ADGP Alok Kumar: ಬೆಂ-ಮೈ ದಶಪಥ ಹೆದ್ದಾರಿ ಹೆಚ್ಚಿದ ಅಪಘಾತ : ಎಡಿಜಿಪಿ ಅಲೋಕ್ ಕುಮಾರ್ ಖಡಕ್‌ ವಾರ್ನಿಂಗ್.!

Latest Karnataka news Adgp Alok Kumar inspected Bengaluru Mysore express highway accident

ADGP Alok Kumar: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆ ಇಂದು ಎನ್‌ಹೆಚ್ ಅಧಿಕಾರಿಗಳ ಜೊತೆ ಅಲೋಕ್ ಕುಮಾರ್(ADGP Alok Kumar) ಹೆದ್ದಾರಿಯ ಪರಿಶೀಲನೆ ನಡೆಸಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ವೀಕ್ಷಣೆ ಮಾಡಿದ ಬಳಿಕ ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಮಿತಿಮೀರಿದ ವೇಗದ ಚಾಲನೆ, ಮದ್ಯಪಾನ ಸೇವಿಸಿ ವಾಹನ ಸಂಚಾರ ಹಾಗೂ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಲೈಸನ್ಸ್‌ ರದ್ದು ಮಾಡಲಾಗುತ್ತದೆ. ಈ ಎಲ್ಲಾ ಕಾರಣದಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ನಡೆಯುತ್ತಿದೆ. ಹೈ ಸ್ಪೀಡ್ ಲಿಮಿಟ್ ತಡೆಗೆ ಸ್ಪೀಡ್ ರೆಡಾರ್ ಅಳವಡಿಕೆ ಮಾಡುತ್ತೇವೆ.

ಕನಿಷ್ಠ 25% ರಷ್ಟು ಅಪಘಾತ ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ ಇದಕ್ಕೆ ವಾಹನ ಸವಾರರು ಸ್ಪಂದಿಸಬೇಕು ಎಂದಿದ್ದಾರೆ. ದಶಪಥ ಹೆದ್ದಾರಿಯಲ್ಲಿ ಗರಿಷ್ಟ ಮಿತಿ 100 ಕಿ.ಮೀ ಇದೆ. ತಿರುವುಗಳಲ್ಲಿ 60- 80 ವೇಗ ಮಿತಿ ಬಳಕೆ ಮಾಡಬೇಕು. ಈಗಾಗಲೇ ಫ್ರಾರಂಭಗೊಂಡ ದಿನದಿಂದ 568 ಅಪಘಾತಗಳು ನಡೆಸಿದೆ ಎಂದು ವರದಿಯಾಗಿದೆ. 158ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಇನ್ನು ನೂರಾರು ಮಂದಿ ಹೆದ್ದಾರಿ ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ಕಾರಣದಿಂದಾಗಿ ಇಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಪರಿಶೀಲನೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ , ಐಜಿಪಿ ರವಿಕಾಂತೇಗೌಡ, ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಹೆದ್ದಾರಿ ನಿರ್ಮಾಣ ಹೊಣೆ ಹೊತ್ತಿರುವ ಡಿಬಿಎಲ್ ಕಂಪನಿ ಅಧಿಕಾರಿಗಳು ಕೂಡ ಸೂಕ್ಷ್ಮವಾಗಿ ಗಮನಿಸಿದ್ದಾರೆ. ‌

ಇದನ್ನೂ ಓದಿ: ಮಗಳ ಕತ್ತು ಹಿಸುಕಿ ಕೊಂದ ತಂದೆ : ಪ್ರೇಯಸಿಯ ಹತ್ಯೆ ಕಂಡು ಪ್ರಿಯಕರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!

Leave A Reply

Your email address will not be published.