Modi visits Bandipur: ಬಂಡೀಪುರಕ್ಕೆ ಮೋದಿ ಆಗಮನ ಬೆನ್ನಲ್ಲೆ ಆದಾಯ ಹೆಚ್ಚಳ..! ಹೇಗೆ ಗೊತ್ತಾ ?
Latest Karnataka news Income increase after prime minister Narendra Modi arrival in Bandipur
Modi visits Bandipur : ಏಪ್ರಿಲ್ 9 ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿ(Modi visits Bandipur) ನೀಡಿದ್ದೇ ತಡ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಶರವೇಗದಲ್ಲಿ ಹೆಚ್ಚಾಗಿದ್ದು, ಆದಾಯವೂ ಬರೊಬ್ಬರಿ ಹೆಚ್ಚಳಗೊಂಡಿದೆ ಎಂದು ವರದಿ ಮಾಡಲಾಗಿದೆ. ಹಾಗಿದ್ರೆ ಏನಿದೆ ಇದರ ಹಿಂದಿನ ರಹಸ್ಯ ಅನ್ನೋದರ ಕುರಿತ ಮಾಹಿತಿ ಇಲ್ಲಿದೆ ಓದಿ.
ಬಂಡೀಪುರವೂ , ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದ್ದು, ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವಾಗಿ ಇತ್ತೀಚೆಗಷ್ಟೇ 50 ವರ್ಷ ಪೂರೈಸಿತು. 50 ವರ್ಷ ಪೂರೈಸಿದ ಹಿನ್ನೆಲೆ ಕಳೆದ ಏಪ್ರಿಲ್ 9 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿಯಾಗಿ ಸುಮಾರು ಎರಡು ತಾಸುಗಳ ಕಾಲ ಸಫಾರಿಯಲ್ಲಿ ಸುತ್ತಾಡಿದ್ದಾರೆ. ಮೋದಿ ಅವರು ಬಂಡೀಪುರಕ್ಕೆ ಆಗಮಿಸಿದ ಮರು ದಿನದಿಂದಲೇ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಲೇ ಇದೆ.
ಅದರಲ್ಲೂ ಪ್ರತಿದಿನ 2 ಸಾವಿರ ಪ್ರವಾಸಿಗರು ಭೇಟಿಯಾಗ್ತಿದ್ದಾರೆ, ಇನ್ನೂ ಪ್ರತಿದಿನ 7 ಲಕ್ಷಕ್ಕೂ ಹೆಚ್ಚು ಆದಾಯ ಗಳಿಕೆಯಾಗುತ್ತಿದೆ. ಪ್ರಧಾನಿ ಮೋದಿಯರು ಸಫಾರಿಯಲ್ಲಿ ಸುತ್ತಾಡಿದನ್ನು ಕಂಡ ಪ್ರವಾಸಿಗರು ಇದೀಗ ಸಫಾರಿಗಾಗಿ ಎಂದೇ ಜನರು ಆಗಮನವಾಗುತ್ತಿದೆ ಎಂದೆನ್ನಬಹುದಾಗಿದೆ. ಬಂಡೀಪುರ ಸುರಂಕ್ಷಿತಾರಣ್ಯದಲ್ಲಿ ಒಟ್ಟು 31 ಸಫಾರಿ ಜೀಪ್ ಗಳಿದ್ದು,ಅದ್ರರಲ್ಲಿ 26 ಜೀಪ್‌ಗಳನ್ನು ಮಾತ್ರ ಬಳಸಲಾಗುತ್ತಿದೆ.
ಇದನ್ನೂ ಓದಿ: 26 ವರ್ಷದ ನಂತ್ರ 2 ದಿನಗಳ ಪ್ರವಾಸಕ್ಕಾಗಿ ಈಜಿಪ್ಟ್‌ನ ಕೈರೋಗೆ ಬಂದಿಳಿದ ಮೋದಿ .!