Home News Anna bhagya Scheme: BPL ಕಾರ್ಡ್‌ದಾರರಿಗೆ ಬಿಗ್ ಶಾಕ್‌! ಇವರಿಗೆ ಯಾವುದೆ ಕಾರಣಕ್ಕೂ ಸಿಗೋದಿಲ್ಲ ಅನ್ನಭಾಗ್ಯದ...

Anna bhagya Scheme: BPL ಕಾರ್ಡ್‌ದಾರರಿಗೆ ಬಿಗ್ ಶಾಕ್‌! ಇವರಿಗೆ ಯಾವುದೆ ಕಾರಣಕ್ಕೂ ಸಿಗೋದಿಲ್ಲ ಅನ್ನಭಾಗ್ಯದ ಹಣ.. !! ಇಂದಿನಿಂದಲೇ ಸರ್ಕಾರದ ಆದೇಶ!!

Hindu neighbor gifts plot of land

Hindu neighbour gifts land to Muslim journalist

Anna bhagya Scheme: ಕಾಂಗ್ರೆಸ್ ಸರ್ಕಾರ (Congress Govt) ವಿಧಾನಸಭೆ ಚುನಾವಣೆಗೂ(Assembly election) ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Five Guarantees) ಪೈಕಿ ಅನ್ನ ಭಾಗ್ಯ ಯೋಜನೆಯೂ ಒಂದು. ಇಂದಿನಿಂದ ಈ ‘ಅನ್ನಭಾಗ್ಯ’ (Anna bhagya Scheme ) ಜಾರಿಯಾಗಿ ಸರ್ಕಾರ ಹೇಳಿದಂತೆ ಜನರಿಗೆ ಅಕ್ಕಿ ಹಾಗೂ ಖಾತೆಗೆ ಹಣ ಬಂದು ಬೀಳಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಇಂದು ಹಣ ನೀಡಲಾಗದು, ತಡವಾಗುತ್ತದೆ ಎಂದಿದ್ದಾರೆ. ಈ ನಡುವೆ ರೆಷನ್ ಕಾರ್ಡ್ ದಾರರಿಗೆ ತಲೆಬಿಸಿಯೊಂದು ಎದುರಾಗಿದೆ.

ಅನ್ನಭಾಗ್ಯ ಯೋಜನೆ(Anna bhagya Scheme) ರಾಜ್ಯದಲ್ಲಿ ಶನಿವಾರದಿಂದ ಜಾರಿಗೆ ಬರಲಿದ್ದು, ಶನಿವಾರದಿಂದಲೇ ಫಲಾನುಭವಿಗಳಿಗೆ ಅಕ್ಕಿ ಜೊತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೀಗ ಎಲ್ಲಾ ಬಿಪಿಎಲ್(BPL) ಕಾರ್ಡುದಾರರಿಗೆ ಈ ಹಣ ಸಿಗುತ್ತೆ. ಆದರೆ, ಬಿಪಿಎಲ್ ಕಾರ್ಡುಗಳನ್ನು ಹೊಂದಿರುವ 1.78 ರೇಷನ್ ಕಾರ್ಡುಗಳಿವೆ. ಅವರಲ್ಲಿ ಸುಮಾರು 6 ಲಕ್ಷ ಕಾರ್ಡುದಾರರ ಬ್ಯಾಂಕ್ ಖಾತೆಗಳಿಗೆ ಹಣ ಬಹುವುದು ಅನುಮಾನ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೌದು, ಯಾಕೆಂದರೆ ರೆಷನ್ ಕಾರ್ಡ್(Ration card) ಹೊಂದಿರುವ ಫಲಾನುಭವಿಗಳು ಬ್ಯಾಂಕ್ ಖಾತೆಗೆ ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು. ಇದು ಕಡ್ಡಾಯ. ಒಂದು ವೇಳೆ ಲಿಂಕ್ ಆಗದೇ ಇದ್ದರೆ ಅಕ್ಕಿಯ ಹಣ ಸಿಗುವುದಿಲ್ಲ. ಸರ್ಕಾರ ಇಷ್ಟು ಹೇಳಿದರೂ ಕೂಡ ಇನ್ನೂ 6 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ದಾರರು ತಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲ. ಅದೇ ಕಾರಣಕ್ಕಾಗಿಯೇ ಅವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದು ಸದ್ಯದ ಮಟ್ಟಿಗೆ ಅಸಾದ್ಯವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಅಲ್ಲದೆ ಈ ನಡುವೆ ಅನ್ನಭಾಗ್ಯದ(Anna bhagya) ಬಗ್ಗೆ ಪ್ರತಿಕ್ರಿಯಿಸಿ ಜುಲೈ ತಿಂಗಳ ಅಕ್ಕಿ ಬದಲಿಗೆ ದುಡ್ಡನ್ನು ಜುಲೈ 1 ರಂದೇ ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು. ಜುಲೈ 10ರ ನಂತರ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ BPL ಬಳಕೆ ದಾರರಿಗೆ ಇನ್ನೂ ಸಮಯವಕಾಶವಿದೆ. ಆದಷ್ಟೂ ಬೇಗ ನಿಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಿಸಿ.

