Shakthi yojane: ‘ಶಕ್ತಿಯೋಜನೆ’ ಇಂದ ಕೊನೆಗೂ ಸಂಕಷ್ಟಕ್ಕೀಡಾದ ಸರ್ಕಾರ !! ಏನಾಗಬಹಹುದು ಮುಂದಿನ ನಿರ್ಧಾರ?

Latest news congress guarantee first blow from 'Shakti Yojana' is to the government

ಕಾಂಗ್ರೆಸ್(Congress) ಪಕ್ಷದ ಕರ್ನಾಟಕದ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಯಾದ ‘ಶಕ್ತಿ’ ಯೋಜನೆಗೆ ರಾಜ್ಯದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸರ್ಕಾರವೂ ಕೂಡ ಕೊಂಚ ಮಟ್ಟಿಗೆ ಆದಾಯವನ್ನೂ ಹೆಚ್ಚಿಸಿಕೊಂಡಿದೆ. ಆದರೀಗ ಇದೆಲ್ಲದರ ನಡುವೆ ಸರ್ಕಾರಕ್ಕೆ ಮೊದಲ ಬಾರಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ.

ಹೌದು, ರಾಜ್ಯ ಸರ್ಕಾರ ಉಚಿತ ಯೋಜನೆಯಡಿ(Free bus Scheme), ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಮಾಡಿದೆ. ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಸಂಚಾರ ನಡೆಸುವ ಯೋಜನೆ ಒಂದು ತಿಂಗಳು ಪೂರೈಸಿದ್ದು, ಯಶಸ್ವಿಯಾಗಿದೆ. ಆದರೆ ‘ಶಕ್ತಿ’ ಯೋಜನೆ ಜಾರಿಗೆ ಬಳಿಕ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಆಟೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸರ್ಕಾರದ ವಿರುದ್ಧ ಸಿಡಿಡೆದ್ದಿರುವ ಆಟೋ ಚಾಲಕರು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಜುಲೈ 28ರಂದು ಆಟೋ(Auto) ಸಂಚಾರ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಇದರಿಂದಾಗಿ ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಮೊದಲ ಸಂಕಷ್ಟ ಎದುರಾಗಿದೆ.

