Adipurush: ಹಿಂದೂಗಳು ಸಹಿಷ್ಣುರೆಂದು ಈ ಮಟ್ಟಕ್ಕೆ ಇಳಿಯೋದಾ ಎಂದ ಕೋರ್ಟ್, ಸೆನ್ಸಾರ್ ಮಂಡಳಿಗೆ ಛೀಮಾರಿ, ಲೇಖಕನಿಗೆ ಸಮನ್ಸ್ !

latest news cinima news Some controversies before the release of Aadipurush movie

Adipurush Controversy: ಜೂನ್ 16 ರಂದು ಆದಿಪುರುಷ ಚಿತ್ರವು ಐದು ಭಾಷೆಗಳಲ್ಲಿ 2D ಮತ್ತು 3D ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಆದಿಪುರುಷ್ ಸಿನಿಮಾ ಬಿಡುಗಡೆಗೂ ಮುನ್ನವೇ ಕೆಲವು ವಿವಾದಗಳು ಎದ್ದಿದ್ದವು. ಇದೀಗ ಬಿಡುಗಡೆಯ ನಂತರ ಇನ್ನಷ್ಟು ವಿವಾದಗಳು (Adipurush Controversy) ಭುಗಿಲೆದ್ದಿವೆ. ಈ ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಹೈಕೋರ್ಟ್ನಲ್ಲಿ ಅರ್ಜಿಗಳು ಕೂಡ ದಾಖಲಾಗಿವೆ.

 

ಮುಖ್ಯವಾಗಿ ಈ ಸಿನಿಮಾದಲ್ಲಿ ಶ್ರೀರಾಮ ಹಾಗೂ ಹನುಮಾನ್‌ಗೆ ಅಪಮಾನ ಮಾಡಲಾಗಿದೆ. ಸಂಭಾಷಣೆ ಕೀಳು ಮಟ್ಟದಲ್ಲಿ ಸೇರಿದಂತೆ, ಎಲ್ಲಾ ಪಾತ್ರಗಳನ್ನು ವಿಚಿತ್ರವಾಗಿ ಸೃಷ್ಟಿಸಲಾಗಿದೆ. ಅದರಲ್ಲಿಯೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅವರನ್ನು ಜನರು ಇಷ್ಟಪಡಲಿಲ್ಲ. ಅಲ್ಲದೆ ಚಿತ್ರಕ್ಕೆ ಪ್ರಭಾಸ್ ಅವರು ರಾಮನಾಗಿರುವುದು ಅವರಿಗೆ ಸ್ವಲ್ಪವೂ ಇಷ್ಟವಿಲ್ಲ. ಹೀಗೆ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.

ಇನ್ನು ಆದಿಪುರುಷ ಚಿತ್ರದಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿದ್ದು, ಅವುಗಳನ್ನು ಕೂಡಲೇ ತೆಗೆದುಹಾಕಬೇಕು ಎಂದು ಅಲಹಾಬಾದ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಈ ವಿಚಾರದಲ್ಲಿ ಸೆನ್ಸಾರ್ ಮಂಡಳಿ ಮೇಲೆ ಹೈಕೋರ್ಟ್ ಗಂಭೀರವಾಗಿದೆ. ಸೆನ್ಸಾರ್ ಮಂಡಳಿ ಕಾಪಿಯನ್ನು ನೋಡುವಾಗ ಅಂತಹ ಡೈಲಾಗ್ಗಳನ್ನು ಹೇಗೆ ಬೆಂಬಲಿಸಿದ್ರು ಎನ್ನುವ ಪ್ರಶ್ನೆ ಎದ್ದಿದೆ.

ಇದೀಗ ಆದಿಪುರುಷ್ ಡೈಲಾಗ್ ಬಗ್ಗೆ ಅಲಹಾಬಾದ್ ಹೈಕೋರ್ಟ್ (ಅಲಹಾಬಾದ್ HC) ಛೀಮಾರಿ ಹಾಕಿದೆ. ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಾಹಸಮಯ ಚಿತ್ರ ಎಂದು ಹೇಳಿಕೊಳ್ಳುವ ‘ಆದಿಪುರುಷ’ ನನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.

