Home News Viral video: ಅನಾಥನಂತೆ ರಸ್ತೆ ಬದಿ ನಿಂತು ಪ್ಲಾಸ್ಟಿಕ್’ನಿಂದ ಅನ್ನ ತಿನ್ನುತ್ತಿರುವ ಝೊಮೆಟೋ ಬಾಯ್: ಕಣ್ಣೊದ್ದೆ...

Viral video: ಅನಾಥನಂತೆ ರಸ್ತೆ ಬದಿ ನಿಂತು ಪ್ಲಾಸ್ಟಿಕ್’ನಿಂದ ಅನ್ನ ತಿನ್ನುತ್ತಿರುವ ಝೊಮೆಟೋ ಬಾಯ್: ಕಣ್ಣೊದ್ದೆ ಮಾಡಿಕೊಂಡ ಇಂಟರ್ ನೆಟ್

Zomato Delivery boy video
image source: Twitter

Hindu neighbor gifts plot of land

Hindu neighbour gifts land to Muslim journalist

Zomato Delivery boy video: ಈಗಂತೂ ಜನಜೀವನ ಎಷ್ಟು ಸರಳವಾಗಿದೆ ಎಂದರೆ ಆನ್ಲೈನ್ನಲ್ಲಿಯೇ ಬಗೆ ಬಗೆಯಾದ ತಮಗಿಷ್ಟವಾದ ಆಹಾರ ತಿನಿಸುಗಳನ್ನು ಆರ್ಡರ್ ಮಾಡುತ್ತಿದ್ದಾರೆ.ಫುಡ್ ಡೆಲಿವರಿ ಆಪ್‌ ಗಳಿಂದಾಗಿ ಫುಡ್‌ ಮನೆ ಬಾಗಿಲಿಗೆ ಬರುತ್ತದೆಯಾದರೂ , ನಮಗೆ ಸಮಯಕ್ಕೆ ಸರಿಯಾಗಿ ಬಿಸಿ ಬಿಸಿ ಆಹಾರವನ್ನು ತಲುಪಿಸುವಲ್ಲಿ ಫುಡ್ ಡೆಲಿವರಿ ಬಾಯ್ಗಳ ಪರಿಶ್ರಮ ಸಾಕಷ್ಟಿದೆ.

ಮಳೆಯೇ ಇರಲಿ ಬಿಸಿಲೇ ಇರಲಿ ಯಾವುದಕ್ಕೂ ಜಗ್ಗದೆ ಕುಗ್ಗದೆ, ಟ್ರಾಫಿಕ್ ಜಾಮ್ ನಿಂದ ಪಾರಾಗಿ ಹೇಗಾದರೂ ಸಮಯಕ್ಕೆ ಸರಿಯಾಗಿ ಬಂದು ಆಹಾರ ತಲುಪಿಸುತ್ತಾರೆ. ಇಷ್ಟೆಲ್ಲಾ ಕಷ್ಟ ಪಟ್ಟರು ಅವರಿಗೆ ಹೊಗಳಿಕೆಗಿಂತ ತೆಗಳಿಕೆಯೇ ಜಾಸ್ತಿ. ಸಾಮಾಜಿಕ ಜಾಲತಾಣದಲ್ಲಿ ಡೆಲಿವರಿ ಬಾಯ್’ಗಳು ಕಷ್ಟಪಡುತ್ತಿರುವ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತಿದೆ. ಇದೀಗ ಝೊಮೆಟೋ ಡೆಲಿವರಿ ಬಾಯ್ ಊಟ ಮಾಡುತ್ತಿರುವ ವಿಡಿಯೋವೊಂದು (Zomato Delivery boy video) ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಎಲ್ಲರನ್ನೂ ಭಾವುಕರನ್ನಾಗಿ ಮಾಡಿದೆ.

ಎಲ್ಲರಿಗೂ ಬಿರಿಯಾನಿ, ಫ್ರೈಡ್ ರೈಸ್, ಕಬಾಬ್‌ ಎಂದು ಟೇಸ್ಟೀ ಫುಡ್ ವಿತರಿಸೋ ಡೆಲಿವರಿ ಬಾಯ್ಸ್‌ ತಾವು ಸ್ವತಃ ಎಂಥಾ ಆಹಾರ ತಿನ್ನುತ್ತಾರೆ ಎಂಬುದು ಬಹುಶಹ ಯಾರಿಗೂ ತಿಳಿದಿರಲಿಕ್ಕಿಲ್ಲ. ಸದ್ಯ‌ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಪಾರ್ಕ್‌ ಮಾಡಿದ ಬೈಕ್‌ ಹತ್ತಿರ ನಿಂತಿರುವ ಫುಡ್ ಡೆಲಿವರಿ ಬಾಯ್‌ ಅತ್ತಿತ್ತ ನೋಡುತ್ತಾ ಪ್ಲಾಸ್ಟಿಕ್ ಬ್ಯಾಗ್‌ನಿಂದ (Plastic cover) ಸಾಧಾರಣ ಅನ್ನ, ದಾಲ್‌ ತಿನ್ನುತ್ತಿದ್ದಾನೆ. ಮತ್ತೆ ಫುಡ್ ಡೆಲಿವರಿ ಮಾಡಲು ಹೋಗಲು ಆತುರಾತುರವಾಗಿ ತಿನ್ನುತ್ತಿರುವಂತೆ ಗೋಚರಿಸುತ್ತದೆ. ಈ ದೃಶ್ಯ ವೈರಲ್ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ. ಹಾಗೂ ನಾನಾ ರೀತಿಯಲ್ಲಿ ಕಮೆಂಟಿಸಿದ್ದಾರೆ.

‘ಜನರು ಇನ್ನೊಬ್ಬರ ಬಗ್ಗೆ ಪ್ರೀತಿ, ಕಾಳಜಿ ಇಟ್ಟುಕೊಂಡು ಜೀವನ ನಡೆಸಬೇಕು’ ಎಂದು ಶೀರ್ಷಿಕೆ ನೀಡಿ ಛತ್ತೀಸ್‌ಗಢದ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೂ ಈ ವಿಡಿಯೋ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಹಾಗೂ 10,000 ಲೈಕ್ ಗಳನ್ನು ಸಮೀಪಿಸಿದೆ. ಇದನ್ನು ಒಂದು ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ.

 

 

ಇದನ್ನು ಓದಿ: WhatsApp Feature: ವಾಟ್ಸಪ್ ನಲ್ಲಿ ಅಪರಿಚಿತರು ಕರೆ ಮಾಡಿ ಕಿರಿಕಿರಿ ಆಗ್ತಿದೆಯೇ, ಹೀಗೆ ಮಾಡಿ – ಎಲ್ಲಾ ಸೈಲೆಂಟ್ ಆಗೋಗತ್ತೆ !