Love Jihad: ಇಬ್ಬರು ಹಿಂದೂ ಮಹಿಳೆಯರನ್ನು ಕಬ್ಜಾ ಮಾಡಿದ ಕಾಮುಕ ! ಮೂರನೆಯದಕ್ಕೆ ಗಾಳ ಹಾಕುವಾಗ ಪತ್ನಿಯೇ ಇಟ್ಲು ಬತ್ತಿ !

latest news Love Jihad man married two Hindu women and harassed them severely

Love Jihad: ಜಿಲಾನ್ ಖಾನ್ ಎಂಬ ವ್ಯಕ್ತಿ ಕಳೆದ 20 ವರ್ಷದಲ್ಲಿ ಇಬ್ಬರು ಹಿಂದೂ ಮಹಿಳೆಯರನ್ನು ಮದುವೆಯಾಗಿದ್ದಾನೆ (Love Jihad). ಮದುವೆ ಬಳಿಕ ಅವರಿಗೆ ತೀವ್ರ ಕಿರುಕುಳ ನೀಡಿದ್ದಾನೆ. ಇದಲ್ಲದೆ ಇದೀಗ ಮೂರನೇ ಮಹಿಳೆಯ ಜೊತೆ ಅಕ್ರಮ ಸಂಬಂಧ (Illegal Relationship) ಬೆಳೆಸಲು ಮುಂದಾಗಿದ್ದು, ಸದ್ಯ ಈತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 

ಇದೇ ಜಿಲ್ಲೆಯ ಜಗಳೂರು ತಾಲೂಕಿನ ದಿಬ್ಬದಹಳ್ಳಿ ಗ್ರಾಮದ ಮಹಿಳೆಯನ್ನು ಮದುವೆಯಾಗಿದ್ದ. ಈಕೆಗೆ ಇದು ಎರಡನೇ ಮದುವೆ. ಮೊದಲು ಪತಿ ತೀರಿಹೋಗಿದ್ದ. ಆನಂತರ ಒಂಟಿಯಾಗಿ ಬದುಕುತ್ತಿದ್ದರು. ಹಾಗಾಗಿ ಮಹಿಳೆಯನ್ನು ಪುಸಲಾಯಿಸಿ ಜಿಲಾನ್ ಖಾನ್ ಆಕೆಯನ್ನು ಮದುವೆಯಾಗಿದ್ದ. ಮದುವೆಯಾದ ಬಳಿಕ ಆಕೆಯ ಹೆಸರಲ್ಲಿ ಸಾಕಷ್ಟು ಸಾಲ ಮಾಡಿ, ಆಕೆಗೆ ಬಲವಂತವಾಗಿ ಆಕೆಗೆ ಬುರ್ಖಾ ಧರಿಸುವಂತೆ ನೀಡಿ ಕಿರುಕುಳ ನೀಡುತ್ತಿದ್ದ.

ಇಷ್ಟಲ್ಲದೆ, ಆಕೆಯ ನಗ್ನ ದೇಹದ ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸಿ ಹಣ ಪಡೆಯುತಿದ್ದ. ಆ ಮಹಿಳೆಯ ಪೋಟೋ ಬಳಸಿ ನಕಲಿ ಪೊಲೀಸ್ ಐಡಿ ಸೃಷ್ಟಿ ಮಾಡಿ ಅಕ್ರಮಕ್ಕೆ ಬಳಕೆ ಮಾಡುತ್ತಿದ್ದ ಎನ್ನಲಾಗಿದೆ.

ಹಿಂದೂ ಪತ್ನಿ ಇರುವಾಗಲೇ ಜಿಲಾನ್ ಖಾನ್ ಮತ್ತೆ ಬೇರೊಬ್ಬ ಹಿಂದೂ ಮಹಿಳೆಯ ಜೊತೆ ಮೂರನೇ ಅಕ್ರಮ ಸಂಬಂಧ ಬೆಳೆಸಿ ಮೋಸ ಮಾಡಲು ಯತ್ನಿಸುತ್ತಿದ್ದ. ಪತಿಯ ಅಕ್ರಮ ಸಂಬಂಧ ತಿಳಿದ
ಎರಡನೇ ಹೆಂಡತಿ ಎಚ್ಚೆತ್ತುಕೊಂಡಿದ್ದಾಳೆ. ಆಕೆಗೂ ತನ್ನಂತೆಯೆ ಪಾಡು ಬೇಡ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಾದ ಒಂದು ಗಂಟೆಯಲ್ಲೇ ಜಿಲಾನ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಹಿಂದುತ್ವಪರ ಸಂಘಟನೆಗಳು ಜಿಲಾನ್ ಖಾನ್‌ಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Leave A Reply

Your email address will not be published.