G.Parameshwar: ಪೊಲೀಸ್​ ಆಕಾಂಕ್ಷಿಗಳಿಗೆ ಸಿಹಿಸುದ್ದಿ​ ; 3,500 ಪೊಲೀಸರ ನೇಮಕಕ್ಕೆ ಇನ್ನೊಂದು ವಾರದಲ್ಲಿ ಆದೇಶ- ಡಾ. ಜಿ ಪರಮೇಶ್ವರ್ !

Order to appoint 3,500 policemen in another week Dr. G. Parameshwar

Share the Article

G.Parameshwar: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 15 ಸಾವಿರ ಪೊಲೀಸರ ಹುದ್ದೆ ಖಾಲಿ ಇದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಗುರುವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಇನ್ನೊಂದು ವಾರದಲ್ಲಿ 3,500 ಪೊಲೀಸರ ಹುದ್ದೆ ನೇಮಕಾತಿಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 1 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ. ಶೇ.50 ರಷ್ಟು ಅನುದಾನ‌ ಕೇಂದ್ರದಿಂದ ಹಾಗೂ ರಾಜ್ಯದಿಂದ ನೀಡಬೇಕು.

ಈಗಾಗಲೆ ಕೇಂದ್ರ ಸರ್ಕಾರ ಶೇ.45ರಷ್ಟು ಅನುದಾನ ಮಂಜೂರು ಮಾಡಿದ್ದು, ರಾಜ್ಯ ಸರ್ಕಾರವು 443 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಹೇಳಿದರು. ಸ್ಮಾರ್ಟ್‌ಸಿಟಿ ಯೋಜನೆಯಡಿ 170 ಕಾಮಗಾರಿ ನಡೆಯುತ್ತಿವೆ. ಈ ಎಲ್ಲಾ ಕಾಮಗಾರಿಯನ್ನು ನವೆಂಬರ್ ನೊಳಗೆ ಮುಗಿಸಲು ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

 

ಇದನ್ನು ಓದಿ: PM Kisan E-KYC: ಪಿಎಂ ಕಿಸಾನ್ ಸಮ್ಮಾನ್ ಯೋಜನೆ​ಗೆ ಕೆವೈಸಿ ಅಪ್ಡೇಟ್ ಜೂನ್ 30 ರೊಳಗೆ ಕಡ್ಡಾಯ ! ನೋಂದಣಿ ಪ್ರಕ್ರಿಯೆ, ಇತರ ಪೂರ್ಣ ಮಾಹಿತಿ ಇಲ್ಲಿದೆ 

Leave A Reply