ಕೆರೆ ಏರಿ ಮೇಲಿಂದ ಬಿದ್ದು ಶಾಲಾ ಬಸ್ಸು : ಐವರು ವಿದ್ಯಾರ್ಥಿಗಳು ಗಂಭೀರ

Share the Article

School bus : ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡಹಳ್ಳಿ ಹಾಗೂ ಗಂಗಸಂದ್ರ ಗ್ರಾಮದ ಮಧ್ಯೆ ಕೆರೆ ಏರಿ ಮೇಲಿಂದ ಬಿದ್ದು ಶಾಲಾ ವಾಹನ (School bus )ಪಲ್ಟಿಯಾಗಿ ಐದು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.

 

ಪಲ್ಟಿಯಾದ ಬಸ್‌ ದೊಡ್ಡಬಳ್ಳಾಪುರದ ಪಾಲನಾ ಜೋಗಹಳ್ಳಿ ಬಳಿಯ ಬಿ.ಹೆಚ್. ಪಬ್ಲಿಕ್ ಶಾಲೆಯದ್ದು ಎಂದು ತಿಳಿದು ಬಂದಿದೆ. ಗಾಯಗೊಂಡ ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪಾಲ್ ಪಾಲ್ ದಿನ್ನೆ ಗ್ರಾಮದ ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಗಂಗಸಂದ್ರ ಗ್ರಾಮದ ಓರ್ವ ಮಗುವಿನ ಕಾಲಿಗೆ ಗಾಯವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸಂಭವಿಸುತ್ತಿದ್ದಂತೆ ಶಾಲಾ ವಾಹನ ಚಾಲಕ ಎಸ್ಕೇಪ್‌ ಆಗಿದ್ದಾನೆ.

Leave A Reply