Political news: ಮೂರೇ ದಿನಕ್ಕೆ ಮುರಿದುಬಿತ್ತು ವಿಪಕ್ಷಗಳ ಮಹಾ ಮೈತ್ರಿ..!! ಒಬ್ಬರಿಗೊಬ್ಬರು ಕಚ್ಚಾಡಿ ದೂರ ಆದ ಪಕ್ಷಗಳು!!

Political news latest news Rift in opposition party

Political news:  ಒಬ್ಬ ನಾಯಕನನ್ನು ಸೋಲಿಸಲು, ಮಣಿಸಲು ದೇಶದ ಎಲ್ಲಾ ನಾಯಕರು ಒಟ್ಟಾಗಿ ಮಹಾ ಮೈತ್ರಿ(Maha mythre) ಮಾಡಿಕೊಳ್ಳಲು ಮೊನ್ನೆ ತಾನೆ ಬಿಹಾರದಲ್ಲಿ ಒಟ್ಟಾಗಿದ್ದರು. ಆದರೆ ಈ ಮೈತ್ರಿ ಕೂಟ ಮೂರೇ ದಿನಕ್ಕೆ ಠುಸ್ ಪಟಾಕಿಯಾಗಿದೆ.

ಹೌದು, 2024ರ ಲೋಕಸಭಾ ಚುನಾವಣೆಯಲ್ಲಿ(Parliament election) ಬಿಜೆಪಿ(BJP)ಯನ್ನು, ಪ್ರಧಾನಿ ಮೋದಿ(PM Modi)ಯವರನ್ನು ಮಣಿಸಲೇ ಬೇಕೆಂಬ ಯೋಜನೆಯಲ್ಲಿ ಬೃಹತ್‌ ಮೈತ್ರಿಕೂಟ ಕಟ್ಟುವ ಉದ್ದೇಶದಿಂದ 3 ದಿನಗಳ ಹಿಂದಷ್ಟೇ ಬಿಹಾರದ(Bihar) ರಾಜಧಾನಿ ಪಾಟ್ನಾ(Patna) ದಲ್ಲಿ ಬೃಹತ್‌ ಸಭೆ ನಡೆಸಿದ್ದ ವಿಪಕ್ಷಗಳ ಒಗ್ಗಟ್ಟು, ಮೂರೇ ದಿನದಲ್ಲಿ ಠುಸ್‌ ಆಗಿದೆ. ಪರಸ್ಪರ ಒಂದಾಗಬೇಕಿದ್ದ ಕಾಂಗ್ರೆಸ್‌(Congress), ಟಿಎಂಸಿ(TMC) ಮತ್ತು ಸಿಪಿಎಂ(CPM) ಪಕ್ಷಗಳು ತಮ್ಮ ತಮ್ಮೊಳಗೆ (Political news ) ಕಿತ್ತಾಡಿಕೊಂಡು ದೂರ ಆಗಿವೆ.

ಅಂದಹಾಗೆ ಸೋಮವಾರ ದೆಹಲಿಯಲ್ಲಿ(Delhi) ಕೇರಳ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಸುಧಾಕರನ್‌ ವಿರುದ್ಧ ಇತ್ತೀಚೆಗೆ ಕೇರಳ ಸರ್ಕಾರ ವಂಚನೆ ಕೇಸು ದಾಖಲಿಸಿತ್ತು. ಇದೀಗ ಅವರನ್ನು ಭೇಟಿ ಮಾಡಿದ ಪಕ್ಷದ ನಾಯಕ ರಾಹುಲ್‌ ಗಾಂಧಿ(Rahul gandhi) , ನಾವು ಬೆದರಿಕೆ ಮತ್ತು ದ್ವೇಷದ ರಾಜಕೀಯಕ್ಕೆ ಬೆದರುವುದಿಲ್ಲ ಎಂದು ಕೇರಳದ ಆಡಳಿತಾರೂಢ ಸಿಪಿಎಂಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಇಷ್ಟೇ ಅಲ್ಲದೆ ಪಶ್ಚಿಮ ಬಂಗಾಳ(West bengal)ದಲ್ಲೂ ಮೈತ್ರಿ ಕುರಿತು ಒಡಕು ಮೂಡಿದ್ದು, ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಬೃಹತ್‌ ಮೈತ್ರಿಕೂಟ ಕಟ್ಟುವ ತಮ್ಮ ಭಾರೀ ಯತ್ನಕ್ಕೆ ರಾಜ್ಯದಲ್ಲಿ ಕೆಲ ಪಕ್ಷಗಳ ಒಳಮೈತ್ರಿ ಅಡ್ಡಿ ಮಾಡಿದೆ. ಈ ಕುತಂತ್ರವನ್ನು ತಾವು ಬಯಲಿಗೆಳೆಯುವುದಾಗಿ ಸಿಪಿಎಂ ಮತ್ತು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ಮತ್ತೊಂದೆಡೆ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮಾತನಾಡಿ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದೆಲ್ಲದರ ನಡುವೆ ಆಪ್(AAP) ಕೂಡ ಖ್ಯಾತೆ ತೆಗೆದಿದ್ದು, ಮೈತ್ರಿಕೂಟದ ಮುಂದಿನ ಸಭೆಯಲ್ಲಿ ತಾನು ಭಾಗಿಯಾಗಬೇಕಾದರೆ ಕೇಂದ್ರ ಸರ್ಕಾರ ದೆಹಲಿ ಮೇಲೆ ಹೊರಡಿಸಿದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್‌ ವಿರೋಧಿಸಬೇಕೆಂದು ಆಪ್‌ ಸಂಚಾಲಕ ಕೇಜ್ರಿವಾಲ್‌ ಷರತ್ತು ಹಾಕಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ಅಜಯ್ ಮಾಕೆನ್‌, ಇಂಥ ನಡೆ ವಿಪಕ್ಷಗಳ ಒಗ್ಗಟ್ಟಿಗಾಗಿ ಅಲ್ಲ ಬದಲಾಗಿ ಮೈತ್ರಿಯನ್ನು ವಿಫಲಗೊಳಿಸಲು ಹೂಡಿದ ಯೋಜಿತ ಸಂಚು ಎಂದಿದ್ದಾರೆ.

ಅಂದಹಾಗೆ ಮೊನ್ನೆ ಮೊನ್ನೆ ಪಾಟ್ನಾದಲ್ಲಿ ಆಯೋಜಿಸಿದ್ದ ವಿಪಕ್ಷಗಳ ಸಭೆಯು ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿತ್ತು. ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆದಿದ್ದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಬಿಜಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಮೊದಲ ವಿಪಕ್ಷ ಸಭೆ ಯಶಸ್ವಿಯಾಗಿದ್ದು, ಇದೀಗ ಹಿಮಾಚಲ ಪ್ರದೇಶದಲ್ಲಿ 2ನೇ ವಿಪಕ್ಷ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತು. ಆದರೀಗ ಈ ಬೆನ್ನಲ್ಲೇ ಒಳಜಗಳ ಸ್ಪೋಟಗೊಂಡಿರುವುದು ಅಚ್ಚರಿ.

Leave A Reply

Your email address will not be published.