Free bus Scheme: ‘ಶಕ್ತಿ ಯೋಜನೆ’ ಸಕ್ಸಸ್ ಬೆನ್ನಲ್ಲೇ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್ !! ಇದನ್ನು ನೀವು ಊಹಿಸಲೂ ಅಸಾಧ್ಯ !!

latest news Free bus Scheme Another Good News by the Government on afer the success of 'Shakti scheme'

Free bus Scheme: ಕಾಂಗ್ರೆಸ್ ಸರ್ಕಾರ(Congress Government) ತನ್ನ 5 ಗ್ಯಾರಂಟಿಗಳಲ್ಲಿ ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ(Gruha jyothi) ಯೋಜನೆ ಹಾಗೂ ಅನ್ನ ಭಾಗ್ಯ ಯೋಜನೆಗಳಿಗೆ ಚಾಲನೆಯನ್ನು ನೀಡಿದೆ. ಈ ಯೋಜನೆಗಳಲ್ಲಿ ಶಕ್ತಿ ಯೋಜನೆಗೆ ಭಾರೀ ರೆಸ್ಪಾನ್ಸ್(Responce) ಬರುತ್ತಿದೆ. ಆದರೆ ಆರಂಭದಲ್ಲಿ ಇದರಿಂದ ರಾಜ್ಯಕ್ಕೆ ಭಾರೀ ನಷ್ಟ, ಸಾರಿಗೆ ಸಂಸ್ಥೆ ಮುಚ್ಚಲ್ಪಡುತ್ತದೆ ಎಂದೆಲ್ಲಾ ಕೂಗುಗಳು ಕೇಳಿಬಂದಿತ್ತು. ಈ ಬೆನ್ನಲ್ಲೇ ಸರ್ಕಾರ ‘ಶಕ್ತಿ ಯೋಜನೆ’ ಬಗ್ಗೆ ಗುಡ್ ನ್ಯೂಸ್(Good news) ಒಂದನ್ನು ನೀಡಿದೆ.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್(Free bus Scheme) ಪ್ರಯಾಣ ಕಲ್ಪಿಸಿದಾಗ ಈ ಬಗ್ಗೆ ಸಾಕಷ್ಟು ವಿರೋಧ ಎದುರಾಗಿತ್ತು. ಇನ್ನೇನು ಸಾರಿಗೆ ಇಲಾಖೆಯನ್ನು ಮುಚ್ಚಲೇ ಬೇಕಾಗುತ್ತದೆ ಎಂದು ಹಲವರು ಹೇಳಿದ್ದರು. ಆದರೆ ಸರ್ಕಾರ ಇದೆಲ್ಲದಕ್ಕೂ ತೆರೆ ಎಳೆದು ಸಾಕ್ಷಿ ಸಮೇತ ಉತ್ತರ ನೀಡಿದೆ. ಹೌದು, ಶಕ್ತಿ ಯೋಜನೆ (Shakthi Scheme) ಜಾರಿಯಾದಾಗಿನಿಂದ ಇಲ್ಲಿಯವರೆಗೂ ಉಚಿತವಾಗಿ 10 ಕೋಟಿಗೂ ಅಧಿಕ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದ ಪುರುಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಅನ್ನೋ ಮಾತುಗಳಿದ್ದವು. ಆದರೀಗ ದೈನಂದಿನ ಓಡಾಟ ಮಾಡುತ್ತಿದ್ದ ಪುರುಷರ ಸಂಖ್ಯೆಗಿಂತಲೂ ಹೆಚ್ಚು ಪುರುಷರು ಪ್ರಯಾಣ ಮಾಡ್ತಿದ್ದಾರೆ. ಇಷ್ಟೇ ಅಲ್ಲದೆ ಸಾರಿಗೆ ಬಸ್ ನಲ್ಲಿ ಪುರುಷರ ಓಡಾಟದಿಂದ ಬರ್ತಿರುವ ಆದಾಯವೂ ಡಬಲ್ ಆಗಿದೆಯಂತೆ!!

