Anna bhagya Scheme: ಗಂಟೆಗಟ್ಲೆ ಕಾದ್ರೂ ಒಂದು ಹಿಡಿ ಅಕ್ಕಿ ಕೊಡಲ್ಲ ಎಂದ ಕೇಂದ್ರ!! ಅನ್ನಭಾಗ್ಯದ ಅಕ್ಕಿಗಾಗಿ ಕೇಂದ್ರದ ಮೊರೆ ಹೋಗಿದ್ದ ರಾಜ್ಯ ಸರ್ಕಾರಕ್ಕೆ ಮತ್ತೆ ನಿರಾಸೆ!!

Anna bhagya Scheme Disappointment again for the state government which appealed to the center for Annabhagya rice

Anna bhagya Scheme: ಅನ್ನಭಾಗ್ಯ ಯೋಜನೆಯ(Anna bhagya Scheme) ಅಕ್ಕಿ ಹೊಂಚಿಕೆಗಾಗಿ ಎರಡನೇ ಬಾರಿಗೆ ಕೇಂದ್ರ ಸರ್ಕಾರವನ್ನು(Central Government) ಸಂಪರ್ಕಿಸಿದ್ದ ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ(Congress Government) ಮತ್ತೆ ನಿರಾಸೆಯಾಗಿದೆ. ಅರ್ಧ ಗಂಟೆ ಕಾದು ಮತುಕತೆ ನಡೆಸಿದರೂ ಕೂಡ ಅಕ್ಕಿಯನ್ನು ಕೊಡುವುದಿಲ್ಲ ಎಂದು ಕೇಂದ್ರ ಆಹಾರ ಸಚಿವ ಪಿಯುಷ್​ ಗೋಯೆಲ್​ ನೇರವಾಗಿ ಹೇಳಿದ್ದಾರೆ.

ಹೌದು, ರಾಜ್ಯದ ಅನ್ನಭಾಗ್ಯ ಯೋಜನೆಗೆ (Anna Bhagya Yojana) ಬೇಕಿರುವ ಅಗತ್ಯ ಅಕ್ಕಿ (Rice) ಪೂರೈಸಲು ಸಾಧ್ಯವಿಲ್ಲ. ಫುಡ್‌ ಕಾರ್ಪೋರೇಷನ್‌ ಆಫ್ ಇಂಡಿಯಾ (ಎಫ್‌ಸಿಐ) ಬಳಿ ಅಕ್ಕಿ ದಾಸ್ತಾನಿದ್ದರೂ ಕೂಡ ಕರ್ನಾಟಕಕ್ಕೆ ಅಕ್ಕಿಯುನ್ನು ಕೊಡಲಾಗದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ (Piyush Goyal) ಹೇಳಿದ್ದಾರೆ ಎಂದು ರಾಜ್ಯದ ಆಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪಿಯೂಶ್ ಗೊಯಲ್(Piyush goyal) ಅವರನ್ನು ಕರ್ನಾಟಕ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಅರ್ಧ ಗಂಟೆ ಚರ್ಚೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ ಅವರು, ಫುಡ್‌ ಕಾರ್ಫೋರೇಷನ್‌ ಆಫ್‌ ಇಂಡಿಯಾ (ಎಫ್‌ಸಿಐ) ಬಳಿ ಸ್ಟಾಕ್ ಇದೆ. ನಿಮ್ಮ ಬಳಿ ಸ್ಟಾಕ್ ಇದೆ. ದ್ವಿಗುಣ ಪ್ರಮಾಣದಲ್ಲಿ ಅಕ್ಕಿ ಇದೆ. ಏಕೆ ಅಕ್ಕಿ ಕೊಡುವುದಿಲ್ಲ ಎಂದು ಕೇಳಿದೆ. ಕೇಂದ್ರದ ದರ ನೀಡಲೂ ನಾವು ರೆಡಿ ಇದ್ದೀವಿ ಅಂತಾನೂ ಹೇಳಿದೆ. ಆದರೆ, ಬೇರೆ ಬೇರೆ ಕಾರ್ಯಕ್ರಮಕ್ಕೆ ನೀಡಲು ಬೇಕಾಗುತ್ತದೆ. ಅದನ್ನು ಕೊಡಲ್ಲ ಎಂದು ಕೇಂದ್ರ ಮಂತ್ರಿಗಳು ಹೇಳುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇದು ರಾಜಕೀಯ ದುರುದ್ದೇಶದ ನಿಲುವು. ಸ್ಟಾಕ್ ಇದ್ದರೂ ಕೊಡಲ್ಲ ಅನ್ನೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ ಮುನಿಯಪ್ಪ, ಇದು ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಬರುತ್ತದೆ. ಈ ಕಾಯ್ದೆ ಮಾಡಿದ್ದೆ ಹಿಂದಿನ ಯುಪಿಎ(UPA) ಸರ್ಕಾರ. ಆದರೆ ಕೇಂದ್ರ ತನ್ನ ನೀತಿಯನ್ನು ಬದಲಿಸಿದೆ. ಈಗ ಅಕ್ಕಿ ಇಲ್ಲ ಎಂದು ಹೇಳುತ್ತಿದೆ. ಹೀಗಾಗಿ ನಾವು ಬೇರೆ ದಾರಿಯನ್ನು ನೋಡಬೇಕಿದೆ. ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕಾರಣ ಮಾಡುತ್ತಿದೆ ಎಂದು ಮುನಿಯಪ್ಪ ಅವರು ವಾಗ್ದಾಳಿ ನಡೆಸಿದರು.

ಅಲ್ಲದೆ ಕೇಂದ್ರ ನಿರಾಕರಿಸಿರುವ ಹಿನ್ನೆಲೆ ನಾವು ನಮ್ಮ ದಾರಿ ಕಂಡುಕೊಳ್ಳಬೇಕಿದೆ. ಅನ್ನಭಾಗ್ಯ ಘೋಷಣೆ ಮಾಡಿದ್ದೇವೆ, ಅದನ್ನು ಜಾರಿ ಮಾಡುತ್ತೇವೆ. ಕೇಂದ್ರೀಯ ಭಂಡಾರ, ನಾಫೆಡ್ ಸೇರಿ 3 ಸ್ವತಂತ್ರ ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ. ಅವರ ಪ್ರತಿಕ್ರಿಯೆ ಬಳಿಕ ಎಲ್ಲಿಂದ ಅಕ್ಕಿ ಖರೀದಿಸಬೇಕು ಎಂಬುದನ್ನು ಪರಿಶೀಲಿಸುತ್ತೇವೆ. ಬೆಲೆಯಲ್ಲಿ ದೊಡ್ಡ ವ್ಯತಾಸ ಆಗುವುದಿಲ್ಲ ಎಂದುಕೊಂಡಿದ್ದೇವೆ. ಯೋಜನೆಗೆ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದರು.

 

ಇದನ್ನು ಓದಿ: V. somanna: ನನಗೆ ರಾಜ್ಯಾಧ್ಯಕ್ಷ ಪಟ್ಟ ಬೇಕೇ ಬೇಕು- ಪಟ್ಟು ಹಿಡಿದ ಸೋಮಣ್ಣ!! ಕೇಳಿದವ್ರಿಗೆಲ್ಲಾ ಅಧ್ಯಕ್ಷ ಸ್ಥಾನ ಕೊಡೋಕಾಗಲ್ಲ ಎಂದ ನಾಯಕರು!! 

Leave A Reply

Your email address will not be published.