Home Breaking Entertainment News Kannada Tamil actre Balambika: ‘ಆ ಮ್ಯಾಟರ್’ ನಲ್ಲಿ ಸ್ವಲ್ಪ ಹೊಂದಾಣಿಕೆ ಮಾಡ್ಕೊಂಡಿದ್ರೂ ವಿಜಯ್, ಪ್ರಶಾಂತ್‌ಗೆ ಹೀರೊಯಿನ್...

Tamil actre Balambika: ‘ಆ ಮ್ಯಾಟರ್’ ನಲ್ಲಿ ಸ್ವಲ್ಪ ಹೊಂದಾಣಿಕೆ ಮಾಡ್ಕೊಂಡಿದ್ರೂ ವಿಜಯ್, ಪ್ರಶಾಂತ್‌ಗೆ ಹೀರೊಯಿನ್ ಆಗ್ತಿದ್ದೆ !! ಶಾಕಿಂಗ್ ಹೇಳಿಕೆ ಹರಿಬಿಟ್ಟ ತಮಿಳು ನಟಿ!

Tamil actre Balambika
Image source- Filmibeat kannada

Hindu neighbor gifts plot of land

Hindu neighbour gifts land to Muslim journalist

Tamil actre Balambika: ಇತ್ತೀಚಿನ ದಿನಗಳಲ್ಲಿ ಟಿವಿ(TV) ಮಾಧ್ಯಮಗಳಲ್ಲಿ ಹಾಗೂ ಯೂಟ್ಯೂಬ್(You tube) ಗಳಲ್ಲಿ ಸೆಲೆಬ್ರಿಟಿಗಳನ್ನು(Celebrity) ಸಂದರ್ಶನ ಮಾಡುವಂತಹ ಕಾರ್ಯಕ್ರಮಗಳು ತುಂಬಾ ಪ್ರಸಾರವಾಗುತ್ತಿವೆ. ಅದರಲ್ಲೂ ಸಿನಿಮಾ ನಟ-ನಟಿಯರ ಸಂದರ್ಶನಗಳೇ ಹೆಚ್ಚು. ಅಂದಹಾಗೆ ಈ ಸಂದರ್ಶನಗಳಲ್ಲಿ ಮಹಿಳಾ ಕಲಾವಿದರು ತಮ್ಮ ಅನುಭವಗಳನ್ನು ಬಿಚ್ಚಿಡುತ್ತಾ ತಮಗಾದ ಕೆಲವೊಂದು ಕಹಿ ಅನುಭಗಳನ್ನೂ ಬಹಿರಂಗೊಳಿಸುತ್ತಿದ್ದಾರೆ. ಈಗಂತೂ ಹೆಚ್ಚಿನ ನಟಿಯರು ಈ ಬಗ್ಗೆ ಮಾತನಾಡುತ್ತಾರೆ. ಅಂತೆಯೇ ಇದೀಗ ತಮಿಳು ನಟಿ ಬಾಲಾಂಬಿಕಾ(Tamil actre Balambika) ಅಜೆಸ್ಟ್‌ಮೆಂಟ್‌ ಬಗ್ಗೆ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.

ಹೌದು, ಸಿನಿ ರಂಗದಲ್ಲಿ ಇತ್ತೀಚೆಗೆ ಮೀ ಟೂ ಪ್ರಕರಣಗಳು ಹೆಚ್ಚಾಗುತ್ತಿದೆ. ಸ್ಟಾರ್ ನಟರು, ನಿರ್ದೇಶಕರ ಅಸಲಿ ಮುಖವನ್ನು ಕೆಲವು ನಟಿಯರು ಧೈರ್ಯವಾಗಿ ಬಿಚ್ಚಿಡುತ್ತಿದ್ದಾರೆ ಅಂತೆಯೇ “ಚಿತ್ರರಂಗದಲ್ಲಿ ಅಡ್ಜೆಸ್ಟ್‌ಮೆಂಟ್(Adjustment) ಮಾಡಿಕೊಂಡಿದ್ದರೆ, ದಳಪತಿ ವಿಜಯ್(Dalapati vijay) ಹಾಗೂ ಪ್ರಶಾಂತ್‌ಗೆ(Prashanth) ನಾಯಕಿಯಾಗಬಹುದಿತ್ತು” ಎಂದು ಬಾಲಾಂಬಿಕ ಎಂಬ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ತಮಿಳುನಾಡಿನಾದ್ಯಂತ ಈ ಹೇಳಿಕೆ ವೈರಲ್ ಆಗುತ್ತಿದೆ.

