Nirmala Sitharaman: 6 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ಹಾಕಿದವರು ನೀವು – ಅಮೆರಿಕಾ ಮಾಜಿ ಅಧ್ಯಕ್ಷ ಒಬಾಮಗೆ ನಿರ್ಮಲಾ ಸೀತರಾಮನ್ ತಿರುಗೇಟು

Latest news political news Nirmala Sitharaman said Barack Obama attacked six Muslim countries

Nirmala Sitharaman: ಒಟ್ಟು 6 ಮುಸ್ಲಿಮ್ ರಾಷ್ಟ್ರಗಳ ಮೇಲೆ ಬಾಂಬ್ ಹಾಕಿದವರು ಈಗ ಭಾರತದ ಮುಸ್ಲಿಮರ ಸ್ಥಿತಿ ಬಗ್ಗೆ ಪ್ರಸ್ತಾಪ ಮಾಡುತ್ತಿರುವುದು ವುದು ಹಾಸ್ಯಸ್ಪದ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದ ವೇಳೆಗೆ ಭೇಟಿ ವೇಳೆ, ‘ತಮಗೂ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಅವಕಾಶ ಸಿಕ್ಕರೆ ಭಾರತದಲ್ಲಿನ ಮುಸ್ಲಿಮರ ಸ್ಥಿತಿ ಏನು ಎತ್ತ ಬಗ್ಗೆ ಪ್ರಸ್ತಾಪಿಸುತ್ತೇನೆ’ ಎಂದು ಒಬಾಮ ಹೇಳಿಕೆ ಹೇಳಿದ್ದರು. ಅದಕ್ಕೆ ದೇಶದ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಇಂದು ಭಾನುವಾರ ದೆಹಲಿಯಲ್ಲಿ ನಿರ್ಮಲಾ ಸೀತರಾಮನ್ರವರು (Nirmala Sitharaman)  ಕೂಡಾ ಪ್ರತಿಕ್ರಿಯಿಸಿದ್ದಾರೆ. ದ್ವಿಮುಖ ನೀತಿ ತೋರಿಸಿದ ಬರಾಕ್ ಒಬಾಮಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಂ.

ನಿರ್ಮಲಾ ಸೀತರಾಮನ್ ಅವರು, ‘ ಬರಾಕ್ ಒಬಾಮರವರು ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಆರು ಮುಸ್ಲಿಂ ರಾಷ್ಟ್ರಗಳ ಮೇಲೆ ದಾಳಿ ಮಾಡಿದ್ದಾರೆ. ಆಗ ಸುಮಾರು 26,000 ಬಾಂಬ್ ಗಳ ದಾಳಿ ನಡೆಸಿದ್ದರು. ಆದರೆ ನಮ್ಮ ಸರ್ಕಾರ ʻಸಬ್ಕಾ ಸಾಥ್‌, ಸಬ್ಕಾ ವಿಕಾಸ್‌ʼ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ’ ಎಂದು ಹೇಳಿದ್ದಾರೆ.

‘ ನಾವು ಅಮೆರಿಕದೊಂದಿಗೆ ಸ್ನೇಹ ಬಯಸುತ್ತೇವೆ. ಆದರೆ ಅಲ್ಲಿ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಟೀಕೆಗಳು ಕೇಳಿಬಂದಿವೆ. ಆರು ಮುಸ್ಲಿಂ ಬಹುಸಂಖ್ಯಾತರಿರುವ ರಾಷ್ಟ್ರಗಳ ಮೇಲೆ ಸುಮಾರು 26,000 ಕ್ಕೂ ಹೆಚ್ಚು ಬಾಂಬ್‌ ದಾಳಿ ಹಾಕಿಸಿದ್ದವರೇ ಮೋದಿ ಬಗ್ಗೆ ಅಲ್ಪ ಸಂಖ್ಯಾತರ ರಕ್ಷಣೆ ಬಗ್ಗೆ ಆರೋಪ ಮಾಡಿದರೆ ಯಾರು ನಂಬುತ್ತಾರೆ? ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ 13 ಗೌರವ ಪ್ರಶಸ್ತಿಗಳಲ್ಲಿ 6 ಪ್ರಶಸ್ತಿಗಳು ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ನೀಡಿದವುಗಳೇ ಆಗಿವೆ’ ಎಂದು ಅವರು ಮೋದಿಯನ್ನು ಬಲವಾಗಿ ಸಮರ್ಥಿಸಿಕೊಂಡು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಟೀಕೆಗೆ ಕಿಡಿಕಾರಿದ ನಿರ್ಮಲಾ ಸೀತಾರಾಮನ್‌ ರವರು, ‘ ಯಾವುದೇ ಅಂಕಿ ಅಂಶಗಳಿಲ್ಲದೇ ಆರೋಪ ಮಾಡುತ್ತಿರುವುದು ಕೇವಲ ಪ್ರಚಾರಕ್ಕಾಗಿ. ಚುನಾವಣಾ ಕ್ಷೇತ್ರದಲ್ಲಿ ಮೋದಿಯನ್ನಾಗಲಿ ಅಥವಾ ಬಿಜೆಪಿ ಪಕ್ಷವನ್ನಾಗಲಿ ಅವರು ಎದುರಿಸಲು ಸಾಧ್ಯವಿಲ್ಲ’ ಎಂದು ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದರು.

 

ಇದನ್ನು ಓದಿ: Speed Dating: ಸ್ಪೀಡ್ ಡೇಟಿಂಗ್ ಹವಾ ಬೆಂಗಳೂರಲ್ಲಿ ಜೋರಾಗಿದೆ , ಯುವಕರ ಯುವತಿಯರು ಯಾಮಾರಿದ್ರೆ ಬ್ರೇಕ್ ಸಿಗಲ್ಲ! 

Leave A Reply

Your email address will not be published.