Annabhagya Scheme: ‘ಅನ್ನಭಾಗ್ಯ’ದ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ !! ಮತ್ತೆರಡು ಹೊಸ ಷರತ್ತು ವಿಧಿಸಿದ ಸರ್ಕಾರ – ಇವರಿಗೆ ಅಕ್ಕಿಯೂ ಇಲ್ಲ, ದುಡ್ಡೂ ಇಲ್ಲ !!

Latest Karnataka news Congress guarantee two more conditions apply to Karnataka anna Bhagya scheme

Karnataka Annabhagya Scheme: ಕಾಂಗ್ರೆಸ್ ಸರ್ಕಾರದ(Congress Government) ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಅನ್ನ ಭಾಗ್ಯ'(Karnataka Anna bhagya) ಯೋಜನೆಯಡಿ ಉಚಿತವಾಗಿ ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿ ಬದಲು ಹಣ ಕೊಡುವ ಯೋಜನೆಗೆ ಬರುವ 10 ನೇ ತಾರೀಖಿನಂದು ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ. ಆದರೆ ಈ ಬೆನ್ನಲ್ಲೇ ಸರ್ಕಾರ ಈ ಅನ್ನಭಾಗ್ಯ ಯೋಜನೆಗೆ ಮತ್ತೆರಡು ಹೊಸ ಷರತ್ತು ವಿಧಿಸಿದೆ.

ಹೌದು, ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನು(5 Guarantys) ಘೋಷಣೆ ಮಾಡುವಾಗ ಯಾವುದೇ ಷರತ್ತುಗಳನ್ನು, ನಿಯಮಗಳನ್ನು ಹಾಕುತ್ತೇವೆಂದು ಹೇಳಿರಲಿಲ್ಲ. ಆದರೀಗ ಅಧಿಕಾರಕ್ಕೆ ಬಂದ ಬಳಿಕ ಒಂದೊಂದು ಗ್ಯಾರಂಟಿ ಅನುಷ್ಠಾನಗೊಳಿಸಲು ಹಲವಾರು ಷರತ್ತುಗಳನ್ನು ವಿಧಿಸುತ್ತಿದೆ. ಅಂತೆಯೇ ಜುಲೈ 10 ರಂದು ಜಾರಿಯಾಗಲಿರುವ ಅನ್ನಭಾಗ್ಯ ಯೋಜನೆಗೆ ಹತ್ತಾರು ಕಂಡಿಷನ್‌ಗಳನ್ನು(Conditions) ಹಾಕಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಕೊನೆಯ ಹಂತದಲ್ಲಿ ಮತ್ತೆರಡು ಹೊಷ ಷರತ್ತುಗಳನ್ನು ವಿಧಿಸಿದೆ.

ಜುಲೈ 1 ರಿಂದ ಆರಂಭವಾಗಬೇಕಿದ್ದ ಯೋಜನೆಗೆ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಹಿನ್ನಡೆ ಉಂಟಾಗಿದೆ. ಇನ್ನು ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ 5 ಕೆ.ಜಿ ಅಕ್ಕಿಯನ್ನು ಹಾಗೂ ಉಳಿದ 5 ಕೆ.ಜಿ. ಅಕ್ಕಿಯ ಬದಲಾಗಿ 170 ರೂ. ಹಣವನ್ನು ಪಾವತಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಈಗ ಹಣ ಪಾವತಿಗೆ ಪುನಃ ನೂರೆಂಟು ಷರತ್ತುಗಳನ್ನು ವಿಧಿಸಲು ಮುಂದಾಗಿದೆ. ಸರ್ಕಾರದ ಈ ಕಂಡೀಷನ್ ನಿಂದ ರಾಜ್ಯದ ಲಕ್ಷಾಂತರ ಜನರು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಲಿದ್ದಾರೆ.