ಅಂದಹಾಗೆ ಖ್ಯಾತ ಸಿನಿಮಾ ನಿರ್ದೇಶಕರಾದ ಕೆಎಸ್‌ ಗೋಪಾಲ ಕೃಷ್ಣ(K S Gopalkrishna) ಅವರ ಅಸಿಸ್ಟೆಂಟ್ ಆಗಿದ್ದ ರಾಮಾಸ್ವಾಮಿ ಅವರ ಏಕೈಕಾ ಪುತ್ರಿ ಬಾಲಾಂಬಿಕಾ ಅವರು ಬಾಲಂ ಸಿನಿಮಾದಲ್ಲಿ ನಟ ಮುರುಳಿ ಅವರ ಕಿರಿಯ ಸಹೋದರಿಯಾಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ನಂತರ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಸಹೋದರಿಯರ ಪಾತ್ರಗಳಲ್ಲಿ ನಟಿಸುತ್ತಿದ್ದವರು. ಖುಷ್ಬೂ(Khushbu) ತಂಗಿಯಾಗಿ, ವಿಜಯಕಾಂತ್(Vijaykanth) ಸಹೋದರಿಯಾಗಿ, ಸತ್ಯರಾಜ್ ಸಹೋದರಿಯಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಒಟ್ಟಾರೆ ಸಹೋದರಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಮಿಂಚಿದ್ದಾರೆ.

ಹೀಗೆ ಅಕ್ಕ ತಂಗಿಯರ ಪಾತ್ರದಲ್ಲಿ ಕಾಣಿಸಿಕೊಂಡ ಬಾಲಾಂಬಿಕ ಐದು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ನಾಯಕಿಯಾಗಿದ್ದ ಇವರಿಗೆ ಒಂದು ಸಮಯದಲ್ಲಿ ವಿಜಯ್ ದಳಪತಿ, ತಲಾ ಅಜಿತ್, ಕಮಲ್ ಹಾಸನ್(Kamal hasan) ಮತ್ತು ಪ್ರಶಾಂತ್‌ ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶ ಬಂದಿತ್ತಂತೆ ಆದರೆ ಆ ಟೈಪ್ ಆಫರ್‌ ಬಂದಿದಕ್ಕೆ ಹಿಂದೆ ಸೆರೆದಿದ್ದಾರೆ. ಈ ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಬೇಕು ಅಂದ್ರೆ ನಾನು ಆ ಟೈಪ್ ಅಜೆಸ್ಟ್‌ಮೆಂಟ್‌ಗಳನ್ನು ಒಪ್ಪಿಕೊಳ್ಳಬೇಕಿತ್ತು. ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡಿದ್ದರೆ, ದಳಪತಿ ವಿಜಯ್, ಪ್ರಶಾಂತ್ ಸೇರಿದಂತೆ ಹಲವರ ಜೊತೆ ನಾಯಕಿಯಾಗಿ ನಟಿಸಬಹುದಿತ್ತು. ಆದರೆ, ಒಪ್ಪಲಿಲ್ಲ’ ಎಂದಿದ್ದಾರೆ ಬಾಲಾಂಬಿಕಾ.

ಅಂದು ವಿಜಯ್ ಜೊತೆ ನಟಿಸಿದ್ದರೆ, ನನ್ನ ಬದುಕೇ ಬದಲಾಗುತ್ತಿತ್ತು. ಆದರೆ ಮನಸ್ಸು ಒಪ್ಪಲಿಲ್ಲ ಎಂದು ಬಾಲಾಂಬಿಕ ಅವರು ಹೇಳಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆದಂತೆ ಬಾಲಾಂಬಿಕ ಅವರು ಇದೀಗ ಧಾರಾವಾಹಿಗಳ ಕಡೆಗೆ ಮುಖ ಮಾಡಿದ್ದಾರೆ.

 

ಇದನ್ನು ಓದಿ: IT Raid: ಮಾಲಿವುಡ್ ನಟಿ ಪರ್ಲಿ ಮಾನಿ ಸೇರಿದಂತೆ ಫೇಮಸ್ ಯೂಟೂಬರ್ಸ್ ಮನೆಗೆ ಐಟಿ ದಾಳಿ !