Hyderabad: ಸಿನಿಮಾ ರಿವ್ಯೂಗೆ ಬರುವ ಯೂ ಟ್ಯೂಬರ್ ಗಳ ಮೇಲೆ ಬ್ಯಾನ್ ಬ್ರಹ್ಮಾಸ್ತ್ರ, ಇದಕ್ಕೆ ಅದೇ ಕಾರಣ !

latest news cinima news Hyderabad Ban on YouTubers coming to movie reviews

Hyderabad: ಸಿನಿಮಾ ರಿಲೀಸ್ ಆಗುವುದೇ ತಡ ಚಿತ್ರಮಂದಿರಗಳಿಗೆ ಜನರ ದಂಡೇ ಬರುತ್ತದೆ. ಅಷ್ಟೇ ಅಲ್ಲ, ಸುದ್ದಿವಾಹಿನಿಗಳು ಹಾಗೂ ಯೂಟ್ಯೂಬರ್ಗಳ ಗುಂಪು ಬಂದು ಸೇರುತ್ತದೆ. ಇತ್ತೀಚೆಗೆ ಯೂಟ್ಯೂಬರ್ಸ್ ಸಂಖ್ಯೆ ಹೆಚ್ಚಾಗಿದ್ದು, ಸಿನಿಮಾ ವಿಚಾರಕ್ಕೆ ಸಂಬಂಧಿಸಿ ಹಲವು ಯೂಟ್ಯೂಬ್ ಚಾನೆಲ್​ಗಳು ಹುಟ್ಟಿಕೊಂಡಿವೆ. ಇವರು ಸಿನಿಮಾ ಥಿಯೇಟರ್ ನಿಂದ ಹೊರ ಬರುವ ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಅಭಿಪ್ರಾಯವನ್ನು ಕೇಳುತ್ತಾರೆ.‌ ಅಭಿಮಾನಿಗಳಿಗೆ ಮೈಕ್ ಹಿಡಿದು ಸಿನಿಮಾ ವಿಮರ್ಶೆ ಕೇಳುವುದು ಈಗಂತೂ ಟ್ರೆಂಡ್ ಆಗಿಬಿಟ್ಟಿದೆ. ಆದರೆ, ಇದರಿಂದ ಕೆಲ ಪ್ರೇಕ್ಷಕರಿಗೆ ಕಿರಿಕಿರಿ ಆದ ಉದಾಹರಣೆಯೂ ಇದೆ.

ಇತ್ತೀಚೆಗೆ ಹೈದರಾಬಾದ್‌ನ (Hyderabad) ಪ್ರಸಾದ್ ಮಲ್ಟಿಪ್ಲೆಕ್ಸ್ ಥಿಯೇಟರ್ನಲ್ಲಿ (Prasad Multiplex) ‘ಆದಿಪುರುಷ್’ ಸಿನಿಮಾ (Adipurush Movie) ಬಗ್ಗೆ ಅಸಮಾಧಾನ ತಿಳಿಸಿದವನ ಮೇಲೆ ಹಲ್ಲೆ ನಡೆದ ಘಟನೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿಯು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.ಪ್ರಸಾದ್ ಐಮ್ಯಾಕ್ಸ್‌ನ (Prasad IMAX) ಆಡಳಿತವು ತಮ್ಮ ಆವರಣದಲ್ಲಿ ವಿಮರ್ಶೆಗಳು ಮತ್ತು ಅಭಿಪ್ರಾಯಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನುಮುಂದೆ ಯೂಟ್ಯೂಬರ್ಸ್(Youtubers) ಥಿಯೇಟರ್ ಆವರಣ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. ತಮ್ಮ ಆವರಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಯಂಗ್ ರೆಬಲ್ ಸ್ಟಾರ್ ಪ್ರಭಾಸ್(Actor Prabhas) ಅಭಿನಯದ ‘ಆದಿಪುರುಷ’ ಸಿನಿಮಾ (Aadipurush film) ಬಿಡುಗಡೆಯಾದ ವೇಳೆ ಪ್ರಸಾದ್ ಮಲ್ಟಿಪ್ಲೆಕ್ಸ್ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದು ಗೊತ್ತೇ ಇದೆ. ಈ ವೇಳೆ ಪ್ರಸಾದ್ ಮಲ್ಟಿಪ್ಲೆಕ್ಸ್​ನಲ್ಲಿ ಒಂದು ಗಲಾಟೆ ನಡೆದಿತ್ತು. ಯೂಟ್ಯೂಬ್ ಚಾನೆಲ್​ಗಳಿಗೆ(YouTube chanel) ಪ್ರೇಕ್ಷಕರು ತಮ್ಮ ಅಭಿಪ್ರಾಯ ತಿಳಿಸಿದ್ದರು. ಅಲ್ಲಿದ್ದ ಕೆಲ ಪ್ರಭಾಸ್ ಅಭಿಮಾನಿಗಳು ಇದರಿಂದ ಸಿಟ್ಟಾಗಿ, ವಿಮರ್ಶೆ ತಿಳಿಸಿದವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಸುದ್ದಿ ವಾಹಿನಿಗಳ ಮುಂದೆಯೇ ಅವರ ಮೇಲೆ ಥಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಈ ಘಟನೆಯ ನಂತರ, ಇನ್ನು ಮುಂದೆ ಚಲನಚಿತ್ರ ವಿಮರ್ಶೆಗಳನ್ನು ನಿಷೇಧಿಸುವ ನಿರ್ಧಾರವನ್ನು ಪ್ರಸಾದ್ ಐಮ್ಯಾಕ್ಸ್ ಥಿಯೇಟರ್ ಕೈಗೊಂಡಿದೆ.

ಹೊಸ ಸಿನಿಮಾ ಬಿಡುಗಡೆಯಾದಾಗ ಯಾರು ಬೇಕಾದರೂ ಬಂದು ಸಿನಿಮಾ ನೋಡಬಹುದು. ಆದರೆ, ಮಲ್ಟಿಪ್ಲೆಕ್ಸ್ ಗೇಟ್ ಒಳಗೆ ಕ್ಯಾಮೆರಾಗಳನ್ನು (camera) ಅನುಮತಿಸಲಾಗುವುದಿಲ್ಲ ಎಂದು ಪ್ರಸಾದ್ ಐಮ್ಯಾಕ್ಸ್ ಥಿಯೇಟರ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ನಿರ್ಧಾರಕ್ಕೆ ಕೆಲವರಿಂದ ಮೆಚ್ಚುಗೆ ವ್ಯಕ್ತವಾದರೆ, ಇನ್ನೂ ಕೆಲವರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಮತ್ತೆ ಕೆಲವರು ಎಲ್ಲ ಕಡೆಗಳಲ್ಲಿ ಈ ರೀತಿಯ ನಿಯಮ ಬರಬೇಕು ಆಗ್ರಹಿಸಿದ್ದಾರೆ.

 

ಇದನ್ನು ಓದಿ: Mukesh Ambani: ಮುಖೇಶ್ ಅಂಬಾನಿ ಕೊಟ್ಟದ್ದು ಚಿನ್ನದ ತೊಟ್ಟಿಲು, ಆದ್ರೆ ಗಿಫ್ಟ್ ಸಿಕ್ಕಿದ್ದು ಯಾರಿಗೆ ಅನ್ನೋದೇ ವಿಶೇಷ ! 

Leave A Reply

Your email address will not be published.