New Business Idea: ಇಲ್ಲಿ ಹುಲ್ಲು ಕತ್ತರಿಸಲು ಲಾನ್ ಕಟ್ಟರ್ ಗಳ ಬದಲಿಗೆ ಆಡುಗಳು ಫೀಲ್ಡ್ ಗೆ ಇಳಿಯುತ್ತವೆ !

Latest intresting news New Business Idea using goats hire goats use theme as lawn cutter

New Business Idea: ನೀವು ದೊಡ್ಡ ದೊಡ್ಡ ನಗರಗಳಲ್ಲಿ ನಿಮ್ಮ ನಿಮ್ಮ ಮನೆಗಳ ಮುಂದೆ ಅಥವಾ ನಿಮ್ಮ ಕಂಪನಿಗಳ ಎದುರು ಬೆಳೆಸಿರುವ ಕೈತೋಟ ಮುಂತಾದುವುಗಳನ್ನು ನಿಯಂತ್ರಿಸಲು ಕಷ್ಟ ಪಡುತ್ತಿದ್ದೀರಾ ? ಹಾಗಿದ್ರೆ ಇನ್ನು ಆ ಚಿಂತೆ ಬಿಡಿ. ಇಲ್ಲಿದೆ ನೋಡಿ ನಿಮ್ಮ ನಿಮ್ಮ ಕೈದೋಟಗಳನ್ನು ಸ್ವಚ್ಛವಾಗಿ, ಸುಂದರವಾಗಿಡಲು ಒಂದು ಸುಲಭೋಪಾಯ(New Business Idea)!!

ಮನೆಯ ಮುಂದೆ ಲಾನ್ ಅಥವಾ ಹುಲ್ಲುಗಾವಲು ಇಲ್ಲ ಸಣ್ಣ ತೋಟ ಬೆಳೆಸಿದರೆ ಸುಂದರವಾಗಿ ಕಾಣಲು ಅದನ್ನು ಆಗಾಗ ನಿಯಮಿತವಾಗಿ ತುಂಡರಿಸುತ್ತ ಇರಬೇಕಾಗುತ್ತದೆ. ತೋಟವನ್ನು ಬೆಳೆಸುವುದು ಎಷ್ಟು ಕಷ್ಟವೋ, ಲಾನ್ ಅನ್ನು ಆಗಾಗ ಕತ್ತರಿಸಿ ಮೈನ್ಟೈನ್ ಮಾಡುವುದು ಕೂಡ ಅಷ್ಟೇ ಕಷ್ಟದ ಕೆಲಸ. ಸಣ್ಣ ಸಣ್ಣಹುಲ್ಲು ಕತ್ತರಿಸಲು ಬೆಲೆಬಾಳುವ ಲಾನ್ ಮೂವರ್ ( Lawn cutter) ಅನ್ನು ಕೊಳ್ಳಬೇಕಾಗುತ್ತೆ. ಅಷ್ಟೇ ಅಲ್ಲ, ಪಳಗಿದ ಲಾನ್ ಕಟ್ಟಿಂಗ್ ಆಪರೇಟರ್ ಅನ್ನು ನೇಮಿಸಬೇಕಾಗುತ್ತದೆ. ಅದೆಲ್ಲ ಖರ್ಚಿನ ಬಾಬ್ತು. ಇನ್ಮುಂದೆ ಇಂತಹಾ ಕಷ್ಟ ಇಲ್ಲ. ಲಾನ್ ಮೂವರ್ ಇಲ್ಲದೆ, ಯಾವುದೇ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯ ಇಲ್ಲದೆ, ಬೇಕಾದಾಗ ನಿಮ್ಮ ಕೈ ತೋಟದ ಹುಲ್ಲು ಕತ್ತರಿಸಲು ಇದೀಗ ಹೊಸ ಬಿಸಿನೆಸ್ ಒಂದು ಹುಟ್ಟಿಕೊಂಡಿದೆ.

ಹೌದು, ಮನೆಯ ಕೈತೋಟದ, ಕಂಪನಿಗಳ ಮುಂದೆ ಸಣ್ಣಗೆ ಬೆಳೆಸಿದ ಕುಚ್ಚಿನಂತಹ ಹುಲ್ಲು ಕತ್ತರಿಸಲು ಈಗ ಮೇಕೆಗಳನ್ನು ಬಾಡಿಗೆಗೆ ಪಡೆಯಿರಿ ! ಹೌದು, ಹಾಡುಗಳು ಈಗ ಹುಲ್ಲು ಕಟ್ ಮಾಡುವ ಲಾನ್ ಕಟರ್ನಂತೆ ಕೆಲಸ ಮಾಡಲಿವೆ. ಆಡುಗಳು ಈಗ ಬಾಡಿಗೆಗೆ ದೊರೆಯುತ್ತವೆ. ಇದೀಗ ಅಂತಹಾ ಆಡು ಸಪ್ಲೈ ಮಾಡುವ ಹಲವು ಕಂಪನಿಗಳು ಹುಟ್ಟಿಕೊಂಡಿವೆ.

