PGCIL: ಫ್ರೀ ಕರೆಂಟ್ ಬೆನ್ನಲ್ಲೇ ಭರ್ಜರಿ ಸಿಹಿ ಸುದ್ದಿ ಕೊಟ್ಟ ವಿದ್ಯುತ್ ನಿಗಮ – ಇಂತ ಚಾನ್ಸ್ ಬಿಡ್ಬೇಡಿ, ಇಂದೇ ಅರ್ಜಿ ಸಲ್ಲಿಸಿ !!

Latest Karnataka news PGCIL latest update another good news from Power grid corporation of India limited

PGCIL: ರಾಜ್ಯ ಸರ್ಕಾರ(Karnataka Government) ಜುಲೈ ಒಂದರಿಂದಲೇ ಗೃಹಜ್ಯೋತಿಯಡಿ ರಾಜ್ಯದ ಪ್ರತಿಯೊಂದು ಮನೆಗೂ ಫ್ರೀ ಕರೆಂಟ್ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ರಾಜ್ಯದ ವಿದ್ಯುತ್ ನಿಗಮವು ಕೂಡ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

ಹೌದು, Power Grid Corporation Of India Ltd (PGCIL) ಸಂಸ್ಥೆಯು ಖಾಲಿ ಇರುವಂತಹ 1035 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಸಲ್ಲಿಸುವಂತೆ ಆಹ್ವಾನಿಸಿದೆ. ಒಂದು ವೇಳೆ ನೀವೂ ಕೂಡ ಸಂಸ್ಥೆಯ ನಿಯಮಗಳಿಗೆ ಅರ್ಹರಾಗಿದ್ದರೆ ತಪ್ಪದೇ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಂದಹಾಗೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಹಲವಾರು ವಲಯಗಳಲ್ಲಿ ಅಸ್ತಿತ್ವದಲ್ಲಿ ಇರುವಂತಹ ಸಂಸ್ಥೆ ಇದಾಗಿದ್ದು ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿ-ವಿದ್ಯಾರ್ಹತೆ:
• ಅರ್ಜಿ ಸಲ್ಲಿಸುವವರು 18 ವರ್ಷಕ್ಕಿಂತ ಹೆಚ್ಚು ಆಗಿರಬೇಕು ಹಾಗೂ 28 ವರ್ಷಗಳ ಒಳಗೆ ಆಗಿರಬೇಕು.
• ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿಸಡಲಿಕೆ ಇರುತ್ತದೆ.
• OBC ವರ್ಗದ ಜನರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ, Handicap ಕೆಟಗರಿಯಲ್ಲಿ ಹತ್ತು ವರ್ಷಗಳವರೆಗೂ ಕೂಡ ವಯೋಮಿತಿಸಡಿಕೆಯನ್ನು ನಿರ್ಧರಿಸಲಾಗಿದೆ.
• SSLC, PUC, ITI, DIPLOMA, Graduation ಹಾಗೂ BE ವಿದ್ಯಾರ್ಹತೆಯನ್ನು ಹೊಂದಿರುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
• ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ನೀಡಬೇಕಾದ ಅಗತ್ಯವಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?
PGCIL ಸಂಸ್ಥೆ ಅಧಿಕೃತ ವೆಬ್ಸೈಟ್ ಆಗಿರುವ www.powergrid.in ನಲ್ಲಿ ಲಾಗಿನ್ ಮಾಡುವ ಮೂಲಕ ಜುಲೈ 1 ರಿಂದ 31ರ ಒಳಗೆ ಅರ್ಜಿಯನ್ನು ಸಲ್ಲಿಸುವಂತಹ ಅವಕಾಶವನ್ನು ಸಂಸ್ಥೆ ನಿಮಗೆ ನೀಡಿದೆ. ಆಸಕ್ತ ಅಭ್ಯರ್ಥಿಗಳು ಹಾಗೂ ಈ ಮೇಲೆ ತಿಳಿಸಿರುವಂತಹ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಕೆಲಸದಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ :
ಮೇಲೆ ಹೇಳಿರುವಂತಹ ನಿಮ್ಮ ವಿದ್ಯಾರ್ಹತೆಯಲ್ಲಿ ನೀವು ಪಡೆದಿರುವಂತಹ ಅಂಕಗಳ ಆಧಾರದ ಮೇಲೆ ಅಂದರೆ ನಿಮ್ಮ ಮೆರಿಟ್ (Merit) ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ವೇತನ:
ಆಯ್ಕೆಯಾದ ನಂತರ ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಹಾಗೂ ಕಮ್ಯುನಿಕೇಷನ್, HR ಎಕ್ಸಿಕ್ಯೂಟಿವ್, CSR ಎಕ್ಸಿಕ್ಯೂಟಿವ್, PR ಅಸಿಸ್ಟೆಂಟ್, Law ಎಕ್ಸಿಕ್ಯೂಟಿವ್, ಸೆಕ್ರೆಟರಿ ಎಲ್ ಅಸಿಸ್ಟೆಂಟ್, ಕೆಲಸಕ್ಕೆ 17,500 ಸಂಬಳ ದೊರಕಲಿದೆ. ಡಿಪ್ಲೋಮಾ ಎಲೆಕ್ಟ್ರಿಕಲ್ ಕೆಲಸಕ್ಕೆ ಹದಿನೈದು ಸಾವಿರ ರೂಪಾಯಿ ಹಾಗೂ ITI ಎಲೆಕ್ಟ್ರಿಷಿಯನ್ ಕೆಲಸಕ್ಕೆ 13500 ಸಂಬಳ ದೊರಕಲಿದೆ.

ಇದನ್ನೂ ಓದಿ: Ginger Price Hike: ಶುಂಠಿ ಬೆಳೆಗಾರರಿಗೆ ಹೊಡೀತು ಬಂಪರ್ ಲಾಟ್ರಿ – ಇತಿಹಾಸದಲ್ಲೇ ಮೊದಲ ಬಾರಿಗೆ 20 ಸಾವಿರಕ್ಕೇರಿದ ರೇಟ್ !!

Leave A Reply

Your email address will not be published.