ಏ ರೇವಣ್ಣ, ನಿಂಬೆ ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ ಹಿಡ್ಕೊಂಡಿದ್ದೀಯಾ ? – ಸದನಕ್ಕೆ ಕೊಬ್ಬರಿ ತಂದ ರೇವಣ್ಣನ ಕಿಚಾಯಿಸಿದ ಸಿಎಂ ಸಿದ್ದು

C M Siddaramaiah :’ ಏ ರೇವಣ್ಣ, ನಿಂಬೆ ಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ ಹಿಡಿದುಕೊಂಡಿದ್ಯಾ?’ ಎಂದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ(C M Siddaramaiah )ಕೇಳಿದ ಪ್ರಶ್ನೆಗೆ ಸದನದ ಸದಸ್ಯರೆಲ್ಲರನ್ನು ನಗುವಿನ ಅಂಗಳಕ್ಕೆ ನೂಕಿದಂತಾಯಿತು.

 

ಇವತ್ತು ಹೊಳೆನರಸೀಪುರದ ಶಾಸಕ ಎಚ್ ಡಿ ರೇವಣ್ಣ ಅವರು ಕೈ ತುಂಬಾ ಕೊಬ್ಬರಿ ಹಿಡಿದು ವಿಧಾನಸೌಧಕ್ಕೆ ಬಂದಿದ್ದರು. ದೇವರು ದಿಂಡರು ನಂಬಿಕೆ ಮಂತ್ರ ವಾಸ್ತು ಮುಂತಾದವುಗಳನ್ನು ಅತಿಯಾಗಿ ನಂಬುವ ಹೆಚ್ ಡಿ ರೇವಣ್ಣ ಅವರು ಈ ಹಿಂದೆ ವಿಧಾನಸೌಧಕ್ಕೆ ನಾಲ್ಕು ನಾಲ್ಕು ನಿಂಬೆಹಣ್ಣು ಹಿಡಿದುಕೊಂಡು ಬಂದಿದ್ದು ಸುದ್ದಿಯಾದ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಇಂದು ಸದನಕ್ಕೆ ಬರುವಾಗ ನಿಂಬೆಹಣ್ಣಿನ ಬದಲು ಕೊಬ್ಬರಿ ಹಿಡಿದು ಬಂದಿದ್ದ ಜೆಡಿಎಸ್ ಶಾಸಕ ಎಚ್. ಡಿ. ರೇವಣ್ಣರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಿಚಾಯಿಸಿದ್ದಾರೆ. ಆಗ ಸಿಎಂ ಸಿದ್ದರಾಮಯ್ಯನವರು,’ ಏ ರೇವಣ್ಣ, ನಿಂಬೆ ಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ ಹಿಡಿದು ಕೊಂಡಿದ್ದೀಯಾ? ‘ ಎಂದು ರೇವಣ್ಣ ಕಡೆ ಹಾಸ್ಯದ ಬಾಣ ಬಿಟ್ಟಿದ್ದಾರೆ.

 

ಆಗ, ಸದಾ ಸೀರಿಯಸ್ ಆಗಿ ಕೂತು ಏನನ್ನೋ ಮಂತ್ರಿಸುತ್ತಾ ಇರುವಂತಹ ರೇವಣ್ಣನವರು ಕೂಡಾ ಮುಖದ ಗಂಟುಗಳನ್ನು ಸ್ವಲ್ಪ ಸರಿಮಾಡಿಕೊಂಡು ಮುಗುಳು ನಕ್ಕರು. ‘ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 15,000 ರೂಪಾಯಿಗೆ ಏರಿಕೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಅದನ್ನು ಈ ಸಭೆಯಲ್ಲಿ ಈಡೇರಿಸಬೇಕು’ ಎಂದು ರೇವಣ್ಣ ಆಗ್ರಹಿಸಿದರು. ಅದೇ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕನಿಷ್ಠ ರೇವಣ್ಣಗಾಗಿ ಆದರೂ ಕೊಬ್ಬರಿ ದರ ಏರಿಕೆ ಮಾಡಬೇಕು ಎಂದು ಹೇಳಿದರು.

