Gruha jyothi Scheme: ಹೀಗೆ ಮಾಡ್ಲಿಲ್ಲ ಅಂದ್ರೆ 100 ಯುನಿಟ್ ಕರೆಂಟ್ ಬಳಸಿದ್ರೂ ಬಿಲ್ ಕಟ್ಬೇಕು !! ‘ಗೃಹಜ್ಯೋತಿ’ಗೆ ಸರ್ಕಾರದಿಂದ ಹೊಸ ರೂಲ್ಸ್ !!

Congress guarantee gruha Jyoti scheme update even if such if such people spend 100units of electricity they have to pay full amount

Gruha jyothi Scheme: ರಾಜ್ಯದಲ್ಲಿ ಜುಲೈ 1 ರಿಂದ ಪ್ರಾರಂಭವಾಗಿರುವ ಗೃಹ ಜ್ಯೋತಿ ಯೋಜನೆ(Gruha Jyothi Scheme) ಬಗ್ಗೆ ಪ್ರತಿಯೊಬ್ಬರು ಕೂಡ ಕಾತರರಾಗಿದ್ದಾರೆ. ಈ ವಿಚಾರದಲ್ಲಿ ಇನ್ನೂ ಕೆಲವರಿಗೆ ಗೊಂದಲವಿದೆ. ಆ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳು ಇಲ್ಲಿವೆ ನೋಡಿ.

ಹೌದು, ಕಾಂಗ್ರೆಸ್ ಸರಕಾರದ(Congress Government) ಪಂಚ ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಈಗಾಗಲೇ ರಾಜ್ಯಾದ್ಯಂತ ಜಾರಿಯಾಗಿದೆ. ಎಲ್ಲರೂ ಭರದಿಂದ ಅರ್ಜಿ ಹಾಕುತ್ತಿದ್ದಾರೆ. ಅರ್ಜಿ ಹಾಕಿದವರು ಮುಂದಿನ ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಈ ಬಗ್ಗೆ ಇಂಧನ ಸಚಿವ ಕೆ ಜೆ ಜಾರ್ಜ್(K J George) ಆಗಾಗ ಸುದ್ದಿಗೋಷ್ಠಿ ನಡೆಸಿ ಎಲ್ಲರಿಗೂ ಅರ್ಥವಾಗುವಂತೆ ಮಾಹಿತಿ ನೀಡುತ್ತಿರುತ್ತಾರೆ. ಆದರೂ ಕೆಲವರಿಗೆ ಗೊಂದಲಗಳು ಉಂಟಾಗಿದ್ದಾವೆ.

ಅಂದಹಾಗೆ ಈಗಾಗಲೇ ರಾಜ್ಯದ್ಯಂತ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ರಿಜಿಸ್ಟರ್(Register) ಮಾಡಿಕೊಳ್ಳಲು ಸೇವಾ ಕೇಂದ್ರಗಳಲ್ಲಿ ಹಾಗೂ ಆನ್ಲೈನ್ನಲ್ಲಿ ಸಂಪೂರ್ಣವಾಗಿ ಸರ್ವರ್ ಸಮಸ್ಯೆ ಇಲ್ಲದೆ ಅವಕಾಶವನ್ನು ನೀಡಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಿ ರಿಜಿಸ್ಟರ್ ಮಾಡಿಕೊಂಡರೆ ಮಾತ್ರ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್(Free Electricity) ಅನ್ನು ಪಡೆಯಲು ಸಾಧ್ಯ ಎಂಬುದಾಗಿ ಸಚಿವರು ಹೇಳಿದ್ದಾರೆ.

ಇಂಧನ ಇಲಾಖೆಯ ಈ ನಿಯಮವನ್ನು ಗಮನವಿಟ್ಟು ಓದಿ: ನೀವು ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ಜುಲೈ 25 ನಂತರ ಸಲ್ಲಿಸಿದರೆ ಅದು ಆಗಸ್ಟ್ ತಿಂಗಳಿಂದ ಎಂದು ಕೌಂಟ್ ಆಗುತ್ತದೆ. ಅದೇ ರೀತಿ, ನೀವು ಆಗಸ್ಟ್(August) 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ, ನೀವು ಆ ತಿಂಗಳಿಗೆ ನಿಮ್ಮ ಮಾಸಿಕ ಬಳಕೆಯು ಸರಾಸರಿ 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದಲ್ಲಿ ವಿದ್ಯುತ್ ಉಚಿತವಾಗಿ ಪಡೆಯಬಹುದು.

