Home Karnataka State Politics Updates Karnataka Budget 2023: Swiggy, Zomato ನಂತಹ ಡೆಲಿವರಿ ಬಾಯ್ಸ್ ಗೆ ತಲಾ 4 ಲಕ್ಷ...

Karnataka Budget 2023: Swiggy, Zomato ನಂತಹ ಡೆಲಿವರಿ ಬಾಯ್ಸ್ ಗೆ ತಲಾ 4 ಲಕ್ಷ ರೂಪಾಯಿ…… ಸರ್ಕಾರದಿಂದ ಮೆಗಾ ಕೊಡುಗೆ !

Hindu neighbor gifts plot of land

Hindu neighbour gifts land to Muslim journalist

Karnataka Budget 2023: ಕಾಂಗ್ರೆಸ್‌ (Congress) ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಗ್ಯಾರಂಟಿ ಯೋಜನೆ, ಬಜೆಟ್ ವಿಚಾರದಲ್ಲಿ ಜನರು ಹೆಚ್ಚಿನ ನಿರೀಕ್ಷೆ ಜೊತೆಗೆ ಕುತೂಹಲ ಇರಿಸಿದ್ದರು.

ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು 14ನೇ ಬಾರಿಗೆ ಬಜೆಟ್‌ (Karnataka Budget 2023) ಮಂಡಿಸುತ್ತಿದ್ದು, ಈ ಬಜೆಟ್‌ನಲ್ಲಿ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳು ಸೇರಿದಂತೆ ಶ್ರೀಸಾಮಾನ್ಯರಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಹೊಟ್ಟೆಪಾಡಿಗಾಗಿ ಡೆಲಿವರಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವವರಿಗೆ ಸಿಎಂ ಬಿಗ್‌ ರಿಲೀಫ್‌ ನೀಡಿದ್ದಾರೆ.

ಹೌದು, Swiggy, zomato ಮತ್ತು Amazon ನಂತಹ ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ ಸರ್ಕಾರವು 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಕೊಡುವುದಾಗಿ ಘೋಷಣೆ ಮಾಡಿದೆ. ಇದು ರೂ 2 ಲಕ್ಷ ಜೀವ ವಿಮೆ ಮತ್ತು ರೂ 2 ಲಕ್ಷ ಅಪಘಾತ ವಿಮೆಯನ್ನು ಒಳಗೊಂಡಿದೆ. ಇದು ಪೂರ್ನ ಸಮಯ ಹಾಗೂ ಅರೆಕಾಲಿಕ ಡೆಲಿವರಿ ಬಾಯ್‌ಗಳನ್ನು ಒಳಗೊಂಡಿದೆ.

ಬಜೆಟ್‌ ಮಂಡನೆಗೂ ಮುನ್ನ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಸಿದ್ದರಾಮಯ್ಯ ಅವರು ಹೇಳಿ, ಬಜೆಟ್‌ ಆರಂಭದಲ್ಲೇ ಅಬಕಾರಿ ತೆರಿಗೆ ಹೆಚ್ಚಳ ಮಾಡಿರುವುದನ್ನು ತಿಳಿಸಿದರು. ಆದರೆ
ಹೊಟ್ಟೆ ಪಾಡಿಗೆ ದಿನವಿಡೀ ಕಷ್ಟ ಪಟ್ಟು ದುಡಿಯುತ್ತಿರುವ ವರ್ಗ ಅಂದ್ರೆ ಅದು ಡೆಲಿವರಿ ಮಾಡುವ ಕೆಲಸಗಾರರು ಆಗಿದ್ದಾರೆ. ಅದರಲ್ಲೂ ಈ ಸ್ವಿಗ್ಗಿ, ಜೊಮ್ಯಾಟೋದಲ್ಲಿ ಎಷ್ಟು ಗಂಟೆಗೆ ಆರ್ಡರ್‌ ಮಾಡಿದ್ರೂ ನಿಮ್ಮ ಮನೆ ಬಾಗಿಲಿಗೆ ಬಿಸಿ ಬಿಸಿ ಆಹಾರವನ್ನು ತಂದು ಕೊಡುವವರು ಡೆಲಿವರಿ ಬಾಯ್ಸ್.

ಅದಲ್ಲದೆ ಇತ್ತೀಚೆಗೆ ರಾತ್ರಿ ಸಮಯದಲ್ಲಿ ಡೆಲಿವರಿ ಬಾಯ್ಸ್‌ ಡೆಲಿವರಿ ಮಾಡುವಾಗ ಅಪಘಾತವಾಗಿರುವ ಘಟನೆಗಳು ಹೆಚ್ಚಾಗುತ್ತಲೇ ಇದೆ. ಮೊನ್ನೆಯಷ್ಟೇ ಮೈಸೂರು ರಸ್ತೆಯಲ್ಲಿ ಡೆಲಿವರಿ ಏಜೆಂಟ್‌ಗೆ ಕಾರು ಗುದ್ದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನೆಲ್ಲಾ ಪರಿಗಣಿಸಿರುವ ಸರ್ಕಾರ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಕೊಡುವುದಾಗಿ ಘೋಷಣೆ ಮಾಡಿದೆ.

 

ಇದನ್ನು ಓದಿ: Karnataka budget 2023: ರಾಜಧಾನಿಗೆ ರಾಜ – ಕೊಡುಗೆ, ಬೆಂಗಳೂರಿಗೆ ಬೃಹತ್ ಕೊಡುಗೆ !