Home Interesting ಈತನೇ ನೋಡಿ ವಿಶ್ವದ ಶ್ರೀಮಂತ ಭಿಕ್ಷುಕ, ಮುಂಬೈನಲ್ಲಿ ಫ್ಲಾಟ್ ಸೇರಿದಂತೆ ಈತನ ಸಂಪಾದನೆ ಕೇಳಿದರೆ ಶಾಕ್...

ಈತನೇ ನೋಡಿ ವಿಶ್ವದ ಶ್ರೀಮಂತ ಭಿಕ್ಷುಕ, ಮುಂಬೈನಲ್ಲಿ ಫ್ಲಾಟ್ ಸೇರಿದಂತೆ ಈತನ ಸಂಪಾದನೆ ಕೇಳಿದರೆ ಶಾಕ್ ಆಗ್ತೀರಾ !

Hindu neighbor gifts plot of land

Hindu neighbour gifts land to Muslim journalist

Rich beggar :ಭಿಕ್ಷುಕರು ಮತ್ತು ಶ್ರೀಮಂತರು ಯಾರು ಎನ್ನುವವರು ಹೇಗೆ ಇರ್ತಾರೆ ಎಂದು ನಮಗೆ ತುಂಬಾ ಸ್ಪಷ್ಟ ಆದ ಕ್ಲಾರಿಟಿ ಇರುತ್ತದೆ. ಆರ್ಥಿಕವಾಗಿ ಸ್ಥಿರವಾಗಿಲ್ಲದ, ಹಳೆಯ ಬಟ್ಟೆಗಳನ್ನು ಧರಿಸಿರುವ ಮತ್ತು ಕೊಳಕು ದೇಹದಲ್ಲಿರುವವರು, ದಿನನಿತ್ಯಕ್ಕೆ ಭಿಕ್ಷೆ ಬೇಡಿ ತಿನ್ನಬೇಕಾಗಿ ಇರುವವರು ಭಿಕ್ಷುಕರು. ಅದೇ, ಕೈತುಂಬ ಕಾಸು, ಒಳ್ಳೆಯ ಮನೆ ಓಡಾಡಲು ಕಾರು, ಕಂಪನಿ ಫ್ಯಾಕ್ಟರಿ ಒಳ್ಳೆಯ ಉದ್ಯೋಗ, ಒಳ್ಳೆಯ ಉಡುಗೆ ತೊಡುಗೆ ಒಡವೆ – ಇತ್ಯಾದಿ ಇರುವವರು ಶ್ರೀಮಂತರು. ಆದ್ರೆ ನಿಮ್ಮನ್ನು ಯಾರಾದ್ರೂ ವಿಶ್ವದ ಶ್ರೀಮಂತ ಭಿಕ್ಷುಕ (Rich beggar)ಯಾರು ಎಂದು ಕೇಳಿದರೆ ? ಒಂದು ಕ್ಷಣಕ್ಕೆ ನೀವು ಕನ್ಫ್ಯೂಸ್ ಆಗುವುದು ಸಹಜ. ಹೌದು ಅಂತಹ ಒಬ್ಬ ವ್ಯಕ್ತಿಯನ್ನು ಈಗ ಪತ್ತೆ ಮಾಡಲಾಗಿದೆ. ಆತ ಜಗತ್ತಿನ ಅತ್ಯಂತ ಶ್ರೀಮಂತ ಭಿಕ್ಷುಕ !

 

ಈತ ಈಗಲೂ ಮುಂಬೈನ ಹಲವು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾನೆ. ಬಡತನದಿಂದಾಗಿ ಔಪಚಾರಿಕ ಶಿಕ್ಷಣ ಪಡೆಯಲು ಸಾಧ್ಯವಾಗದ ಇವರು ಭಿಕ್ಷಾ ವೃತ್ತಿಗೆ ಇಳಿದಿದ್ದು ಅದರಿಂದ ಬಂದ ದುಡ್ಡಿನಲ್ಲಿ ಈಗ ಅತ್ಯಂತ ಶ್ರೀಮಂತರಾಗಿದ್ದಾರೆ. ಭರತ್ ಜೈನ್ ಎನ್ನುವ ಈ ಶ್ರೀಮಂತ ಭಿಕ್ಷುಕನಿಗೆ, ವಿವಾಹವಾಗಿದ್ದು ಪತ್ನಿ, ಇಬ್ಬರು ಪುತ್ರರು, ಓರ್ವ ಸಹೋದರ ಮತ್ತು ತಂದೆಯನ್ನು ಒಳಗೊಂಡಿರುವ ಕುಟುಂಬವನ್ನು ಹೊಂದಿದ್ದಾರೆ.

