Viral video: 4 ಕೋಟಿ ರೂ. ಮೌಲ್ಯದ ದೈತ್ಯ ಗೂಳಿಯನ್ನು ಬಲಿ ಕೊಟ್ಟ ಖ್ಯಾತ ಕ್ರಿಕೆಟರ್ – ವಿಡಿಯೋ ವೈರಲ್

latest news Viral Video A cricketer who sacrificed a giant bull value of 4 Crore

Viral video: ವಿಶ್ವದೆಲ್ಲೆಡೆ ಬಕ್ರೀದ್(Bakrid) ಹಬ್ಬವನ್ನು ಆಚರಿಸಲಾಗುತ್ತಿದ್ದು, ಭಾರತ ತಂಡದ ಕ್ರಿಕೆಟಿಗ ಮೊಹಮ್ಮದ್ ಶಮಿ(Mohammad shami) ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಬಕ್ರೀದ್ ಶುಭಾಶಯ ಕೋರಿದ್ದಾರೆ. ಆದರೆ ಮಾಜಿ ಆಲ್‌ರೌಂಡರ್ ಆಟಗಾರ ಕು ಕೊಡೋ ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಅದಕ್ಕೆ ಕಾರಣ ಆದದ್ದು ಈ ಕ್ರಿಕೆಟರ್(Cricketer)ಕುರ್ಬಾನಿ ನೀಡಲು ಕೋಟಿ ಕೋಟಿ ರೂಪಾಯಿ ಮೌಲ್ಯದ ದೈತ್ಯ ಗೂಳಿಯನ್ನು ನೀಡಿದ ಕಾರಣಕ್ಕಾಗಿ.

 

ಹಬ್ಬದ ದಿನ ಬಲಿ ಕೊಡಲು ಆ ಕ್ರಿಕೆಟರ್ ಖರೀದಿಸಿದ್ದು 4 ಕೋಟಿ ಮೌಲ್ಯದ ದೈತ್ಯ ಗೂಳಿಯನ್ನು. ಪಾಕಿಸ್ತಾನದ ಕ್ರಿಕೆಟ್ ಆಲ್ ರೌಂಡರ್ ಶಾಹಿದ್ ಅಫ್ರಿದಿ(Shahid afrid) ಬಲಿ ಕೊಟ್ಟಿರುವ ಗೂಳಿ ಪಾಕಿಸ್ತಾನದ ಕರೆನ್ಸಿಯಲ್ಲಿ ಸುಮಾರು 4 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿ ಬಡವರಿಗೆ ಕೈಮುಗಿದು ಗೂಳಿಯನ್ನು ಗಿಫ್ಟ್ ನೀಡಿದ್ದಾರೆ. ಪಾಕಿಸ್ತಾನದ ಕರೆನ್ಸಿಯಲ್ಲಿ ಈ ಗೂಳಿಯ ಬೆಲೆ 4 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಶಾಹಿದ್ ಅಫ್ರಿದಿ, ಈ ಗೂಳಿಯನ್ನು ತಮ್ಮ ತೋಟದಲ್ಲಿ ಕಟ್ಟಿ ಹಾಕಿ ಅಲ್ಲಿಂದಲೆ ಅದನ್ನು ವಿತರಿಸಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆ ಬಲಿಷ್ಠ ಗೂಳಿಯ ಫೋಟೋಗಳು (Viral video) ವೈರಲ್ ಆಗಿವೆ.

ಈ ಆಲ್‌ರೌಂಡರ್(All rounder) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಈ ಕುರ್ಬಾನಿ ದಾನದ ಗೂಳಿಯ ವಿಡಿಯೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ ಬಕ್ರೀದ್ ಶುಭಾಶಯ ಕೋರಿದ್ದಾರೆ. ಶಾಹಿದ್ ಅಫ್ರಿದಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತಿದ್ದಂತೆ ಅದಕ್ಕೆ ತೀವ್ರ ಟೀಕೆಗಳು ಬರುತ್ತಿವೆ. ಬಡ ಜನರು ಊಟಕ್ಕೆ ಇಲ್ಲದೆ ಕಷ್ಟ ಪಡ್ತಾ ಇದ್ದಾರೆ. ಇವ್ರು ಮಾತ್ರ ವೀಡಿಯೋ ಮಾಡಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಳಕೆದಾರರು ಟ್ವೀಟ್ ಮಾಡಿ ಟೀಕೆ ಮಾಡಿದ್ದಾರೆ.

https://twitter.com/MeghUpdates/status/1674263085341868032?t=nlWdxgItnaU0hB-iZPYnjA&s=08

 

ಇದನ್ನು ಓದಿ: Gruha Lakshmi Scheme: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಎಚ್ಚರ..!! ಫೇಕ್ ಆಪ್’ಗಳಿಂದ ನಿಮ್ಮ ಅಕೌಂಟ್ ಹ್ಯಾಕ್ ಆಗ್ಬೋದು!! 

 

 

 

Leave A Reply

Your email address will not be published.