ಪ್ರಜಾ ಪ್ರತಿನಿಧಿ'(Praja pratinidhi)ಯನ್ನ ಸರ್ಕಾರ ನೇಮಿಸಿದೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹೇಮಲತಾ ನಾಯಕ್ (Hemalatha Nayak) ಅವರು ಗೃಹಲಕ್ಷ್ಮಿ ಯೋಜನೆ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆಗಸ್ಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 2 ಸಾವಿರ ರೂ. ಜಮೆ ಮಾಡಲಾಗುತ್ತದೆ ಅಂತ ಭರವಸೆ ನೀಡಿದರು. ಗೃಹಲಕ್ಷ್ಮಿ ಯೋಜನೆಗೆ 30 ಸಾವಿರ ಕೋಟಿ ಹಣ ಬೇಕೆಂದು ಅಂದಾಜಿಸಲಾಗಿದೆ. 2023-24ರ ಬಜೆಟ್‌ನಲ್ಲಿ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು 17,500 ಕೋಟಿ ಅನುದಾನ ಒದಗಿಸಿದ್ದಾರೆ ‌ಎಂದು ವಿವರಿಸಿದರು.

ಅರ್ಜಿ ಸಲ್ಲಿಸಲು ಪ್ರಜಾ ಪ್ರತಿನಿಧಿ ನೇಮಕ:
ಗೃಹಲಕ್ಷ್ಮೀ ಗೆ ಸಂಬಂಧಿಸಿದಂತೆ ಸರ್ಕಾರ ನೂತನ ಮಾರ್ಗಸೂಚಿ ಪ್ರಕಟಿಸಿದೆ. ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಉಂಟಾಗುವ ಒತ್ತಡ ತಪ್ಪಿಸಲು ಹಾಗೂ ಅರ್ಜಿದಾರರಿಗೆ ಅನುಕೂಲದ ದೃಷ್ಠಿಯಿಂದ, ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ‘ಪ್ರಜಾ ಪ್ರತಿನಿಧಿ’ಯನ್ನ ಸರ್ಕಾರ ನೇಮಿಸಿದೆ. ಈ ಪ್ರಜಾ ಪ್ರತಿನಿಧಿಗಳು, ಯೋಜನೆಗೆ ಅರ್ಜಿ ಸಲ್ಲಿಸಲು ತಂತ್ರಜ್ಞಾನ ಅಡೆತಡೆ ಎದುರಿಸುತ್ತಿರುವವರಿಗೆ ಸಹಾಯ ಮಾಡುತ್ತಾರೆ. ಇನ್ನು ಪ್ರಜಾ ಪ್ರತಿನಿಧಿಗಳು ಫಲನುಭವಿಗಳ ಮನೆಗೆ ಭೇಟಿ ನೀಡಿ, ನಾಗರಿಕರ ಪರವಾಗಿ ಅರ್ಜಿ ಸಲ್ಲಿಸುತ್ತಾರೆ. ಇನ್ನು ಇದಕ್ಕಾಗಿ ಅವ್ರಿಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ ಎಂದು ಸ್ಪಷ್ಟ ಪಡೆಸಿದೆ.

ಆಗಸ್ಟ್ ನಿಂದಲೇ ಜಾರಿ:
2-3 ದಿನಗಳಲ್ಲಿ ಸುದ್ದಿಗೋಷ್ಠಿ ಮಾಡಿ ಅರ್ಜಿ ಸಲ್ಲಿಕೆಗೆ ದಿನಾಂಕ ಘೋಷಣೆ ಮಾಡ್ತೀವಿ. ಅಂದೇ ಆ್ಯಪ್(App) ಕೂಡ ರಿಲೀಸ್ ಮಾಡ್ತೀವಿ ಎಂದರು. ಆಗಸ್ಟ್ 16 ಅಥವಾ 17 ರಂದು ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಹಾಕ್ತೀವಿ. ಮನೆ ಯಜಮಾನಿಗೆ ನಾವು 2 ಸಾವಿರ ರೂ. ಕೊಡ್ತಿದ್ದೇವೆ. ಕುಟುಂಬದ ಯಜಮಾನಿಗೆ ಯೋಜನೆ ಲಾಭ ಹೋಗುತ್ತೆ. ಯಾರ ಮನೆಯಲ್ಲೂ ಜಗಳ ತರಲು ಈ ಯೋಜನೆ ಕಾಂಗ್ರೆಸ್(Congress)ಮಾಡಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿದ ಮಹಿಳೆಯರಿಗೆ ಅನುಕೂಲ ಆಗಲು ಯೋಜನೆ ಜಾರಿ ಮಾಡಿದ್ವಿ. 4-5 ದಿನಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ಕೊಡಲಿದ್ದೇವೆ ಎಂದು ತಿಳಿಸಿದರು.

 

ಇದನ್ನು ಓದಿ: Anchor Anushree student photo: ಸ್ಕೂಲ್ ಫೋಟೋ ಹಂಚಿಕೊಂಡು – ಇದ್ಯಾರು ಅಂದ ಅನುಶ್ರೀ: ಇವ್ಳು ನನ್‌ ಡವ್‌, ಕಾಸ್ಟ್ಲಿ ಟೊಮ್ಯಾಟೋ ಮಾರೋಳು ಅಂದದ್ದು ಯಾರು ?