Cleaning Tips: ನೆಲ ಒರೆಸುವಾಗ ಈ ಟಿಪ್ಸ್ ಫಾಲೋ ಮಾಡಿ ನೋಡಿ, ಮನೆಯೆಲ್ಲಾ ಫಳ ಫಳ ಅನ್ನುತ್ತೆ

Life style Cleaning Tips Follow these tips for mopping the floor

Cleaning Tips: ಎಲ್ಲರೂ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಂದುಕೊಂಡಿರುತ್ತಾರೆ. ಆದರೆ ಕೆಲವೊಂದು ಬಾರಿ ಎಷ್ಟೇ ಕ್ಲೀನ್​ ಮಾಡಿದ್ರೂ ನಮಗೆ ಗೊತ್ತಿಲ್ಲದ ಹಾಗೆಯೇ ಕಲೆಯಾಗಿಬಿಡುತ್ತೆ. ಕೆಲವು ಕಲೆಯನ್ನು ಕ್ಲೀನ್​ ಮಾಡಲೆಂದು ಎಷ್ಟೋ ಜನರು ಹರಸಾಹಸ ಪಡುತ್ತಾರೆ. ಹೌದು, ಮನೆಯನ್ನು ಪ್ರತಿದಿನ ಒರೆಸಿದರೂ ಅನೇಕ ಬಾರಿ ಮನೆಯ ಟೈಲ್ಸ್ ಸ್ವಚ್ಛವಾಗಿರುವುದಿಲ್ಲ. ಹಾಗಾಗಿ ಮನೆ ಒರೆಸುವಾಗ ನೀರಿನೊಳಗೆ ಕೆಲವು ಪದಾರ್ಥಗಳನ್ನು ಬೆರೆಸಿ ಒರೆಸುವುದರಿಂದ ನೆಲ ಫಳ ಫಳ ಎಂದು ಹೊಳೆಯುತ್ತದೆ.

ಅಡಿಗೆ ಸೋಡಾವನ್ನು ನೆಲವನ್ನು ಸ್ವಚ್ಛಗೊಳಿಸಲು ಮತ್ತು ಹೊಳಪನ್ನು ಹೆಚ್ಚಿಸಲು ಸಹ ಬಳಸಬಹುದು. ಅರ್ಧ ಕಪ್ ಅಡಿಗೆ ಸೋಡಾವನ್ನು ಒಂದು ಬಕೆಟ್ ಅಥವಾ ಅರ್ಧ ಬಕೆಟ್ ನೀರಿನಲ್ಲಿ ಬೆರೆಸಿ ಒರೆಸಿದರೆ ನೆಲ ಹೊಳೆಯುತ್ತಿರುತ್ತದೆ.

ವಿನೆಗರ್ ವಾಸ್ತವವಾಗಿ ನೈಸರ್ಗಿಕ ಸೋಂಕು ನಿವಾರಕವಾಗಿದ್ದು ಇದನ್ನು ಮಹಡಿಗಳನ್ನು ಸ್ವಚ್ಛಗೊಳಿಸಲು ಬಳಸಬಹುದು.

ನೀವು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸುವ ಡಿಶ್ ವಾಷರ್ ಸೋಪ್ ನೆಲಕ್ಕೆ ಹೊಳಪನ್ನು ತರುತ್ತದೆ. ಇದಕ್ಕಾಗಿ ನೀರಿನಲ್ಲಿ ವಿನೆಗರ್ ಅಥವಾ ಅಡಿಗೆ ಸೋಡಾದೊಂದಿಗೆ ಡಿಶ್ ವಾಷರ್ ಅಥವಾ ಲಿಕ್ವಿಡ್ ಸೋಪ್ ಬಳಸಿ.

ಒಂದು ಬಕೆಟ್ ನೀರಿಗೆ 2 ಟೇಬಲ್ಸ್ಪೂನ್ ಪಾತ್ರೆ ತೊಳೆಯುವ ಲಿಕ್ವೆಡ್ ಮತ್ತು ವಿನೆಗರ್ ಅನ್ನು ಹಾಕಿ ಸ್ಕ್ರಬ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ನೆಲ ಹೊಳೆಯುತ್ತಿರುತ್ತದೆ.

 

ಇದನ್ನು ಓದಿ: Marriage: ದೇವಾಲಯದಲ್ಲಿ ಹಿಂದೂ ಜೋಡಿಗೆ ಮದುವೆ ಮಾಡಿಸಿದ ಮುಸ್ಲಿಂ ಲೀಗ್ ; ಹಿಂದೂ-ಮುಸ್ಲಿಂ ಭಾಂದವ್ಯಕ್ಕೆ ಸಾಕ್ಷಿಯಾಯ್ತು ವಿವಾಹ ! 

Leave A Reply

Your email address will not be published.