ಆಡುಗಳು ನೈಸರ್ಗಿಕ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಅರ್ಥವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತವೆ. ನಿಮ್ಮ
ಮನೆಯ ಅಥವಾ ಅಂಗಳದ ಹುಲ್ಲುಗಳನ್ನು ಕ್ಲಿಪ್ ಮಾಡಲು ಮೇಕೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ನಿಮಗೆ ಇದೀಗ ಸುವರ್ಣ ಅವಕಾಶವೊಂದನ್ನು ಕಲ್ಪಿಸಲಾಗಿದೆ. ಇದೊಂದು ರೀತಿ ಸುಸ್ಥಿರ ವ್ಯವಹಾರ. Sustainable business ಮಾದರಿ. ನಿಮ್ಮ ಹುಲ್ಲುಹಾಸಿನ ಆರೈಕೆಗಾಗಿ ನೀವು ಮೇಕೆ (ಅಥವಾ ಕುರಿ ಮಂದೆ) ಬಾಡಿಗೆಗೆ ಪಡೆಯುವ ಹಲವಾರು ಸ್ಥಳಗಳು ಆ ದೇಶದಾದ್ಯಂತ ಇವೆ.

ಯಸ್, ನೀವು ಇಂತಿಷ್ಟು ಅಂತ ಬಾಡಿಗೆ ನೀಡಿದರೆ ಸಾಕು, ಮೇಕೆಗಳು ನಿಮ್ಮ ಕೈತೋಟದ ಅಥವಾ ಹುಲ್ಲಿನ ಅಂಗಳಗಳನ್ನು ಮನಸೋ ಇಚ್ಚೆ ಮೇಯ್ದು ಲಾನ್ ಕಟ್ಟರ್ ನಂತೆಯೇ ಕ್ಲೀನ್ ಆಗಿ ಮೇಯ್ದು ಹೋಗುತ್ತವೆ. ಎಷ್ಟೋ ಸಲ ಹುಲ್ಲು ಕಟ್ಟಿಂಗ್ ಮಶೀನ್ ನ ಮೂಲಕ ಹುಲ್ಲು ಕತ್ತರಿಸಲು ಸಾಧ್ಯ ಆಗೋದಿಲ್ಲ. ಏರುಪೇರಿನ ಭೂಮಿಗಳಲ್ಲಿ ಲಾನ್ ಕಟ್ಟರ್ ಬಳಸಲು ಸಾಧ್ಯವಾಗುವುದಿಲ್ಲ. ಮೇಕೆಗಳನ್ನು ಹುಲ್ಲು ಮೇಯಲ ಬಿಟ್ಟರೆ ಒಂದೆಡೆ ಹುಲ್ಲು ಕಟ್ ಆಗುತ್ತದೆ, ಇತ್ತ ಅದು ಹಾಕುವ ಪಿಕ್ಕೆ ಯಿಂದ ಮಣ್ಣಿನ ಫಲವತ್ತತೆ ಕೂಡ ಹೆಚ್ಚುತ್ತದೆ ಎನ್ನುವುದು ಇದೀಗ ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಂಪೆನಿಯು ಆಡುಗಳನ್ನು ಸಾಮಾನ್ಯವಾಗಿ ಹುಲ್ಲುಗಳನ್ನು ಬ್ರಷ್ ನಿರ್ಮೂಲನೆಗೆ, ಜೀವವೈವಿಧ್ಯತೆಯನ್ನು ಮರುಸ್ಥಾಪಿಸಲು ಮತ್ತು ಕೃಷಿಭೂಮಿ ಮತ್ತು ಹುಲ್ಲುಗಾವಲುಗಳನ್ನು ನಿರ್ವಹಿಸಲು ಬಳಸಲಾಗುತ್ತದೆ ಎಂದು ಹೇಳಿಕೊಂಡಿದೆ. “ಹುಲ್ಲುಹಾಸಿನ ಆರೈಕೆಗಾಗಿ ನೀವು ಹೊಸ GOAT ಅನ್ನು ಹೊಂದಿರುತ್ತೀರಿ, ಮತ್ತು ಅವು ಚೆನ್ನಾಗಿ ಬ್ಲೀಟ್ ಮಾಡುತ್ತವೆ. ಹೆಚ್ಚಿನ ವಿವರಗಳು ಮತ್ತು ಬೆಲೆ ಮಾಹಿತಿಗಾಗಿ Hire Goats ವೆಬ್‌ಸೈಟ್‌ಗೆ ಭೇಟಿ ನೀಡಿ”ಎಂದಿದೆ ಮೇಕೆ ಸಪ್ಲೈ ಮಾಡುವ ಈ ಕಂಪನಿ.

https://hiregoats.com/why-hire-goats%3F

ಅಲ್ಲದೆ, ಇತ್ತೀಚೆಗೆ ಎಲ್ಲಾ ಕಂಪನಿಗಳು ಸಸ್ಟೈನೇಬಲ್ ಮತ್ತು ಪರಿಸರಕ್ಕೆ ಪೂರಕ ಆಗಿರುವ ಕಾರಣ ಈ ರೀತಿಯ ಹೊಸ ಬಿಸಿನೆಸ್ ವ್ಯಾಪಕವಾಗಿ ಹರಡುತ್ತಿದೆ. ಸದ್ಯಕ್ಕೆ ಈ ವ್ಯಾಪಾರ ಭಾರತದಲ್ಲಿಲ್ಲ. ಸದ್ಯಕ್ಕೆ ಅಮೆರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಈ ವ್ಯಾಪಾರ ಜೋರಾಗಿ ಕುದುರಿಕೊಳ್ಳುತ್ತಿದೆ.

 

ಇದನ್ನೂ ಓದಿ: Safest Banks in India: RBI ಪ್ರಕಾರ ಈ 3 ಬ್ಯಾಂಕ್’ಗಳು ಅತ್ಯಂತ ಸುರಕ್ಷಿತ, ಇಲ್ಲಿ ನಿಮ್ಮ ಹಣ ಪೂರ್ತಿ ಸೇಫ್ !

Leave A Reply

Your email address will not be published.