ವಿಚಾರಣೆ ವೇಳೆ ಕೋರ್ಟ್, ರಾಮಾಯಣವು ನಮಗೆ ಮಾದರಿಯಾಗಿದೆ. ಜನರು ಮನೆಯಿಂದ ಹೊರಡುವ ಮೊದಲು ಇದನ್ನು ಓದುತ್ತಾರೆ. ಆದರೆ ಚಿತ್ರದ ಸಂಭಾಷಣೆಯ ಸ್ವರೂಪವು ಗಂಭೀರ ಸಮಸ್ಯೆ, ಚಲನಚಿತ್ರಗಳು ಕೆಲವು ಸೂಕ್ಷ್ಮ ವಿಷಯಗಳನ್ನು ಮುಟ್ಟಬಾರದು ಎಂದು ಕೋರ್ಟ್ ಹೇಳಿದೆ.

ಇದರ ಜೊತೆಗೆ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, ‘ನೀವು ಭಗವಾನ್ ರಾಮ, ಲಕ್ಷ್ಮಣ, ಹನುಮಂತ, ರಾವಣನನ್ನು ತೋರಿಸಿ ನಂತರ ಅದು ರಾಮಾಯಣವಲ್ಲ ಎಂದು ಹೇಳೋಕಾಗುತ್ತಾ ಎಂದು ಪ್ರಶ್ನೆ ಮಾಡಿದೆ.

ನಮ್ಮ ದೇಶದ ಜನರು, ಯುವಕರು ಬುದ್ಧಿ ಇಲ್ಲದವರು ಅಂದುಕೊಂಡಿದ್ದೀರಾ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ. ಹಿಂದೂ ಧರ್ಮದ ಜನರು ಸಹಿಷ್ಣುರು ಎಂಬ ಕಾರಣಕ್ಕೆ ಈ ವಿಷಯದ ಬಗ್ಗೆ ಕಣ್ಣು ಮುಚ್ಚಿ ಕೂರುತ್ತಾರ ಎಂದು ಕೋರ್ಟ್ ಕೇಳಿದೆ.

ಆದಿಪುರುಷ್ ಚಿತ್ರದ ಡೈಲಾಗ್‌ಗಳು ದೊಡ್ಡ ವರ್ಗದಲ್ಲಿ ಕಂಡುಬರುವ ಪ್ರತಿಕ್ರಿಯೆಯನ್ನು ಕೇರಳಿಸಿದ್ದು, ಈ ಪ್ರಕರಣದಲ್ಲಿ ಸಹ ಲೇಖಕ ಮನೋಜ್ ಮುಂತಶಿರ್ ಶುಕ್ಲಾರನ್ನು ಕಕ್ಷಿದಾರರು ನೆನಪಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿ ಒಂದು ವಾರದೊಳಗೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

ಸದ್ಯ ಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ಕೋರ್ಟ್‌ಗೆ ಪ್ರಕಟಿಸಲಾಗಿದೆ. ಆದರೆ ಇದನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಿದರೆ ಸಾಲದು. ಒಂದು ವೇಳೆ ಚಿತ್ರದ ಪ್ರದರ್ಶನವನ್ನು ನಿಲ್ಲಿಸಿದರೂ ಈಗ ಜನರಭಾವನೆಗಳನ್ನು ನೋಯಿಸಿದ್ದಕ್ಕೆ ಪರಿಹಾರ ಸಿಗಲಿದೆಯೇ ಎಂದು ಪ್ರಶ್ನಿಸಿ, ವಿಚಾರಣೆಯನ್ನು ಮುಂದೂಡಲಾಗಿದೆ.

ಒಟ್ಟಿನಲ್ಲಿ ಆದಿಪುರುಷ್ ಮೂಲಕ ಎದ್ದಿರುವ ವಿವಾದಗಳಿಗೆ ಆದಷ್ಟು ಬೇಗ ಕೋರ್ಟ್ ಒಂದು ಇತ್ಯರ್ಥ ಮಾಡಬೇಕಾಗಿದೆ.

 

ಇದನ್ನು ಓದಿ: Shivamogga: ಮದುವೆ ಮನೆಯಲ್ಲಿ ಸೂತಕದ ಛಾಯೆ: ಮದುವೆಗೂ ಮೊದಲೇ ಬದುಕಿಗೆ ವಿದಾಯ ಹೇಳಿದ ತಂದೆ! 

Leave A Reply

Your email address will not be published.