ಪತ್ರಿಕಾ ಗೋಷ್ಠಿ(Press meet) ನಡೆಸಿ ಈ ಬಗ್ಗೆ ಪ್ರತಿಕ್ರಿಯಿಸಿದ ಆಟೋ ಯುನಿಯನ್ ಅಧ್ಯಕ್ಷ ಮಂಜುನಾಥ್ ಅವರು ‘ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಸಮಸ್ಯೆ ಉಂಟಾಗಿದೆ. ದಿನನಿತ್ಯ ಆಟೋ ಓಡಾಟವೇ ಇಲ್ಲದಾಗಿದೆ. ಟ್ಯಾಕ್ಸಿ ಚಾಲಕರದ್ದು ಇದೇ ಗೋಳು. ಕುಟುಂಬ ನಿರ್ವಹಣೆ, ಸಾಲ ಕಟ್ಟುವುದು ಇತರ ಕಾರಣಕ್ಕೆ ಹಣ ಅಗತ್ಯ ದುಡಿಯೋಣ ಎಂದರು ಬಾರದ ಪ್ರಯಾಣಿಕರಿಂದ ನಾವು ಕಂಗೆಟ್ಟಿದ್ದೇವೆ ಹಾಗಾಗಿ ಪ್ರತಿ ತಿಂಗಳು ಎಲ್ಲ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸಹಾಯಧನ ಎಂಬಂತೆ 10 ಸಾವಿರ ಹಣ ನೀಡಲು ಹಾಗೂ ಆಟೋ ಟ್ಯಾಕ್ಸಿ(Taxi) ಚಾಲಕರಿಗೆ ಎರಡು ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಇಷ್ಟೇ ಅಲ್ಲದೆ ರಾಜ್ಯಾದ್ಯಂತ ಇರುವ ಎಲ್ಲ ಓಲಾ, ಉಬರ್, ರ್ಯಾಪಿಡೊ ಇನ್ನಿತರ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಬಂದ್ ಆಗಬೇಕು ಮತ್ತು ರಾಜ್ಯ ಸರಕಾರದಿಂದ ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಇದೆ. ಈ ಎಲ್ಲ ಬೇಡಿಕೆ ಈಡೇರಿಕೆ ಆಗದಿದ್ದರೆ ರಾಜ್ಯದ 21 ಚಾಲಕರ ಸಂಘಟನೆಯಿಂದ ರಾಜ್ಯಾದ್ಯಂತ ಜುಲೈ 28ರಂದು ಆಟೋ ಹಾಗೂ ಟ್ಯಾಕ್ಸಿ ಸಂಘಟನೆಗಳು, ಖಾಸಗಿ ಬಸ್ ಒಕ್ಕೂಟ ಸೇರಿದಂತೆ ಶಾಲಾ ವಾಹನಗಳ ಚಾಲಕರೆಲ್ಲರೂ ಮುಷ್ಕರ ಮಾಡುವೆವು. ಇದು ಅನಿರ್ದಿಷ್ಟ ಅವಧಿ ಯಾಗಿದ್ದು ಉಪವಾಸ ಮತ್ತು ಮುಷ್ಕರ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಂದಹಾಗೆ ಇತ್ತೀಚೆಗೆ ವಿಧಾನ ಪರಿಷತ್(Vidhana parishat) ಅಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್(JDS) ಸದಸ್ಯ ಭೋಜೇಗೌಡರು(Bhojegowda) ಈ ಕುರಿತು ಪ್ರಶ್ನೆ ಕೇಳಿ ‘ಶಕ್ತಿ ಯೋಜನೆ ಪರಿಣಾಮ ಆಟೋ ರಿಕ್ಷಾಗಳ ಮೇಲೆ ಬಿದ್ದಿದೆ. ಉಚಿತ ಬಸ್ ಪ್ರಯಾಣದಿಂದ ಆಟೋದವರು ಜೀವನ ಮಾಡಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 5 ಲಕ್ಷ ಆಟೋ ಚಾಲಕರು ಇದ್ದಾರೆ. ಅವರಿಗೆ ಜೀವನ ಮಾಡಲು ಆಗುತ್ತಿಲ್ಲ. ಇವರ ನೆರವಿಗೆ ಸರ್ಕಾರ ಬರಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga reddy), ಜೂನ್ 11ಕ್ಕೆ ಶಕ್ತಿ ಯೋಜನೆ ಪ್ರಾರಂಭ ಆಯ್ತು. ಉತ್ತಮವಾಗಿ ಯೋಜನೆ ನಡೆಯುತ್ತಿದೆ. ಯೋಜನೆ ಜಾರಿ ಆಗಿ ಒಂದು ತಿಂಗಳು ಆಗಲಿ. ಆಟೋದವರಿಗೆ ಏನ್ ಸಮಸ್ಯೆ ಆಗಿದೆ ಅಂತ ನೋಡೋಣ. ಈವರೆಗೂ ಯಾವ ಆಟೋ ಚಾಲಕರ ಸಂಘದವರು ನನ್ನ ಬಳಿ ಬಂದು ಕಷ್ಟ ಅಂತ ಹೇಳಿಲ್ಲ. ಯಾವುದೇ ಆಟೋ ಚಾಲಕರು ನನಗೆ ಮನವಿ ಮಾಡಿಲ್ಲ. ಒಂದು ತಿಂಗಳು ಆಗಲಿ, ಬಳಿಕ ಪರಿಶೀಲನೆ ಮಾಡಿ ಆಟೋದವರಿಗೆ ಸಮಸ್ಯೆಯಾದರೆ ಸರ್ಕಾರ ಪರಿಹಾರ ಕೊಡಲಿದೆ ಎಂದು ಭರವಸೆ ನೀಡಿದ್ದರು. ಆದರೆ ಈ ಮುನ್ನವೇ ಆಟೋ ಚಾಲಕರು ಮುಷ್ಕರ ಘೋಷಣೆ ಮಾಡಿದ್ದಾರೆ. ಸರ್ಕಾರ ಏನು ಯಾವ ನಿರ್ಧಾರ ಕೈಗೊಳ್ಳುತ್ತದೆ ನೋಡಬೇಕು.

 

ಇದನ್ನು ಓದಿ: Actor Shah Rukh khan: ನಯನತಾರಾ ಪತಿ ವಿಘ್ನೇಶ್​ ಶಿವನ್​ಗೆ ‘ಹುಷಾರ್’ ಎಂದು ವಾರ್ನಿಂಗ್ ಕೊಟ್ಟ ಶಾರುಖ್ ಖಾನ್ !

Leave A Reply

Your email address will not be published.