UGC: ಸಹಾಯಕ ಪ್ರಾಧ್ಯಾಪಕರಾಗಲು ಇನ್ಮುಂದೆ PHD ಬೇಕಿಲ್ಲ !! NET-SET-SLET ಇದ್ದರೆ ಸಾಕು !!

latest news UGC PHD is not required to become Assistant Professor NET-SET-SLET is enough

UGC: ವಿಶ್ವವಿದ್ಯಾಲಯ(University) ಅಥವಾ ಇತರ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು(Assistant professor) ಇನ್ನುಮುಂದೆ ಪಿಎಚ್‌ಡಿ ಕಡ್ಡಾಯವಲ್ಲ. ಐಚ್ಛಿಕವಾಗಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಬುಧವಾರ ಪ್ರಕಟಿಸಿದೆ.

ಹೌದು, ಇನ್ಮುಂದೆ ಉನ್ನತ ಶಿಕ್ಷಣ(Higher education) ಸಂಸ್ಥೆಗಳಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆ ಪಡೆಯಲು ನೆಟ್‌, ಸೆಟ್‌ ಅಥವಾ ಸ್ಲೆಟ್‌ ಕನಿಷ್ಠ ಅಗತ್ಯ ಅರ್ಹತೆಯಾಗಿದೆ ಎಂದು ಯುಜಿಸಿ ಪ್ರಕಟಿಸಿದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET), ರಾಜ್ಯ ಅರ್ಹತಾ ಪರೀಕ್ಷೆ (SET) ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (SLET)ಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇರ ನೇಮಕಾತಿಗೆ ಕನಿಷ್ಠ ಮಾನದಂಡವಾಗಿರುತ್ತದೆ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ.

ಅಸಿಸ್ಟೆಂಟ್ ಪ್ರೊಫೆಸರ್ ಅರ್ಹತಾ ಮಾನದಂಡ:
ಜುಲೈ 1, 2023 ರಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ನೇರ ನೇಮಕಾತಿಗೆ ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ NET, SET ಅಥವಾ SLET ವಿದ್ಯಾರ್ಹತೆಯಾಗಿದೆ ಎಂದು ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಯುಜಿಸಿ ಗೆಜೆಟ್ ಹೇಳುವ ಪ್ರಕಾರ ‘NET/SET/SLET ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEIs) ಅಸಿಸ್ಟೆಂಟ್ ಪ್ರೊಫೆಸರ್ ನೇರ ನೇಮಕಾತಿಗೆ ಕನಿಷ್ಠ ಮಾನದಂಡವಾಗಿದೆ.’ ಇದರರ್ಥ ಜುಲೈ 2023 ರ ನಂತರ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಷ್ಕೃತ ಮಾನದಂಡಗಳನ್ನು ಮಾತ್ರ ಪೂರೈಸಬೇಕಾಗುತ್ತದೆ.

ಈ ಕುರಿತು ಜೂನ್‌ 30ರಂದು ಯುಜಿಸಿಯು(UGC) ಗೆಜೆಟ್‌ ಅಧಿಸೂಚನೆ ಪ್ರಕಟಿಸಿದ್ದು, “ವಿಶ್ವವಿದ್ಯಾಲಯ ಅನುದಾನ ಆಯೋಗ (ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಇತರ ಶೈಕ್ಷಣಿಕ ಸಿಬ್ಬಂದಿಗಳ ನೇಮಕಾತಿಗೆ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಇತರ ಕ್ರಮಗಳು) ನಿಯಮ 2018 ಪ್ರಕಾರ ತಿದ್ದುಪಡಿಗಳನ್ನು ಮಾಡಲಾಗಿದೆ” ಎಂದು ತಿಳಿಸಿದೆ.

ಹಳೆಯ ನಿಯಮ ಹೇಗಿತ್ತು?
ಹಿಂದಿನ ಯುಜಿಸಿ ನಿಯಮಗಳ ಪ್ರಕಾರ ಪಿಎಚ್.ಡಿ. ಪದವಿ ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ ಕಡ್ಡಾಯ ಅರ್ಹತೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಕಡ್ಡಾಯ ಅಂದರೆ ಇನ್ನು ಕೆಲವರು ಕಡ್ಡಾಯ ಅಲ್ಲ ಎನ್ನುತ್ತಿದ್ದರು. ಈ ಕುರಿತು ಗೊಂದಲವಿತ್ತು. ಸದ್ಯ ಇದೀಗ ಯುಜಿಸಿ ಯೇ ಈ ಬಗ್ಗೆ ಅಂತಿಮವಾಗಿ ನಿರ್ಧಾರ ಪ್ರಕಟಿಸಿದೆ.

 

 

ಇದನ್ನು ಓದಿ: HD Kumaraswamy: ನನ್ ಜೊತೆನೂ 5 ಲಕ್ಷ ಜನ ಸೆಲ್ಫಿ ತಗೊಂಡವ್ರೆ ಕುಮಾರಣ್ಣ, ನಿಮ್ ಕಡೆ 10 ಲಕ್ಷ ಸೆಲ್ಫಿ ಇರ್ಬೋದು – ಏನಿದು ಎಚ್‍ಡಿಕೆ-ಶಿವಲಿಂಗೇಗೌಡ ಸೆಲ್ಫಿ ಜಟಾಪಟಿ ?

Leave A Reply

Your email address will not be published.