Pramod Muthalik: ಪ್ರಮೋದ್ ಮುತಾಲಿಕ್‌ಗೆ ಕಲಬುರ್ಗಿ ಹೈಕೋರ್ಟ್ ನಿಂದ ಬಿಗ್ ರಿಲೀಫ್..!

latest news Relief for Pramod Muthalik by Kalaburgi High Court

Share the Article

Pramod Muthalik: ಕಲಬುರ್ಗಿ : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಚೋದನ ಕಾರಿ ಭಾಷಣ ಮಾಡಿದ ಪ್ರಕರಣ ರದ್ದುಗೊಳಿಸಿ ಇಂದು ಕಲಬುರ್ಗಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ( Pramod Muthalik) ಸದಾ ಒಂದಲ್ಲ ಒಂದು ಪ್ರಚೋದನ ಕಾರಿ ಭಾಷಣ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಪ್ರಚೋದನ ಕಾರಿ ಭಾಷಣ ಮಾಡಿದ ವಿರುದ್ಧದ ಕೇಸ್ ರದ್ದುಗೊಳಿಸಿ, ಕಲಬುರ್ಗಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ ಎಂದು ವರದಿಯಾಗಿದೆ. 2017ರ ಫೆಬ್ರವರಿಯಲ್ಲಿ ಗೋವಿನ ಹತ್ಯೆ ಮಾಡಿದವರ ಕೈ ಕಡಿಯಬೇಕು ಎಂದು ಬಹಿರಂಗವಾಗಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು ಈ ನಿಟ್ಟಿನಲ್ಲಿ ಬಬಲೇಶ್ವರ ಠಾಣೆಯ ಪೊಲೀಸರು ಪ್ರಮೋದ್ ಮುತಾಲಿಕ್ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಕಲಬುರ್ಗಿ ಹೈಕೋರ್ಟ್ ವಿಭಾಗೀಯ ಪೀಠವು ಇಂದು ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿತು.
ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಕೇಸ್ ದಾಖಲಿಸುವ ಮುನ್ನ ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಅವೆಲ್ಲವೂಗಳನ್ನು ಪಾಲಿಸದೇ ಕೇಸ್‌ ದಾಖಲಿಸುವುದು ಸರಿಯಲ್ಲ ಅಭಿಪ್ರಾಯ ಪಡಲಾಗಿತ್ತು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಸರ್ಕಾರದ ಪೂರ್ವಾನುಮತಿ ಪಡೆಯದೇ ಪ್ರಕರಣ ದಾಖಲಿಸಿದ್ದರು. ಈ ಕಾರಣದಿಂದಾಗಿ ಕೇಸ್ ರದ್ದುಗೊಳಿಸಿದಲ್ಲದೇ, ಕಲಬುರ್ಗಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ ಎಂದು ವರದಿಯಾಗಿದೆ.

Leave A Reply