ಕಡಬ : ಯುವತಿಯ ಜೊತೆಗೆ ಫೋಟೊ ತೆಗೆಸಿ, ಹಣಕ್ಕಾಗಿ ಬೇಡಿಕೆ – ದೂರು

Share the Article

Kadaba : ಕಡಬದ ವ್ಯಕ್ತಿಯೊಬ್ಬರ ಪಕ್ಕ ಯುವತಿಯನ್ನು ಕುಳ್ಳೀರಿಸಿ ಪೊಟೊ ತೆಗೆದು ಬಳಿಕ ಹಣಕ್ಕಾಗಿ ಬೇಡಿ ಇಟ್ಟು ಬೆದರಿಕೆ ಒಡ್ಡಿರುವ ಬಗ್ಗೆ ಕಡಬ(Kadaba) ಠಾಣೆಯಲ್ಲಿ ದೂರು ದಾಖಲಾಗಿದೆ.

ಕಡಬದ ಬಲ್ಯ ಗ್ರಾಮ್ ಹೊಸ್ಮಠದ ಮೂಲದ ನಿವಾಸಿ ಮಂಗಳೂರಿನ ಬಲ್ಮಠದಲ್ಲಿರುವ ಇಲಿಯಾಸ್ ಹೆಚ್.ಕೆ. ಈ ಬಗ್ಗೆ ದೂರು ನೀಡಿದ್ದಾರೆ.

ಇಲಿಯಾಸ್ ಹೊಸ್ಮಠದಲ್ಲಿ ಕೃಷಿ ತೋಟ ಹೊಂದಿದ್ದು ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ ಹಾಗೂ ಮಂಗಳೂರಿನಿಂದ ಮತ್ತು ಕಡಬಕ್ಕೆ ಕಾರಿನಲ್ಲಿ ಓಡಾಡಿಕೊಂಡಿರುತ್ತಿದ್ದು, ತಮ್ಮ ಕಾರಿಗೆ ಫೈಸಲ್‌ ಎಂಬಾತ ಕಾರು ಚಾಲಕನಾಗಿದ್ದಾನೆ. ಕಾರು ಚಾಲಕ ಪೈಸಲ್ ಜೂ.14ರಂದು ಮಂಗಳೂರಿನಿಂದ ಕಾರಿನಲ್ಲಿ ತಮ್ಮ ಮನೆಯಾದ ಬಲ್ಯ ಹೊಸ್ಮಠಕ್ಕೆ ಬಂದಿದ್ದು ನಂತರ ಇಲಿಯಾಸ್ ತಮ್ಮ ಹೊಸ್ಮಠ ಮನೆಯಲ್ಲಿ ಬಟ್ಟೆಯನ್ನು ತೆಗೆದು ತೋಟಕ್ಕೆ ಹೋಗಲು ರೆಡಿ ಆಗುತ್ತಿದ್ದಾಗ ಇಲಿಯಾಸ್ ಅವರ ಮನೆ ಒಳಗೆ ಸ್ಕೂಟರ್‌ನಲ್ಲಿ ಒಂದು ಮುಸ್ಲೀಂ ಯುವತಿ ಮತ್ತು ಯುವಕ ಬಂದಿದ್ದು ಆ ಸಮಯ ಇಲಿಯಾಸ್ ಅವರ ಕಾರು ಚಾಲಕ ಆರೋಪಿ ಫೈಸಲ್‌ ಮತ್ತು ಯುವಕ ಮನೆಗೆ ಬಂದಿದ್ದ ಮುಸ್ಲೀಂ ಯುವತಿಯೊಂದಿಗೆ ಇಲಿಯಾಸ್ ಅವರನ್ನು ಬಲವಂತವಾಗಿ ಕುಳ್ಳಿರಿಸಿ, ಬಳಿಕ ಯುವತಿಯು ಬುರ್ಖಾ ತೆಗೆದು ಟೀ ಶರ್ಟ್ ಹಾಕಿ ಪಕ್ಕ ಕುಳಿತುಕೊಂಡಾಗ ಆರೋಪಿಗಳಾದ ಪೈಸಲ್‌ ಮತ್ತು ಯುವಕ ಇಲಿಯಾಸ್ ಮತ್ತು ಯುವತಿಯ ಪೋಟೋ ತೆಗೆದು ನಂತರ 5 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟು ಹಣ ಕೊಡದಿದ್ದರೆ ಪೋಟೋವನ್ನು ವೈರಲ್‌ ಮಾಡುವುದಾಗಿ ಬೆದರಿಸಿದ್ದಾರೆ. ಹಣವನ್ನು ಕೊಡುವುದಿಲ್ಲ ಎಂದು ಹೇಳಿದಾಗ ಆರೋಪಿತಗಳು ಕೊಲೆ ಮಾಡುವುದಾಗಿ ಬೆದರಿಸಿದ್ದು ನಂತರ ಇಲಿಯಾಸ್ ಹಣ ಕೊಡದೇ ಇದ್ದಾಗ ಆರೋಪಿ ಫೈಸಲ್‌ ಎಂಬಾತನು ಇಲಿಯಾಸ್ ರನ್ನು ಎಳೆದಾಡಿ ಬಲವಂತವಾಗಿ ಕಾರಿನ ಕೀಯನ್ನು ಎಳೆದುಕೊಂಡು ಕಾರನ್ನು ತೆಗೆದುಕೊಂಡು ಹೋಗಿದ್ದು, ನಂತರ ಆರೋಪಿ ಅದೇ ದಿನ ರಾತ್ರಿ ಇಲಿಯಾಸ್ ಅವರಿಗೆ ಫೋನ್‌ ಕರೆ ಮಾಡಿ 5 ಲಕ್ಷ ಹಣ ಕೊಡದಿದ್ದರೆ ನಿಮ್ಮ ಕಾರನ್ನು ಅಪಘಾತಪಡಿಸುತ್ತೇನೆ ಹಾಗೂ ಕಾರನ್ನು ಮಾರಾಟ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಳೆ ಫೋನ್‌ನಿಂದ ಹೊಸ ಮೊಬೈಲ್‌ಗೆ ಕಾಂಟ್ಯಾಕ್ಟ್ಸ್ ಶೇರ್‌ ಮಾಡಲು ಸಿಂಪಲ್‌ ಟ್ರಿಕ್‌ ಇಲ್ಲಿದೆ ನಿಮಿಷದಲ್ಲಿ ಕೆಲಸ ಆಗೋಯ್ತು ಅಂದುಕೊಳ್ಳಿ!

Leave A Reply