H D Kumaraswamy: ‘ಮೋದಿ ಹೇಳಿದ ಅದೊಂದು ಮಾತು ಕೇಳಿದ್ರೆ 5 ವರ್ಷವೂ ನಾನೇ ಸಿಎಂ’ – ಸಂಚಲನ ಸೃಷ್ಟಿಸಿದ ಕುಮಾರಸ್ವಾಮಿ ಹೇಳಿಕೆ!!
H D Kumaraswamy :2018ರ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ(Assembly election) ಯಾವ ಪಕ್ಷಕ್ಕೂ ಪೂರ್ಣ ಬಹುಮತ ಬರದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ(Congress-JDS) ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದದ್ದು ಎಲ್ಲರಿಗೂ ಗೊತ್ತಿದೆ. ನಂತರ ಏನೆಲ್ಲಾ ಬೆಳವಣಿಗೆಗಳು, ನಾಟಕಗಳು ನಡೆದವು ಎಂಬುದೂ ಎಲ್ಲರಿಗೂ ತಿಳಿದೆ. ಆದರೆ ಈ ವೇಳೆ ತಾನು ಏನು ಮಾಡಿದ್ದರೆ 5 ವರ್ಷವೂ ಸಿಎಂ ಆಗಿರುತ್ತಿದ್ದೆ ಎಂದು ಅಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ(H D Kumaraswamy) ಅವರು ಇದೀಗ ಬಹಿರಂಗಗೊಳಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ‘ ಅಂದು ಪ್ರಧಾನಿ ಮೋದಿಯವರ(PM Modi) ಮಾತು ಕೇಳಿದ್ರೆ 5 ವರ್ಷಗಳ ಕಾಲವೂ ಮುಖ್ಯಮಂತ್ರಿ ಆಗಿರುತ್ತಿದೆ’ ಎಂದು ಹೊಸ ಬಾಂಬ್ ಸಿಡಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಅಂದು ಪ್ರಧಾನಿ ಅವರು ಕುಮಾರಸ್ವಾಮಿ ಅವರಿಗೆ ಹೇಳಿದ ಮಾತಾದರೂ ಏನು ಗೊತ್ತಾ? ಹಾಗಿದ್ರೆ ಈ ಸ್ಟೋರಿ ನೋಡಿ.
ಹೌದು, 2018ರಲ್ಲೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಂತಹ ಸಂದರ್ಭದಲ್ಲಿ, ಅದೂ ಕೂಡ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಆಗಿದ್ದ ಎಚ್ ಡಿ ಕುಮಾರಸ್ವಾಮಿ ಅವರನ್ನು ದಿಲ್ಲಿಗೆ ಕರೆಸಿ ಬಹಳ ದೀರ್ಘ ಸಮಯ ಸಭೆ ನಡೆಸಿ ಮಾತನಾಡಿದ್ದರು. ಆ ವೇಳೆ ಅದು ಬಹಳ ದೊಡ್ಡ ಸುದ್ದಿಯಾಗಿತ್ತು. ನೂರಾರು ಊಹಾಪೂಹಗಳು ಹುಟ್ಟಿಕೊಂಡಿದ್ದವು. ಆದರೀಗ ಅಂದಿನ ಮಾತುಕತೆಯ ರಹಸ್ಯವನ್ನು ಕುಮಾರಸ್ವಾಮಿ ಅವರು ಈಗ ಹೊರಗೆಡಹಿದ್ದಾರೆ.
ಅಂದಹಾಗೆ ಗುರುವಾರ ವಿಧಾನಸಭಾ ಅಧಿವೇಶನದಲ್ಲಿ(Assembly session) ಆಪರೇಷನ್ ಕಮಲ ವಿಚಾರ ಬಂದಾಗ ಮಾತನಾಡಿದ ಅವರು ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲೋಕಸಭಾ ಚುನಾವಣೆಗಿಂತ(Parliament election) 15 ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಕರೆದು ಒಂದೂವರೆ ಗಂಟೆ ಚರ್ಚೆ ಮಾಡಿದ್ದರು. ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇರೊಲ್ಲ. ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದು ಆಹ್ವಾನ ಕೊಟ್ಟಿದ್ದರು. ಆದರೆ ನಾನು ಅದನ್ನು ತಿರಸ್ಕಾರ ಮಾಡಿದೆ. ಕಪ್ಪು ಚುಕ್ಕೆ ಬರಬಾರದು ಎಂಬ ಕಾರಣಕ್ಕಾಗಿ ಮುಂದುವರಿದೆ’ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಲ್ಲದೆ ಈ ವೇಳೆ ‘ಕುಮಾರಸ್ವಾಮಿ ಅವರೇ ಏಕೆ BJP ಅವರ ಜೊತೆ ಸೇರಿಕೊಂಡಿದ್ದೀರಾ? ಎಂದು ಸಿದ್ದರಾಮಯ್ಯ(CM siddaramaiah)ಕೇಳಿದಾಗ ‘ಪ್ರಧಾನಿ ಮಾತು ಕೇಳಿ ತೀರ್ಮಾನ ಮಾಡಿದ್ದರೆ ನಾನು ಕಳೆದ ಐದು ವರ್ಷಗಳ ಕಾಲ ಸಿಎಂ ಆಗ್ತಿದ್ದೆ. ಪದೇ ಪದೇ ಬಿಜೆಪಿ ಬಿ ಟೀಂ ಎಂದು ಹೇಳುತ್ತಾ ನೀವೇ ಬಿಜೆಪಿ ಕಡೆ ತಳ್ಳುತ್ತೀರಿ. ನಾವೂ ರಾಜಕೀಯದಲ್ಲಿ ಉಳಿಯಬೇಕಲ್ವಾ? ನಾನು ಮಾಡೋದಾದರೆ ನೇರವಾಗಿ ಮಾಡ್ತೇವೆ ಎಂದರು. ಒಟ್ಟಿನಲ್ಲಿ ಮಾಜಿ ಸಿಎಂ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ತಕ್ಕ ಮಟ್ಟಿಗೆ ಸಂಚಲನ ಸೃಷ್ಟಿಸಿದ್ದಂತೂ ಸತ್ಯ.
ಇದನ್ನೂ ಓದಿ :ಎದೆಯ ಗೀಟು ಕಾಣುವಂತೆ ಜಿಮ್ಮಿನಿಂದ ಎದ್ದು ಬಂದ ‘ ಇಕ್ಕಟ್ ‘ ನಟಿ ಭೂಮಿ ಶೆಟ್ಟಿ ನೆಟ್ಟಿಗರಿಂದ ಸಕತ್ ಪಾಠ