Home Karnataka State Politics Updates Anna bhagya Scheme: ಅಕ್ಕಿ ಹಣದ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ !! ಕೊನೆಗೂ ಷರತ್ತು...

Anna bhagya Scheme: ಅಕ್ಕಿ ಹಣದ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ !! ಕೊನೆಗೂ ಷರತ್ತು ವಿಧಿಸಿ, ಇಂತವರಿಗೆ ದುಡ್ಡು ಕೊಡಲ್ಲ ಎಂದ ಗೌರ್ಮೆಂಟ್ !!

Anna Bhagya scheme money

Hindu neighbor gifts plot of land

Hindu neighbour gifts land to Muslim journalist

Anna Bhagya scheme money : ಕಾಂಗ್ರೆಸ್ ಸರ್ಕಾರವು(Congress Government) ತನ್ನ ಪಂಚ ಗ್ಯಾರಂಟಿ(5 Guarantys) ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಹರಸಾಹಸ ಪಡುತ್ತಿದೆ. ಈಗಾಗಲೇ ಶಕ್ತಿ ಯೋಜನೆ ಹಾಗೂ ಗೃಹ ಜ್ಯೋತಿ ಯೋಜನೆಗಳು ಜಾರಿಯಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇನ್ನು ಅನ್ನಭಾಗ್ಯ ಯೋಜನೆ ಜಾರಿಗೂ ಪ್ರಕ್ರಿಯೆಗಳು ಶುರುವಾಗಿದ್ದು, ಜನರಿಗೆ ಗುಡ್ ನ್ಯೂಸ್ ಸಿಗುತ್ತದೆ. ಆದರೀಗ ದಿಢೀರ್ ಎಂಬಂತೆ ಸರ್ಕಾರವು ಜನರಿಗೆ ಬಿಗ್ ಶಾಕ್(Big Shock) ನೀಡಿದೆ.

ಹೌದು, ಕಾಂಗ್ರೆಸ್ ಸರ್ಕಾರ (Congress Govt) ವಿಧಾನಸಭೆ ಚುನಾವಣೆಗೂ(Assembly election) ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Five Guarantees) ಪೈಕಿ ಅನ್ನ ಭಾಗ್ಯ ಯೋಜನೆಯೂ ಒಂದು. ಆದರೆ ಸದ್ಯ ಅಕ್ಕಿಯ ಅಭಾವ ಇರುವುದರಿಂದ 5 ಕೆಜಿ ಅಕ್ಕಿ, ಉಳಿದ 5 ಕೆ ಜಿ ಅಕ್ಕಿ ಬದಲು ಹಣ ನೀಡುವುದಾಗಿ ಘೋಷಿಸಿತ್ತು. ಅಲ್ಲದೆ ಈಗಾಗಲೇ ಜಾರಿಯಾಗಬೇಕಿದ್ದ ಈ ಯೋಜನೆ ಈಗಲೇ ಸಾಕಷ್ಟು ವಿಳಂಬವಾಗಿದೆ. ಆದರೂ ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಖಾತೆಗೆ ಹಣ (Anna Bhagya scheme money) ಬೀಳುತ್ತದೆ ಎಂದು ಕಾದು ಕುಳಿತಿರುವ ನಾಡಿನ ಜನತೆಗೆ ಸರ್ಕಾರವೀಗ ಬಿಗ್ ಶಾಕ್ ನೀಡಿದೆ.

ಒಬ್ಬರು ಮುಖ್ಯಸ್ಥರಿದ್ದರೆ ಮಾತ್ರ ದುಡ್ಡು:
ಅನ್ನಭಾಗ್ಯದ (Anna Baghya) ಹಣ ವರ್ಗಾವಣೆಗೆ ಇದೀಗ ರಾಜ್ಯ ಸರ್ಕಾರ ಹೊಸ ಷರತ್ತು ವಿಧಿಸಿದ್ದು, ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು(Head of the family) ಹೊಂದಿರುವ ಕುಟುಂಬಗಳಿಗೆ ಅನ್ನಭಾಗ್ಯದ ನಗದು ವರ್ಗಾವಣೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಹೀಗಾಗಿ ಕುಟುಂಬಸ್ಥರು ಶೀಘ್ರವೇ ಮುಖ್ಯಸ್ಥರು ಯಾರು ಎನ್ನುವುದನ್ನು ನಿರ್ಧರಿಸಬೇಕು. ಅಲ್ಲದೇ ಹಿರಿಯ ಮಹಿಳೆಯನ್ನೇ ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು ಈಗಾಗಲೇ ಎರಡನೇ ಮುಖ್ಯಸ್ಥರ ಹೆಸರಿದ್ದರೆ ಆ ಹೆಸರನ್ನು ನಿಷ್ಕ್ರಿಯಗೊಳಿಸಬೇಕು. ನಂತರ ಈ ಮಾಹಿತಿ ಸಲ್ಲಿಸಿದ ಮೇಲೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಯ ಕುಟುಂಬಸ್ಥರಿಗೆ ಹಣ ವರ್ಗಾವಣೆ ಸೌಲಭ್ಯದಿಂದ ಹೊರಗಿರಿಸಲಾಗುತ್ತದೆ. ಕೂಡಲೇ ಇದನ್ನು ಸರಿ ಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಖಾತೆಗೆ ಆಧಾರ್ ಲಿಂಕ್ ಕಡ್ಡಾಯ:
ಅನ್ನಭಾಗ್ಯದ ಹಣ ಬೇಕಂದ್ರೆ ಆಧಾರ್ ಕಾರ್ಡ್(Adhar card) ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಬೇಕು. ಹೀಗೆ ಮಾಡಿದ್ರೆ ಮಾತ್ರ ಕುಟುಂಬಗಳಿಗೆ ಸೌಲಭ್ಯ ಸಿಗಲಿದೆ. ತಾಂತ್ರಿಕ ಅಥವಾ ಆರೋಗ್ಯ ಕಾರಣಗಳಿಂದ ಆಧಾರ್ ಸಂಖ್ಯೆ ಪಡಿತರ ಚೀಟಿಯೊಂದಿಗೆ ಸೇರಿಸಲು ಸಾಧ್ಯವಾಗದೇ ಇರುವಂತಹ ಫಲಾನುಭವಿಗಳಿಗೆ ಇತರೆ ಮಾರ್ಗೋಪಾಯಗಳ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Anna bhagya Scheme: ಅಕ್ಕಿ ದುಡ್ಡು ಬೇಕಂದ್ರೆ ಕೂಡಲೇ ಇದೊಂದು ಕೆಲ್ಸ ಮಾಡಿ !! ಈ ದಿನದಿಂದಲೇ ಖಾತೆಗೆ ಬರುತ್ತೆ 850 ರೂ !!