Karnataka Legislature Session: ಪಂಚ ಯೋಜನೆಗಳನ್ನು ಸಮರ್ಥಿಸಿ, ಕೇಂದ್ರದ ವಿರುದ್ಧ ಗುಡುಗಿದ ಗೆಹ್ಲೋಟ್!! ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದ ಬೊಮ್ಮಾಯಿ!!

latest news Karnataka Legislature Session Bommai said the governor's speech was a lie

Legislature Session: ರಾಜ್ಯಲ್ಲಿ ಇಂದಿನಿಂದ (ಜು.02) 16ನೇ ವಿಧಾನಸಭೆಯ ಮೊದಲ ಅಧಿವೇಶನ (Legislature Session) ಆರಂಭವಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ಆದರೆ ಈ ಭಾಷಣ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, 10 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ. ಇದು ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನಗಳನ್ನು ಉದ್ದೇಶಿಸಿ ಮಾತನಾಡಿದ್ದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ. ಯಾಕೆಂದರೆ ‘ಹಸಿದವರಿಗೆ ಅನ್ನ ನೀಡದ ಸರ್ಕಾರ ಜನದ್ರೋಹಿ ಸರ್ಕಾರವೆಂದು ಕರೆಸಿಕೊಳ್ಳುತ್ತದೆ ಎಂದು ರಾಜಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಪರೋಕ್ಷವಾಗಿ ಕೇಂದ್ರ ಸರ್ಕಾರದ (Union Government) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಹೌದು, ರಾಜ್ಯವನ್ನ ಆರ್ಥಿಕ ಸಂಕಷ್ಟದ ಸ್ಥಿತಿಯಿಂದ ಮೇಲೆತ್ತುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ. ರಾಜ್ಯದಲ್ಲಿ ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಹೊಸ ಆಡಳಿತ ಮಾದರಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ರಾಜ್ಯ ಸರ್ಕಾರ(Sate Government) 5 ಗ್ಯಾರಂಟಿ ಯೋಜನೆಗಳ ಮೂಲಕ ಇದನ್ನ ಸಾಧಿಸಲು ಹೊರಟಿದೆ. ಇದರ ಅನುಷ್ಠಾನವನ್ನ ಶ್ರದ್ಧೆಯಿಂದ ಸರ್ಕಾರ ಮಾಡಲಿದೆ. ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ ಎಂದು ಅಸಮಾಧಾನ ಹೊರಹಾಕಿದರು. ಈ ಮೂಲಕ ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ(Central Government) ಟಾಂಗ್‌ ಕೊಟ್ಟಿದ್ದಾರೆ.

ಗ್ಯಾರಂಟಿ ಯೋಜನೆಗಳ ಪ್ರಸ್ತಾಪ
ಆಹಾರ ಭದ್ರತೆ ಕಾಯ್ದೆ ಅಡಿ ಪ್ರಸ್ತುತ 5 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಸೇರಿ 10 ಕೆಜಿ ಕೊಡುತ್ತಿದ್ದು, ರಾಜ್ಯವನ್ನು ಹಸಿವು ಮುಕ್ತ ಮಾಡಲಿದ್ದೇವೆ. ಪ್ರತಿ ಕೆಜಿಗೆ 34 ರೂಪಾಯಿ ವರ್ಗಾವಣೆ ಮಾಡುತ್ತೇವೆ. ಇದಕ್ಕಾಗಿ ಯಾವುದೇ ತ್ಯಾಗ ಮಾಡುತ್ತೇವೆ. ಅನ್ನ ನೀಡದ ಸರ್ಕಾರವನ್ನ ಜನ ದ್ರೋಹಿ ಸರ್ಕಾರ ಎನ್ನುತ್ತಾರೆ. ಆದರೆ ಇಂದಿರಾ ಕ್ಯಾಂಟಿನ್(Indira canteen) ಮೂಲಕ ಜನರ ಹೊಟ್ಟೆ ತುಂಬಿಸಿದ್ದೇವೆ. ಯುವ ನಿಧಿ ಈಗಾಗಲೇ ಘೋಷಣೆ ಮಾಡಿದ್ದು, ಯುವನಿಧಿ‌ ಮೂಲಕ ನಿರುದ್ಯೋಗಿಗಳಿಗೆ ಭತ್ಯೆ ನೀಡುತ್ತೇವೆ. ಗೃಹಜ್ಯೋತಿಗೆ ೨೦೯ ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದೇವೆ. 2.14 ಕೋಟಿ ಕುಟುಂಬಗಳಿಗೆ ಈ ಯೋಜನೆ ಲಾಭವಾಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದೇವೆ. ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಮನೆಯ ಮುಖ್ಯಸ್ಥೆ ಮಹಿಳೆಗೆ ನೀಡುತ್ತೇವೆ ಎಂದು ರಾಜ್ಯಪಾಲ ಗೆಹ್ಲೋಟ್ ಭಾಷಣದಲ್ಲಿ ತಿಳಿಸಿದರು.