ಅಂತ್ಯೋದಯ ಕಾರ್ಡ್‌ದಾರರಿಗೆ ಹಣವಿಲ್ಲ:
ಅನ್ನಭಾಗ್ಯ ಜಾರಿಗೆ ದಿನಾಂಕ ಘೋಷಣೆ ಬೆನ್ನಲ್ಲೇ ಸರ್ಕಾರ ಇದೀಗ ಹತ್ತಾರು ಕಂಡೀಷನ್ ಹಾಕುತ್ತಿದೆ. ಅಂತ್ಯೋದಯ(Antyodaya card) ಕಾರ್ಡ್​ ಹೊಂದಿದವರಿಗೆ ಷರತ್ತು ವಿಧಿಸಿದೆ. ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಕಡಿಮೆ ಜನರಿದ್ದರೆ ಅಕ್ಕಿಯ ಬದಲಾಗಿ ಹಣ ಸಿಗುವುದಿಲ್ಲ. ಅಂತ್ಯೋದಯ ಕಾರ್ಡ್‌ಗೆ ಈಗ 35ಕೆಜಿ ಅಕ್ಕಿ ನೀಡಲಾಗ್ತಿದೆ. ಆದರೆ, ಮೂವರಿಗೆ 35 ಕೆಜಿ ಅಕ್ಕಿ ಸಾಕು ಅನ್ನೋದು ಸರ್ಕಾರದ ಲೆಕ್ಕವಾಗಿದೆ. ಹೀಗಾಗಿ ಅವರಿಗೆ ಹೆಚ್ಚುವರಿ ಅಕ್ಕಿ ದೊರೆಯುವುದಿಲ್ಲ ಅಂತ್ಯೋದಯ ಕಾರ್ಡ್​ನಲ್ಲಿ 4 ಜನರಿದ್ರೆ 35 ಕೆಜಿ ಅಕ್ಕಿ ಜತೆ 170 ರೂ. ಹಣ ಲಭ್ಯವಾಗುತ್ತದೆ.

ಮೂರು ತಿಂಗಳು ಅಕ್ಕಿ ಪಡೆಯದಿದ್ದರೆ ಹಣವಿಲ್ಲ: ಅಂತ್ಯೋದಯ ಕಾರ್ಡ್ ಗೆ ಇರುವ ನಿಯಮ BPL ಕಾರ್ಡ್ ದಾರರಿಗಿಲ್ಲ. ಆದರೆ ಅವರಿಗೆ ಮತ್ತೊಂದು ಷರತ್ತು ವಿಧಿಸಲಾಗಿದೆ. ಅದೇನೆಂದರೆ, ಕಳೆದ ಮೂರು ತಿಂಗಳಿನಿಂದ ಯಾರು ನ್ಯಾಯಬೆಲೆ ಅಂಗಡಿಯಿಂದ ಅಕ್ಕಿಯನ್ನು ಪಡೆದುಕೊಂಡಿಲ್ಲವೋ ಅಂತಃ ಕುಟುಂಬಗಳಿಗೆ ಅಕ್ಕಿಯ ಬದಲಾಗಿ ಹಣವನ್ನು ವಿತರಣೆ ಮಾಡುವುದಿಲ್ಲ. ಕೇವಲ ಅಕ್ಕಿ ಮಾತ್ರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅಂದಹಾಗೆ ಜೂನ್ ನಲ್ಲಿ 1,28,23,868 ಕುಟುಂಬಗಳ ಪೈಕಿ 1,17,29,296 ಕುಟುಂಗಳು ಅಕ್ಕಿ ಪಡೆದಿವೆ. ಉಳಿದ 10.94 ಲಕ್ಷ ಬಿಪಿಎಲ್ ಕುಟುಂಬಗಳು ಪಡಿತರ ಅಕ್ಕಿ ಪಡೆದಿರಲಿಲ್ಲ. 10.94 ಲಕ್ಷ ಕುಟುಂಬ ಅಂದರೆ ಅಂದಾಜು 20 ಲಕ್ಷ ಜನ ಅಕ್ಕಿ ಪಡೆದುಕೊಂಡಿಲ್ಲ. ಕಳೆದ 3 ತಿಂಗಳಿಂದ 5,37,213 ಬಿಪಿಎಲ್ ಕುಟುಂಬಸ್ಥರು ಅಕ್ಕಿ ಪಡೆದಿಲ್ಲ. ಹೀಗಾಗಿ ಅಕ್ಕಿ ಪಡೆಯದವರಿಗೆ ಹಣ ನೀಡದಿರಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ: Gruhalakshmi: ‘ಗೃಹ ಲಕ್ಷ್ಮೀ’ಗೆ ಅರ್ಜಿ ಹಾಕಲು ಕೊನೆಗೂ ದಿನಾಂಕ ನಿಗದಿ ಮಾಡಿದ ಗೌರ್ಮೆಂಟ್ !! ಈ ದಿನದಿಂದಲೇ ನಿಮ್ಮ ಖಾತೆಗೆ ಬರುತ್ತೆ 2000 ಅಮೌಂಟ್!!

Leave A Reply

Your email address will not be published.