 

ಆಗ ಸಿದ್ದರಾಮಯ್ಯ ಮಾತನಾಡಿ, ‘ರೇವಣ್ಣ ನನಗೆ ಒಳ್ಳೆಯ ಸ್ನೇಹಿತ ಎಂದರು.’ ಆಗ ಕೆಲವು ಸದಸ್ಯರು, ‘ ಹಾಗಾದ್ರೆ ಕುಮಾರಣ್ಣ ಏನು ? ‘ ಎಂದು ಪ್ರಶ್ನಿಸಿದ್ದಾರೆ. ಆಗ ಬಿಜೆಪಿಯ ಸಾಮ್ರಾಟ್ ಆರ್. ಅಶೋಕ ಮಾತನಾಡಿ, ‘ ಸಿದ್ದರಾಮಯ್ಯ ಮತ್ತು ರೇವಣ್ಣನವರದ್ದು ವಿಶೇಷ ಪ್ರೀತಿ. ಸಿದ್ದರಾಮಯ್ಯ ವಿರುದ್ಧ ಶಾಸಕ ಎಚ್ಡಿ ರೇವಣ್ಣ ಪ್ರಚಾರಕ್ಕೆ ಬರಲಿಲ್ಲ. ಸಿದ್ದರಾಮಯ್ಯ ವಿರುದ್ಧ ಪ್ರಚಾರಕ್ಕೆ ರೇವಣ್ಣ ಮನೆಯಿಂದ ಹೊರಗೇ ಬರಲಿಲ್ಲ ‘ ಎಂದು ಅಶೋಕ್ ಹೇಳಿದ್ದಾರೆ.

 

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೊಳೆನರಸೀಪುರ ಕಡೆ ಸಿದ್ದರಾಮಯ್ಯ ಕೂಡಾ ಹೋಗಲೇ ಇಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿದ ಜಿಟಿ ದೇವೇಗೌಡ, ಅವರಿಬ್ಬರದ್ದು 35 ವರ್ಷಗಳ ಸ್ನೇಹ ಎಂದರು. ಅಷ್ಟರಲ್ಲಿ ಮಾತು ಮುಂದುವರಿಸಿದ ಸಿದ್ದರಾಮಯ್ಯ, ನೀವೆಲ್ಲರೂ ಹೇಳಿದ್ದು ಸತ್ಯ, ರೇವಣ್ಣ ಮೇಲೆ ನನಗ್3 ವಿಶೇಷವಾದ ಪ್ರೀತಿ ಇದೆ ಎಂದರು.

 

ಇವತ್ತು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲು ಸಿಎಂ ಸಿದ್ದರಾಮಯ್ಯ ಮುಂದಾದಾಗ, ರೇವಣ್ಣ ಅವರು ಎದ್ದು ನಿಂತು ಕೊಬ್ಬರಿ ಬೆಳೆಗೆ ಬೆಲೆ ಏರಿಕೆ ಮಾಡಬೇಕು. ಕೊಬ್ಬರಿ ಬೆಲೆ ಏರಿಕೆ ಮಾಡುವುದಾಗಿ ಈಗಾಗಲೇ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಇಂದೇ ಮಾಡಬೇಕು ಎಂದರು. ಇದೆಲ್ಲ ಇವತ್ತು ಕೊಬ್ಬರಿ ತುರಿಯುವಾಗ ನಡೆದ ಘಟನಾವಳಿಗಳು !!

ಇದನ್ನೂ ಓದಿ :‘ಮೋದಿ ಹೇಳಿದ ಅದೊಂದು ಮಾತು ಕೇಳಿದ್ರೆ 5 ವರ್ಷವೂ ನಾನೇ ಸಿಎಂ’

Leave A Reply

Your email address will not be published.