ಅಲ್ಲದೆ ಇನ್ನೂ ಭ್ರಷ್ಟಾಚಾರ ನಿರ್ಮೂಲನೆ, ಸಾಮಾಜಿಕ ನ್ಯಾಯ ಪಾಲನೆ ಸರ್ಕಾರದ ಗುರಿಯಾಗಿದೆ. ಏಕೆಂದರೆ ಇಂದು ಜನಸಂಖ್ಯೆಯ ಬಹುಭಾಗ ಸುಶಿಕ್ಷಿತವಾಗುತ್ತಿದ್ದಂತೆ ಅತ್ಯಾಧುನಿಕ ತಂತ್ರಜ್ಞಾನ ಬೆಳಯುತ್ತಿದ್ದು, ಜನರ ದುಷ್ಟ ಚಿಂತನೆಗಳು ಜಗತ್ತಿನಲ್ಲಿ ತಾಂಡವವಾಡುತ್ತಿವೆ. ಸಮಾಜದಲ್ಲಿ ಸಾಮರಸ್ಯ ಕದಡುವ ಗುಣವುಳ್ಳ ಬೆರಳೆಣಿಕೆಯ ಚಿಂತನೆಗಳು ತಲೆಯೆತ್ತುತ್ತಿವೆ. ಆದ್ದರಿಂದ ಜನರನ್ನ ಪರಸ್ಪರ ಬೆಸೆಯುವ ಕ್ರಮಗಳನ್ನು ಸರ್ಕಾರ ಕೈಗೊಳ್ಳುವುದು ಅವಶ್ಯಕವಿದೆ ಎಂದು ಹೇಳಿದ್ದಾರೆ.

ಇದಿಷ್ಟೇ ಅಲ್ಲದೆ ನೂತನ ಕಾಂಗ್ರೆಸ್(Congress) ಸರ್ಕಾರವನ್ನು ಹಾಡಿ ಹೊಗಳಿದ ರಾಜ್ಯಪಾಲರು ಕಳೆದ 34 ವರ್ಷಗಳಲ್ಲಿ ಯಾರಿಗೂ ಇಷ್ಟು ದೊಡ್ಡ ಬಹುಮತ ಸಿಕ್ಕಿರಲಿಲ್ಲ. ಯಾರಿಗೂ ನೀಡದ ಬಹುಮತದೊಂದಿಗೆ ಜನ ಈ ಸರ್ಕಾರವನ್ನ ಆಯ್ಕೆ ಮಾಡಿದ್ದಾರೆ. ಹಾಗಾಗಿ ಜನಕೇಂದ್ರಿತ ಅರ್ಥ ವ್ಯವಸ್ಥೆ, ಜನಕೇಂದ್ರಿತ ಶಾಸನಗಳನ್ನ ಈ ಸರ್ಕಾರ ಜಾರಿಗೊಳಿಸುತ್ತೆ. ಎಲ್ಲ ಸಮುದಾಯಗಳ ಜೊತೆಗೆ ಅಭಿವೃದ್ಧಿ ಹಾದಿಯಲ್ಲಿ ಕೊಂಡೊಯ್ಯುವ ಮೂಲಕ ಸೌಹಾರ್ದಯುತ ಸಂದೇಶವನ್ನ ಸರ್ಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಇದನ್ನು ಓದಿ: Oben Rorr Electric Bike: 190 ಕಿ. ಮೀ. ಗಳ ನಾಗಾಲೋಟ ಓಡುವ ಈ ಬೈಕಿನ ಲೆವೆಲ್ಲೇ ಬೇರೆ ! ಕೇವಲ 30 ಡೌನ್ ಪೇಮೆಂಟ್ ಮಾಡಿದ್ರೆ ಬೈಕ್ ಮನೆ ಮುಂದೆ !

Leave A Reply

Your email address will not be published.