Women beauty salon: ದೇಶಾದ್ಯಂತ ಮಹಿಳೆಯರ ಎಲ್ಲಾ ಬ್ಯೂಟಿ ಪಾರ್ಲರ್ ಬಂದ್ !! ಸರ್ಕಾರದ ಹೊಸ ಆದೇಶ !!

latest news All women's beauty parlors across the country are closed

Women beauty salon: ಮಹಿಳೆಯರ(Womens) ಕುರಿತಾಗಿ ಸದಾ ಒಂದೊಂದು ನಿಷೇಧಗಳನ್ನು ಹೇರುವ ತಾಲಿಬಾನ್ ಸರ್ಕಾರವು(Taliban Government) ದೇಶದಲ್ಲಿ ಮಹಿಳೆಯರ ಎಲ್ಲಾ ಬ್ಯೂಟಿ ಸೆಲೂನ್(Women beauty salon) ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿ ಅಚ್ಚರಿ ಮೂಡಿಸಿದೆ.

ಈ ಹಿಂದೆ ಮುಸ್ಲಿಂ ಹುಡುಗಿಯರು(Muslim girls) ಹಾಗೂ ಯುವತಿಯರು ಶಾಲೆ-ಕಾಲೇಜುಗಳಿಗೆ(School collage) ಹೋಗುವುದು, ಎನ್‌ಜಿಒಗಳಲ್ಲಿ(NGO) ಕೆಲಸ ಮಾಡುವುದನ್ನ ತಾಲಿಬಾನ್‌ ಸರ್ಕಾರ ನಿಷೇಧಿಸಿತ್ತು. ಆ ನಂತರ ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದು, ಪಾರ್ಕ್‌ಗೆ ಹೋಗುವುದು, ಚಿತ್ರಮಂದಿರ ಮತ್ತು ಇತರ ಮನರಂಜನಾ ಪ್ರದೇಶಗಳಿಗೆ ಹೋಗುವುದಕ್ಕೂ ಬ್ರೇಕ್‌ ಹಾಕಿದೆ. ಇದೀಗ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ ಆದೇಶ ಹೊರಡಿಸಿದೆ.

ಹೌದು, ಅಫ್ಘಾನಿಸ್ತಾನದಲ್ಲಿರುವ(Afghanistan) ತಾಲಿಬಾನ್‌ ಸರ್ಕಾರ ಇದೀಗ ಕಾಬೂಲ್‌ ಸೇರಿದಂತೆ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ (Women Beauty Salons) ನಿಷೇಧಿಸುವಂತೆ ಆದೇಶಿಸಿದೆ. ತಾಲಿಬಾನ್(Taliban) ಸಚಿವಾಲಯದ ವಕ್ತಾರ ಮೊಹಮ್ಮದ್ ಅಕಿಫ್ ಮಹಜರ್ ಕೂಡಲೇ ಮಹಿಳೆಯರ ಬ್ಯೂಟಿ ಸಲೊನ್‌ಗಳನ್ನ ನಿಷೇಧಿಸಲು ಆದೇಶ ಹೊರಡಿಸುವಂತೆ ಕಾಬೂಲಿನ ಮುನ್ಸಿಪಾಲಿಟಿಗೆ ಸೂಚಿಸಿದ್ದಾರೆನ್ನಲಾಗಿದೆ.

ಸದ್ಯ ಸರ್ಕಾರದ ನಡೆಯ ವಿರುದ್ಧ ಇದೀಗ ಆಕ್ರೋಶ ಕೇಳಿಬರುತ್ತಿದೆ. ‘ಪುರುಷರಿಗೆ ಉದ್ಯೋಗವಿದ್ದರೆ ನಾವು ಮನೆಯಿಂದ ಹೊರಬರುವುದಿಲ್ಲ. ಆದ್ರೆ ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡೋದು? ನಾವು ಹಸಿವಿನಿಂದ ಸಾಯುವಂತ ಪರಿಸ್ಥಿತಿ ಬಂದಿದೆ. ಅದನ್ನೇ ನೀವು ಬಯಸುತ್ತಿದ್ದೀರಿ’ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮೇಕಪ್‌ ಕಲಾವಿಧ ರೈಹಾನ್ ಮುಬಾರಿಜ್ ಅವರು ‘ಈ ನಡುವೆ ಪುರುಷರು ನಿರುದ್ಯೋಗಿಗಳಾಗಿದ್ದಾರೆ, ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಹಿಳೆಯರು ಒಂದೊತ್ತಿನ ಊಟಕ್ಕಾಗಿ ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಮಾಡಲು ಹೋಗ್ತಿದ್ದಾರೆ. ಅದನ್ನೂ ನಿಷೇಧಿಸಿದ್ರೆ ನಾವೇನು ಮಾಡಬೇಕು? ಎಂದಿದ್ದಾರೆ.

 

 

Leave A Reply

Your email address will not be published.