Home News Visa For Students: ‌ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; 5 ವರ್ಷಗಳ ಕೆಲಸದ ವೀಸಾ ಘೋಷಿಸಿದ...

Visa For Students: ‌ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; 5 ವರ್ಷಗಳ ಕೆಲಸದ ವೀಸಾ ಘೋಷಿಸಿದ ಪ್ರಧಾನಿ !

Hindu neighbor gifts plot of land

Hindu neighbour gifts land to Muslim journalist

Visa For Indian Students: ಫ್ರಾನ್ಸ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಇಲ್ಲಿದೆ. ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 5 ವರ್ಷಗಳ ಕೆಲಸದ ವೀಸಾ (Visa For Indian Students) ಸಿಗಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮ್ಮ ಎರಡು ದಿನಗಳ ಫ್ರಾನ್ಸ್ (France) ಪ್ರವಾಸದ ಸಂದರ್ಭದಲ್ಲಿ, ಪ್ಯಾರಿಸ್‌ನ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳು ಐದು ವರ್ಷಗಳ ದೀರ್ಘಾವಧಿಯ ಅಧ್ಯಯನ ವೀಸಾಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿದರು.

ಫ್ರಾನ್ಸ್‌ ಶಿಕ್ಷಣ ಸಂಸ್ಥೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತದೆ. ಕೈಗೆಟುಕುವ ಬೋಧನಾ ಶುಲ್ಕ, ವಿದ್ಯಾರ್ಥಿವೇತನ ಆಯ್ಕೆಗಳು ಮತ್ತು ಉತ್ತಮ-ಗುಣಮಟ್ಟದ ಶಿಕ್ಷಣವು ಪ್ರತಿ ವರ್ಷ ಹಲವಾರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್‌ಗೆ ಆಕರ್ಷಿಸಿದೆ.

ಫ್ರಾನ್ಸ್‌ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಮೋದಿ, ಫ್ರಾನ್ಸ್‌ನ ಜನರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು. ಭಾರತ ಮತ್ತು ಫ್ರಾನ್ಸ್ ನಡುವಿನ “ಮುರಿಯಲಾಗದ ಸ್ನೇಹ” ವನ್ನು ಎತ್ತಿ ತೋರಿಸಿದರು. ಮತ್ತು ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ‌ ಭಾರತೀಯ ವಿದ್ಯಾರ್ಥಿಗಳಿಗೆ ಕೆಲಸದ ವೀಸಾ ವಿಸ್ತರಿಸಲು ಮತ್ತು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸಂತೋಷವನ್ನು ವ್ಯಕ್ತಪಡಿಸಿದರು.

 

ಇದನ್ನು ಓದಿ: Chandrayaan-3: ನಭಕ್ಕೆ ಬೆಂಕಿ ಬೆರೆಸಿ ಜಿಗಿದ ರಾಕೆಟ್, ಅಂತರಿಕ್ಷಕ್ಕೆ ಕೈ ಚಾಚಿತು ಭಾರತ ; ಚಂದ್ರಯಾನ 3 – ಶುಭ ಪ್ರಯಾಣ !