ಅಂದಹಾಗೆ ಇದೀಗ ಹೋಬಳ್ಳಿ ಮಟ್ಟದಲ್ಲಿ ಹಾಗೂ ಪೋಸ್ಟ್‌ ಆಫೀಸ್‌ಗಳಲ್ಲೂ ಬ್ಯಾಂಕಿಂಗ್‌ ವ್ಯವಸ್ಥೆಯಿದೆ. ಫಲಾನುಭವಿಗಳು ಬೇಗನೇ ಖಾತೆ ಮಾಡಿಕೊಳ್ಳಬಹುದು. ಖಾತೆ ಹೊಂದಿದವರು ಶೀಘ್ರವೇ ಆಕ್ಟೀವ್‌ ಮಾಡಿಸಿಕೊಂಡರೆ, ಮುಂದಿನ ತಿಂಗಳಿಂದಲೇ ಹಣ ಜಮೆಯಾಗಲಿದೆ. ನಾಳೆ ಯೋಜನೆ ಜಾರಿಯಾದರೆ ಸಾಂಕೇತಿಕವಾಗಿ ಖಾತೆಗೆ ಹಣ ಹಾಕಬಹುದು ಎಂದು ಹೇಳಿದ್ದಾರೆ.

ಇನ್ನು ಯೋಜನೆಯಡಿ, ಒಬ್ಬರು ಸದಸ್ಯರಿರುವ ಕುಟುಂಬಕ್ಕೆ 5 ಕೆಜಿ ಅಕ್ಕಿ, ಇಬ್ಬರು ಸದಸ್ಯರಿರುವ ಕುಟುಂಬಕ್ಕೆ 10 ಕೆಜಿ, ಐದಕ್ಕಿಂತ ಹೆಚ್ಚು ಜನರಿರುವ ಕುಟುಂಬಕ್ಕೆ 25 ಕೆಜಿ ಅಕ್ಕಿ ನಿಗದಿಪಡಿಸಲಾಗಿದೆ. ಒಂದು ಕೆಜಿ ಅಕ್ಕಿಗೆ 34 ರೂ.ಗಳಿಂತೆ ಈ ಕುಟುಂಬಗಳಿಗೆ ಕ್ರಮವಾಗಿ 170 ರೂ., 340 ರೂ. ಹಾಗೂ 850 ರೂ.ಗಳನ್ನು ನೀಡಲಾಗುತ್ತದೆ.

 

ಇದನ್ನು ಓದಿ: Height Weight Chart: ಮಕ್ಕಳು, ಸ್ತ್ರೀಯರು ಯಾವ ವಯಸ್ಸಿಗೆ ಎಷ್ಟು ಎತ್ತರ -ತೂಕ ಹೊಂದಿರಬೇಕು ? ಬಂತು ನೋಡಿ ಅಲ್ಟಿಮೇಟ್ ಚಾರ್ಟ್ !