ಅವರ ಇಬ್ಬರು ಮಕ್ಕಳು ಕೂಡಾ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆತ ಮುಂಬೈ ಮೂಲದವರಾಗಿದ್ದು, ರೂ. 7.5 ಕೋಟಿ ($1 ಮಿಲಿಯನ್) ನಿವ್ವಳ ಮೌಲ್ಯ ಸಂಪತ್ತು ಹೊಂದಿದ್ದಾರೆ. ಇಷ್ಟೆಲ್ಲಾ ಸಂಪತ್ತು ಕ್ರೋಡಿಕರಿಸಿದ್ದರೂ ಭಿಕ್ಷೆ ಬೇಡುವುದನ್ನು ಆತ ಇವತ್ತಿಗೂ ನಿಲ್ಲಿಸಿಲ್ಲ.

 

ಭಿಕ್ಷೆ ಬೇಡುವ ಮೂಲಕ ಆತ ತಿಂಗಳಿಗೆ 60,000 ರಿಂದ 75,000 ರೂ. ಗಳಿಸುತ್ತಾರಂತೆ, ಅಲ್ಲದೆ ಆತ ಮುಂಬೈನಲ್ಲಿ 1.2 ಕೋಟಿ ಮೌಲ್ಯದ ಎರಡು ಬೆಡ್‌ರೂಮ್ ಫ್ಲಾಟ್ ಹೊಂದಿದ್ದಾರೆ. ಥಾಣೆಯಲ್ಲಿ ತಿಂಗಳಿಗೆ 30,000 ರೂ. ಬಾಡಿಗೆ ಬರುವ ಎರಡು ಅಂಗಡಿಗಳ ಓನರ್ ಅವರು. ಇವರು ಮುಖ್ಯವಾಗಿ ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಸ್ ಅಥವಾ ಮೈದಾನದಲ್ಲಿ ಭಿಕ್ಷೆ ಬೇಡುತ್ತಾರೆ ಎಂದು ಪತ್ರಿಕೆಯೊಂದರ ವರದಿ ಉಲ್ಲೇಖಿಸಿ ವರದಿಯಾಗಿದೆ.

 

ಪ್ರಪಂಚದಲ್ಲಿ ಹೆಚ್ಚಿನ ಜನರು 12-14 ಗಂಟೆಗಳ ಕಾಲ ಕೆಲಸ ಮಾಡಿದರೂ ಅವರು ದಿನಕ್ಕೆ ಸಾವಿರ ರೂಪಾಯಿಗಳನ್ನು ಗಳಿಸಲು ವಿಫಲರಾದರೆ, ಈ ಶ್ರೀಮಂತ ಭಿಕ್ಷುಕ ಭರತ್ ಜೈನ್ ಜನರ ದಯೆ ದಾಕ್ಷಿಣ್ಯದಿಂದ ಪ್ರತಿದಿನ ಕಡಿಮೆಯೆಂದರೂ 2,000- 2,500 ರೂಪಾಯಿ ಗಳಿಸುತ್ತಾರೆ.

 

ಬಾಲ್ಯದಲ್ಲಿ ಮನೆಯಲ್ಲಿ ಕಷ್ಟ ಇರುವ ಕಾರಣ ಅವರಿಗೆ ಓದಲು ಸಾಧ್ಯವಾಗಲಿಲ್ಲ. ಹಾಗಾಗಿ ಆತ ಭಿಕ್ಷೆಗೆ ಇಳಿಯಬೇಕಾಗಿತ್ತು. ಈಗ ತಮ್ಮ ಮಕ್ಕಳು ತನಗೆ ಹಾಗಾಗಬಾರದೆಂದು ಚೆನ್ನಾಗಿ ಓದಿಸಿ ಮದುವೆ ಮಾಡಿದ್ದಾರೆ. ಭರತ್ ನ ಕುಟುಂಬದ ಇತರ ಸದಸ್ಯರು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದರೆ, ಭರತ್ ಜೈನ್ ಕೈಯಲ್ಲಿ ಅಲ್ಯೂಮಿನಿಯಂ ತಟ್ಟೆ ಹಿಡಿದುಕೊಂಡು ತಿರುಪೆ ಎತ್ತುತ್ತಾರೆ. ಎಕನಾಮಿಕ್ ಟೈಮ್ಸ್ ಪ್ರಕಾರ ಭರತ್ ಜೈನ್ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕರಾಗಿದ್ದಾರೆ.

ಇದನ್ನೂ ಓದಿ :ಅತೀ ಶೀಘ್ರದಲ್ಲೇ ‘ಧರ್ಮಸ್ಥಳ ಫೈಲ್ಸ್’ ?400 ಕೊಲೆಗಳ ಹಿನ್ನೆಲೆಯ ಈ ಸಿನಿಮಾ ಯಾಕೆ ಬೇಕು ?