Anand Mahindra: ಸ್ಟೆಪ್ಲರ್ ಪಿನ್ ಬಳಸಿ ಪುಟಾಣಿ ವಾಹನ ತಯಾರಿ; ಮಹಿಳೆಯ ಜಾಣ್ಮೆಗೆ ಉದ್ಯೋಗವನ್ನೇ ನೀಡಲು ಮುಂದಾದ ಆನಂದ್ ಮಹೀಂದ್ರಾ !
Anand Mahindra: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ತಮ್ಮ ಟ್ವಿಟರ್ (Twitter) ಖಾತೆಯಲ್ಲಿ, ಏನಾದರೂ ವಿಶಿಷ್ಟ, ವಿಭಿನ್ನ ವಿಡಿಯೋಗಳನ್ನು ಶೇರ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಅಂತೆಯೇ ಇತ್ತೀಚೆಗೆ ಆನಂದ್ ಮಹೀಂದ್ರಾ ಅವರು ಮತ್ತೊಂದು ಪೋಸ್ಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (viral) ಆಗಿದೆ.
ಮಹಿಳೆ ಸ್ಟೆಪ್ಲರ್ ನಿಂದ ಸಣ್ಣ ವಾಹನವನ್ನು ತಯಾರಿಸಿದ್ದು, ಮಹಿಳೆಯ ಜಾಣ್ಮೆಗೆ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಿಳೆ ಯಾವುದೇ ರೀತಿಯ ಅಂಟು ಪದಾರ್ಥ ಅಥವಾ ಹೆಚ್ಚುವರಿ ವಸ್ತುಗಳನ್ನು ಬಳಸದೆಯೇ ಕೇವಲ ಸ್ಟೆಪ್ಲರ್ ನಿಂದ ಪುಟಾಣಿ ವಾಹನ ತಯಾರಿಸಿದ್ದಾರೆ.
How on earth did she come up with this idea using just simple staples?? Incredibly creative but she should work on real car manufacturing &design now. We’ll be ready to recruit her! pic.twitter.com/UBxjxvm91P
— anand mahindra (@anandmahindra) July 8, 2023
“ಕೇವಲ ಸರಳವಾದ ಸ್ಟೆಪ್ಲರ್ ಬಳಸಿ ತಮ್ಮ ಕಲ್ಪನೆಯನ್ನು ನಿಜವಾಗಿಸಿದ್ದು ಹೇಗೆ? ಅದ್ಭುತ ಸೃಜನಶೀಲತೆ ಹೊಂದಿರುವ ಅವರು ಕಾರು ತಯಾರಿಕೆ ಮತ್ತು ವಿನ್ಯಾಸದಲ್ಲಿ ಕೆಲಸ ಮಾಡಬೇಕು. ನಾವು ಅವಳನ್ನು ನೇಮಿಸಿಕೊಳ್ಳಲು ಸಿದ್ಧರಿದ್ದೇವೆ!” ಎಂದು ಆನಂದ್ ಮಹೀಂದ್ರಾ ಬರೆದಿದ್ದಾರೆ. ಈ ಪೋಸ್ಟ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ :ಸ್ಮಾರ್ಟ್ ಫೋನ್ ಖರೀದಿಸಿದರೆ ಟೊಮೆಟೊ ಫ್ರೀ ಎಂದು ಬೋರ್ಡ್ ಹಾಕಿದ ಮಾಲೀಕ