ಹಿಂಬಾಕಿ ಇದ್ದರೂ ಸಿಗುತ್ತೆ ಫ್ರೀ ಕರೆಂಟ್ !!
ಇದರೊಂದಿಗೆ ನಿಮಗೆ ಹಿಂದಿನ ಬಿಲ್ ಬಾಕಿ ಇದ್ದರೆ ಏನು ಮಾಡುವುದು. ಗೃಹಜ್ಯೋತಿ ಫಲಾನುಭವಿಗಳಾಗಲು ಸಾಧ್ಯವೇ? ಎಂಬ ಗೊಂದಲವೂ ಇರಬಹುದು. ಆದರೆ ಈ ಬಗ್ಗೆ ಯಾವುದೇ ಚಿಂತೆ ಬೇಡ. ಸಚಿವ ಜಾರ್ಜ್ ಕೂಡ ಈ ಬಗ್ಗೆ ವಿವರಿಸಿದ್ದು, ನೀವು ಹಳೇ ಬಾಕಿ ಹೊಂದಿದ್ದರೂ ಅಂದರೆ ಹಳೆಯ ಕರೆಂಟ್ ಬಿಲ್ ಕಟ್ಟದೆ ಉಳಿಸಿಕೊಂಡಿದ್ದರೂ ಕೂಡ ನಿಮಗೆ ಫ್ರೀ ಕರೆಂಟ್ ದೊರೆಯುತ್ತದೆ ಎಂದಿದ್ದಾರೆ. ಆದರೆ ಸೆಪ್ಟೆಂಬರ್ ಒಳಗಾಗಿ ಅದನ್ನು ಪಾವತಿಸಬೇಕು.

ಅರ್ಜಿ ಹಾಕಲು ಸಮಯದ ಗಡುವು ಇದೆಯೇ?
ಇನ್ನು ಅರ್ಜಿ ಹಾಕಲು ನಿಮಗೆ ಯಾವುದೇ ಗಡುವು ನೀಡಿಲ್ಲ. ಅಂದರೆ ಯಾವುದೇ ನಿರ್ದಿಷ್ಟ ಸಮಯವನ್ನು ನೀಡಿಲ್ಲ. ಯಾವಾಗ ಬೇಕಾದರೂ ಅರ್ಜಿ ಹಾಕಬಹುದು. ಆದರೆ ಆದಷ್ಟೂ ಬೇಗ ಅರ್ಜಿ ಹಾಕಿ. ಈಗಾಗಲೇ ಇದುವರೆಗೂ ಕೂಡ ಗ್ರಹ ಜ್ಯೋತಿ ಯೋಜನೆ ಅಡಿಯಲಿ 90.65 ಲಕ್ಷ ಜನರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಜೊತೆಗೆ ಇದೇ ಜುಲೈ 25ರೊಳಗೆ ಹಾಕಿ.

ಯಾವುದಕ್ಕೆಲ್ಲ ಬಳಸಬಹುದು?
ಇನ್ನು ಸರ್ಕಾರ ಕೊಡಮಾಡುವ ಕರೆಂಟ್ ಅನ್ನು ಕೇವಲ ಗೃಹೋಪಯೋಗಿಗಾಗಿ ಮಾತ್ರ ಬಳಸಬೇಕು. ಹಾಗಿದ್ದಲ್ಲಿ ಮಾತ್ರ ಉಚಿತ ವಿದ್ಯುತ್ ದೊರೆಯುತ್ತದೆ. ಇಲ್ಲ ವಾಣಿಜ್ಯ ಕಾರ್ಯಗಳಿಗೆಲ್ಲ ಬಳಸುವುದಾದರೆ ಫ್ರೀ ಕರೆಂಟ್ ಇಲ್ಲ. ಒಂದು ವೇಳೆ ಮನೆಗೆ ಬಿಟ್ಟು ಇತರೆ ಕಾರ್ಯಗಳಿಗೆ ಬೇರೆ ಚಟುವಟಿಕೆಗಳಿಗೆ ನೀವು 100ಯುನಿಟ್ ವಿದ್ಯುತ್ ಬಳಸಿದ್ರೂ ಬಿಲ್ ಕಟ್ಟಬೇಕಾಗುತ್ತೆ ಎಂದು ಸಚಿವರೇ ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: Adhar – Pan card : ಆಧಾರ್-ಪಾನ್ ವಿಚಾರವಾಗಿ ಬಂತು ಮತ್ತೊಂದು ಹೊಸ ರೂಲ್ಸ್ !! ಕೊನೇ ಕ್ಷಣದಲ್ಲಿ ಟ್ವಿಸ್ಟ್ ಕೊಟ್ಟ ಕೇಂದ್ರ !!

Leave A Reply

Your email address will not be published.