ಆಗುಂಬೆ ಘಾಟ್‌ನಲ್ಲಿ ಅಪಘಾತ ತಪ್ಪಿಸಲು ರಿಫ್ಲೆಕ್ಟರ್ ಅಳವಡಿಕೆ

Share the Article

Udupi : ದಕ್ಷಿಣ ಭಾರತದ ʻಚಿರಾಪುಂಜಿʼ ಎಂದೇ ಪ್ರಸಿದ್ಧ ಪಡೆದ ಆಗುಂಬೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆ(Udupi)ಯನ್ನು ಬೆಸೆಯುವ ಆಗುಂಬೆ ಘಾಟಿಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಆಗುಂಬೆ ಘಾಟಿಯ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಈ ಕಾರಣದಿಂದಾಗಿ ಪೊಲೀಸರು ಅಪಘಾತ ನಿಯಂತ್ರಣಕ್ಕಾಗಿ ಹೊಸ ಪ್ಲಾನ್‌ ತೀರ್ಮಾನಿಸಿದ್ದಾರೆ, ಅರೇ ಅದೇನಪ್ಪ ಅಂತಾ ಯೋಚನೆ ಮಾಡ್ತಿದ್ದೀರಾ ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ…

 

ಆಗುಂಬೆ ಘಾಟ್‌ನಲ್ಲಿ ಸಂಚಾರ ಮಾಡುವ ವಾಹನಗಳ ಸವಾರರ ಹಿತ ದೃಷ್ಟಿಯಿಂದ ಹೆಚ್ಚಿನ ರಿಫ್ಲೆಕ್ಟರ್ ಅಳವಡಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಹೆಚ್ಚಿನ ರಿಫ್ಲೆಕ್ಟರ್ ಅಳವಡಿಕೆ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

 

ಅಷ್ಟೇ ಅಲ್ಲದೇ ರಸ್ತೆ ತಿರುವುಗಳಲ್ಲಿ ಎಚ್ಚರಿಕೆ ಫಲಕ, ಕ್ಯಾಟ್ ಐಯ್ ಅಳವಡಿಕೆ. ಮರದ ಕೊಂಬೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಕೊಡುವುದಲ್ಲದೇ, ಹೆಚ್ಚು ಸೈನ್ ಬೋರ್ಡ್ ಗಳನ್ನು ಹಾಕುವುದಕ್ಕೆ ಪೊಲೀಸರು ಮುಂದಾಗಿದ್ದಾರೆ. ಇನ್ನೂ ಆಗುಂಬೆ ಘಾಟ್‌ನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ತಿರುವುಗಳಲ್ಲಿ ಹೆಚ್ಚು ಕಡೆ ರಿಬ್ಲಿಂಗ್ಸ್ ಗಳನ್ನು ಹಾಕಲಾಗುತ್ತದೆ. ಇನ್ನೂ ಪ್ರವಾಸಿಗರ ಮುಂಜಾಗ್ರತೆಗಾಗಿ ವೀಕೆಂಡ್‌ಗಳಲ್ಲಿ ಸೋಮೇಶ್ವರ ಪೇಟೆ ಮತ್ತು ಘಾಟಿ ಆರಂಭವಾಗುವ ಸ್ಥಳಗಳಲ್ಲಿ ಪೊಲೀಸರ ಕಣ್ಗಾವಲು ಇಡಲು ಸೂಚನೆ ನೀಡಲಾಗಿದೆ.

Leave A Reply