ಹೌದು, ಸಿದ್ದರಾಮಯ್ಯ ನೇತೃತ್ವದಲ್ಲಿ ಶಕ್ತಿ ಯೋಜನೆ (Shakthi Yojana) ಆರಂಭವಾದಾಗಿನಿಂದಲೂ ಕೂಡ ಸಾರಿಗೆ ಇಲಾಖೆ ಆದಾಯದಲ್ಲಿ 18.01 ಪ್ರತಿಶತ ಹೆಚ್ಚಳ ಕಂಡಿದೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ಸಾರಿಗೆ ಇಲಾಖೆಯೇ ಖಚಿತಪಡಿಸಿದೆ. ಅಲ್ಲದೆ ಸಾರಿಗೆ ಇಲಾಖೆಯ ಪ್ರಮುಖ ನಾಲ್ಕು ಅಂಗ ಸಂಸ್ಥೆಗಳಾಗಿರುವ KSRTC, NWKRTC, BMTC ಹಾಗೂ KKRTC ಲಾಭದಲ್ಲಿವೆ ಎಂಬುದಾಗಿ ಕೂಡ ಸುದ್ದಿಗಳು ಕೇಳಿಬಂದಿವೆ.

ಅಂದಹಾಗೆ ಶಕ್ತಿಯೋಜನೆ ಜಾರಿಗೂ ಮುನ್ನ ನಿತ್ಯ 42 ಲಕ್ಷ ಪುರುಷರು ಸಾರಿಗೆ ಬಸ್‍ನಲ್ಲಿ (Male Passengers In Govt Bus) ಸಂಚರಿಸುತ್ತಿದ್ದರು. ಆದರೆ ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಸರಾಸರಿ 55 ಲಕ್ಷ ಪುರುಷರ ಓಡಾಟ ಜಾಸ್ತಿಯಾಗಿದೆ. ಅಂದರೆ ದಿನಕ್ಕೆ ಸರಾಸರಿ 13 ಲಕ್ಷ ಹೆಚ್ಚಳವಾಗಿದ್ದು, ಗಮನಾರ್ಹ ಬೆಳವಣಿಗೆಯಾಗಿದೆ.

ಪುರುಷ ಪ್ರಯಾಣಿಕರ ಓಡಾಟ ಸಂಖ್ಯೆ ಹೆಚ್ಚಾದಂತೆ ಆದಾಯ ಕೂಡ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಗೆ ಕಳೆದ 19 ದಿನದಲ್ಲಿ ಪುರುಷರ ಪ್ರಯಾಣದಿಂದ 302 ಕೋಟಿ ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 24.48 ಕೋಟಿ ಆದಾಯ ಬರುತ್ತಿತ್ತು. ಆಗ ಪುರುಷರ ಓಡಾಟದಿಂದ ಸಾರಿಗೆ ಸಂಸ್ಥೆಗೆ 12 ಕೋಟಿ ಆದಾಯ ಬರುತ್ತಿತ್ತು. ಈಗ 16.87 ಕೋಟಿ ಗೆ ಗಂಡಸರ ಸಂಚಾರದ ಆದಾಯ ಹೆಚ್ಚಾಗಿದೆ. ಒಟ್ಟಾರೆ ಒತ್ತಡ, ರಶ್, ಗಲಾಟೆ ಗದ್ದಲ ನಡುವೆಯೂ ಹೆಚ್ಚಿನ ಪುರುಷರು ಸಾರಿಗೆ ಬಸ್ ನಲ್ಲಿ ಓಡಾಡಿ, ನಿಗಮಗಳಿಗೆ ಇನ್ನಷ್ಟು ಲಾಭ ಹೆಚ್ಚಿಸಿರೋದು ನಿಜಕ್ಕೂ ವಿಶೇಷವೇ ಸರಿ.

ಯಾವ ಸಾರಿಗೆ ಸಂಸ್ಥೆಗೆ ಎಷ್ಟು ಲಾಭ?
• KSRTC ದೈನಂದಿನ ಆದಾಯ 9m95 95 ಕೋಟಿ ಇತ್ತು. ಇದೀಗ 11.51 ಕೋಟಿ ರೂಪಾಯಿಗೆ ಹೆಚ್ಚಳ ಕಂಡಿದೆ.
• BMTC ದೈನಂದಿನ ಆದಾಯ 4.72 ಕೋಟಿ ರೂಪಾಯಿಯಿಂದ 5.18 ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ.
• NWKRTC ದಿನದ ಆದಾಯ 4.9 ಕೋಟಿ ರೂಪಾಯಿಯಿಂದ 6.43 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.

Leave A Reply

Your email address will not be published.