Koragajja Daiva: ತೀರ್ಪು ಕೊಡೋ ಕೊರಗಜ್ಜನಿಗೇ ಕಂಠಕವಾಯ್ತು ಜಮೀನು ವಿವಾದ !! ಸಿಟ್ಟಿನಲ್ಲಿ ಗುಡಿಗೇ ಬೆಂಕಿ ಇಟ್ಟ ಮಾಲೀಕ !!
Latest news intresting news man has set fire to Koragajja temple
Koragajja Daiva: ಕೊರಗಜ್ಜ ದೈವ ತುಳುನಾಡಿನಲ್ಲಿ ಭಾರಿ ಜನಪ್ರಿಯ ಕಾರಣಿಕ ದೈವವಾಗಿದ್ದು, ಲಕ್ಷಾಂತರ ಭಕ್ತರು ನಂಬುತ್ತಾರೆ. ಕೆಲವು ವರ್ಷಗಳ ಹಿಂದಿನವರೆಗೆ ಕರಾವಳಿಗೆ ಸೀಮಿತವಾಗಿದ್ದ ಈ ದೈವದ ಕಾರಣಿಕ ಈಗ ರಾಷ್ಟ್ರಾದ್ಯಂತ ಹರಡಿದೆ. ಆದರೆ, ಕೆಲವರು ಸಣ್ಣ ಬುದ್ಧಿಗಳ ಮೂಲಕ ಕೊರಗಜ್ಜನ ಗುಡಿಯನ್ನು ಅವಮಾನ ಮಾಡುತ್ತಾರೆ.
ಹೌದು, ಎಲ್ಲರ ಸಮಸ್ಯೆಗಳನ್ನು ಪರಿಹರಿಸುವ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ (Koragajja Daiva) ಗುಡಿಯ ವಿಚಾರದಲ್ಲೇ, ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ಎರಡು ತಂಡಗಳು ಜಗಳ ಮಾಡಿಕೊಂಡು ಅಂತಿಮವಾಗಿ ಒಬ್ಬ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ (Man sets fire into Koragajjana gudi) ಇಟ್ಟಿದ್ದಾನೆ.
ಬಾಡಾರಿನ ಜಾಗದಲ್ಲಿ ಸಾರ್ವಜನಿಕರು ಸಮಿತಿಯೊಂದನ್ನು ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಾ ಬರುತ್ತಿದ್ದಾರೆ. ಈ ಬಾರಿ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಹೀಗಾಗಿ ಸಾರ್ವಜನಿಕರು ಹಸ್ತಕ್ಷೇಪ ಮಾಡಬಾರದು ಎಂದು ತಗಾದೆ ಎತ್ತಿದ್ದರು.
ಕಳೆದ ಕೆಲವು ವರ್ಷಗಳಿಂದಲೇ ಕೊರಗಜ್ಜ ಆರಾಧನಾ ಸಮಿತಿ ಮತ್ತು ಈ ಖಾಸಗಿ ವ್ಯಕ್ತಿ ನಡುವೆ ಜಾಗದ ವಿಚಾರಕ್ಕೆ ತಗಾದೆ ಕಂಡುಬರುತ್ತಿತ್ತು. ಆದರೆ, ಕೊನೆಗೆ ಅವಕಾಶ ದೊರೆಯುತ್ತಿತ್ತು. ಈ ಬಾರಿ ಮಾತ್ರ ಯಾವ ಕಾರಣಕ್ಕೂ ಆರಾಧನೆಗೆ ಅವಕಾಶ ಕೊಡುವುದಿಲ್ಲ ಎಂದು ಆರಂಭದಲ್ಲೇ ಸ್ಪಷ್ಟಪಡಿಸಿದ್ದರು.
ಇದೀಗ ಕೊರಗಜ್ಜನ ಆರಾಧನೆಗೆ ಸಿದ್ಧತೆಗಳು ಆರಂಭವಾದ ನಡುವೆಯೇ ಭೂಮಿಯ ಮಾಲೀಕನೂ ಆಗಿರುವ ಈ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ ಇಟ್ಟಿದ್ದಾನೆ. ಇದೊಂದು ಸಣ್ಣ ಗುಡಿಯಾಗಿದ್ದು, ಅದರ ಮೇಲೆ ತೆಂಗಿನ ಗರಿ ಹಾಕಲಾಗಿತ್ತು. ಆ ತೆಂಗಿನ ಗರಿಗೆ ಬೆಂಕಿ ಹಚ್ಚಲಾಗಿದೆ. ಕೂಡಲೇ ಸಾರ್ವಜನಿಕರು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದಾರೆ. ಗುಡಿಗೆ ಹೆಚ್ಚಿನ ಹಾನಿಯೇನೂ ಸಂಭವಿಸಿಲ್ಲ.
ಆದರೆ, ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚುವಷ್ಟು ದರ್ಪ ತೋರಿಸಿರುವುದು ತೀವ್ರ ಪ್ರತಿರೋಧಕ್ಕೆ ಕಾರಣವಾಗಿದೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು, ಅದೇ ಜಾಗದಲ್ಲಿ ಆರಾಧನೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಇದನ್ನು ಓದಿ: Liquor Rate: ‘ಎಣ್ಣೆ’ ರೇಟ್ ಹೆಚ್ಚಳದಲ್ಲಿ ದೇಶಕ್ಕೆ ಕರ್ನಾಟಕವೇ ನಂಬರ್ 1 ; ಉಳಿದ ರಾಜ್ಯದಲ್ಲಿ ಎಷ್ಟೆಷ್ಟು ಹೆಚ್ಚು?