The Kerala Story: ಒಟಿಟಿ ಸಂಸ್ಥೆಗಳು ‘ದಿ ಕೇರಳ ಸ್ಟೋರಿ’ ಸಿನಿಮಾ ಖರೀದಿಸುತ್ತಿಲ್ಲ ; ಇದರ ಹಿಂದಿದೆಯೇ ಷಡ್ಯಂತ್ರ?- ಚಿತ್ರತಂಡ ಏನು ಹೇಳಿತು ?!
Entertainment cinema news the Kerala story movie ott release delayed for this reason
The Kerala Story OTT Release: ದೇಶಾದ್ಯಂತ ವಿವಾದದ ಕಿಡಿಯಿಂದಲೇ ಸದ್ದು ಮಾಡಿದ ‘ಲವ್ ಜಿಹಾದ್’ (love jihad) ಕಥೆಯಾಧಾರಿತ ಹಿಂದಿ ಸಿನಿಮಾ ‘ದಿ ಕೇರಳ ಸ್ಟೋರಿ’ ಈಗಾಗಲೇ ಭರ್ಜರಿ ಗಳಿಕೆ ಕಂಡಿದೆ. ಸಣ್ಣ ಬಜೆಟ್ನಲ್ಲಿ ನಿರ್ಮಾಣವಾದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 242 ಕೋಟಿ ರೂಪಾಯಿ ಕಮಾಯಿ ಮಾಡಿ ಬೀಗಿದೆ. ಆದರೆ, ‘ದಿ ಕೇರಳ ಸ್ಟೋರಿ’ ಚಿತ್ರ ಖರೀದಿಸಲು ಯಾವ ಒಟಿಟಿ (The Kerala Story OTT Release) ಸಂಸ್ಥೆಯೂ ಮುಂದೆ ಬಂದಿಲ್ಲ ಎನ್ನಲಾಗಿದೆ. ಇದರ ಹಿಂದೆ ಷಡ್ಯಂತ್ರ ಇರಬಹುದಾ ಎಂಬ ಪ್ರಶ್ನೆ ಮೂಡಿದೆ?
‘ದಿ ಕೇರಳ ಸ್ಟೋರಿ’ ಸಿನಿಮಾದ ಯಶಸ್ಸು, ಗಳಿಕೆಯನ್ನು ಸಹಿಸಿಕೊಳ್ಳಲು ಆಗದವರು ಒಟಿಟಿ ಸಂಸ್ಥೆಗಳಿಗೆ ಕಿವಿಮಾತು ಹೇಳಿದ್ದಾರೆ. ಹಾಗಾಗಿಯೇ ಯಾರು ಕೂಡ ಸಿನಿಮಾವನ್ನು ಖರೀದಿಸಲು ಸಿದ್ಧರಿಲ್ಲ. ಅಲ್ಲದೆ, ‘ರಾಜಕೀಯವಾಗಿ ಕಾಂಟ್ರವರ್ಸಿ ಹೊಂದಿರುವ ಚಿತ್ರ ನಮಗೆ ಬೇಡ’ ಎಂದು ಒಟಿಟಿ ಸಂಸ್ಥೆಗಳು ಹೇಳಿವೆ ಎಂಬ ಮಾತನ್ನು ಚಿತ್ರತಂಡದವರು ಹೇಳಿದರು ಎಂದು ಹೇಳಲಾಗುತ್ತಿದೆ.
ಈ ಹಿಂದೆ ‘ದಿ ಕೇರಳ ಸ್ಟೋರಿ’ ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ರಿಲೀಸ್ (The Kerala Story ) ಆಗಲಿದೆ. ‘ದಿ ಕೇರಳ ಸ್ಟೋರಿ’ ಚಿತ್ರದ OTT ಹಕ್ಕುಗಳನ್ನು ZEE 5 ಖರೀದಿಸಿದೆ. ಶೀಘ್ರದಲ್ಲೇ ಈ ಸಿನಿಮಾ ZEE 5 ನಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇವೆಲ್ಲವೂ ಶುದ್ಧ ಸುಳ್ಳು ಎಂದು ನಿರ್ದೇಶಕ ಸುದೀಪ್ತೊ ಸೇನ್ (Sudeepto Sen) ತಿಳಿಸಿದ್ದಾರೆ.
ಒಟಿಟಿ ಸಂಸ್ಥೆಗಳು ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ತಿರಸ್ಕರಿಸಿದ್ದಕ್ಕೆ ಬಾಲಿವುಡ್ನ ಕೆಲವರ ಷಡ್ಯಂತ್ರ ಕಾರಣ ಎಂದು ಸುದೀಪ್ತೋ ಸೇನ್ ಭಾವಿಸಿದ್ದಾರೆ. ಸದ್ಯ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಲು ಸಾಧ್ಯವಾಗದೇ ಇದ್ದವರು ಒಟಿಟಿಯಲ್ಲಿ ನೋಡಬೇಕು ಎಂದು ಕಾಯುತ್ತಿದ್ದರು. ಆದರೆ ಅವರಿಗೆ ನಿರಾಸೆ ಉಂಟಾಗಿದೆ.
ಇನ್ನು ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಮೇ 5ರಂದು ದೇಶದಾದ್ಯಂತ ರಿಲೀಸ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕ್ರಮೇಣ ಈ ಸಿನಿಮಾದ ಬಗ್ಗೆ ಹಲವರು ಧ್ವನಿ ಎತ್ತಿದ್ದು, ಹಲವೆಡೆ ಬ್ಯಾನ್ ಕರೆ ಕೇಳಿ ಬಂದಿತ್ತು. ಈ ಎಲ್ಲಾ ವಿವಾದಗಳ ಮಧ್ಯೆ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಸಾಕಷ್ಟು ಗಳಿಕೆ ಮಾಡಿದೆ.
ಸುದೀಪ್ತೊ ಸೇನ್ (Sudeepto Sen) ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಅದಾ ಶರ್ಮಾ (Ada Sharma), ಯೋಗಿತಾ ಬಿಹಾನಿ (Yogita Bihani) ಹಾಗೂ ಸೋನಿಯಾ ಬಾಲಾನಿ ಲೀಡ್ (Sonia Balani leed) ರೋಲ್‌ಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: rape on calf : ಮುಗ್ಧ ಪ್ರಾಣಿ ಕರುವಿನ ಮೇಲೆಯೇ ಅತ್ಯಾಚಾರ ; ಯುವಕನ ಹೀನ ಕೃತ್ಯಕ್ಕೆ ಹಿಂದು ಸಂಘಟನೆಗಳಿಂದ ಪ್ರತಿಭಟನೆ !