Bangalore: ಚಿನ್ನ ಪ್ರಿಯರಿಗೆ ಹೊಸ ರೂಲ್ಸ್‌ .! ಹೇಗಿರುತ್ತೆ ಗೊತ್ತಾ? ಇಲ್ಲಿದೆ ಓದಿ

Central Government has implemented new rules on gold jewellery

Bangalore: ಬೆಂಗಳೂರು : ಚಿನ್ನ ಅಂದ್ರೆ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ.. ಹಬ್ಬ ಹರಿದಿನ ಬಂದ್ರೆ ಸಾಕು ತಮ್ಮ ಸೌಂದರ್ಯ ಹೆಚ್ಚಿಸಲು ಚಿನ್ನವನ್ನು ಧರಿಸದರೇ ಇಲ್ಲ..ಒಂದಷ್ಟು ಜನರು ಚಿನ್ನ ಧರಿಸಲು ಇಷ್ಟ ಪಟ್ಟರೇ ಇನ್ನೊಂದಷ್ಟು ಜನರು ಚಿನ್ನ ಆದಾಯ ಮೂಲಕ್ಕಾಗಿಯೂ ಚಿನ್ನವನ್ನು ಹೊಂದಲು ಮುಂದಾಗುತ್ತಾರೆ. ಇದೀಗ ಚಿನ್ನ ಚಿನ್ನಾಭರಣ ಪ್ರಿಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹೊಸ ರೂಲ್ಸ್‌ ಜಾರಿಗೆ ತಂದಿದೆ. ಅಷ್ಟಕ್ಕೂ ಅರೇ ಬೆಲೆ ಕಡಿಮೆ, ಜಾಸ್ತಿ ಆಯ್ತಾ.! ಅಂತಾ ಯೋಚ್ನೆ ಮಾಡ್ತಿದ್ದೀರಾ? ಅಲ್ವೇ ಅಲ್ಲ.. ಇದು ಚಿನ್ನಾಭರಣ ಮಾರಾಟ ಮಾಡುವ ಅಂಗಡಿಗಳಿಗೆ ಮಾತ್ರವಲ್ಲ, ಚಿನ್ನಾಭರಣ ಹೊಂದಿರುವವರಿಗೂ ಈ ನಿಯಮ ಅನ್ವಯ ಆಗುತ್ತದೆ. ಈ ಕುರಿತ ಮಾಹಿತಿ ಇಲ್ಲಿದ ಓದಿ..

ಹಾಲ್‌ಮಾರ್ಕ್ ಸಂಕೇತವೇನು ?

ಹಾಲ್‌ಮಾರ್ಕ್ ಅನ್ನುವುದು ಚಿನ್ನ ಮೇಲಿನ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಜನ ಸಾಮಾನ್ಯರು ಚಿನ್ನಾಭರಣ ವಿಚಾರದಲ್ಲಿ ಮೋಸಕ್ಕೆ ಬಲಿಯಾಗದಂತೆ ತಡೆಯಲು ಹಾಲ್‌ಮಾರ್ಕ್ ಸೂಕ್ತವಾಗಿದೆ. ಚಿನ್ನಾಭರಣದ ವಿಶಿಷ್ಟ ಗುರುತಿನ ವಿಶಿಷ್ಟ ಗುರುತು ಪ್ರತಿಯೊಂದು ಆಭರಣಕ್ಕೂ ವಿಭಿನ್ನವಾಗಿರುತ್ತದೆ. ಇದು ಚಿನ್ನದ ಶುದ್ಧತೆಯ ಸಂಕೇತವಾಗಿದ್ದು, HUID ಚಿನ್ನದ ಆಭರಣಗಳ ಮೇಲೆ ಇರಬೇಕು. HUID ಆರು ಅಂಕೆಗಳ ಆಲ್ಫಾನ್ಯೂಮರಿಕ್ ಕೋಡ್ ಆಗಿದ್ದು, ಇದು ಅಕ್ಷರಗಳು ಮತ್ತು ಸಂಖ್ಯೆಗಳನ್ನ ಒಳಗೊಂಡಿದೆ. ಆಭರಣಗಳ ಮೇಲೆ ಮೂರು ಅಂಕಗಳು ಕಡ್ಡಾಯಯಾಗಿದೆ.

ಹೊಸ ರೂಲ್ಸ್‌ ಹೇಗಿರುತ್ತೆ ಗೊತ್ತಾ? :

ಚಿನ್ನದ ವಸ್ತುಗಳು ಮತ್ತು ಆಭರಣಗಳ ಮಾರಾಟಕ್ಕೆ ಹೆಚ್ಚಿನ ಪಾರದರ್ಶಕತೆಯನ್ನ ತರಲು ಕೇಂದ್ರ ಮುಂದಾಗಿದ್ದು , ಇದೀಗ ಏಪ್ರಿಲ್ 1 ರಿಂದಲೇ ಚಿನ್ನದ ಮೇಲಿನ ಹಾಲ್ ಮಾರ್ಕ್‌ಗೆ ಹೊಸ ನಿಯಮ ಜಾರಿ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಲಾಗಿದ್ದು, ಹಾಲ್‌ಮಾರ್ಕ್ ಇಲ್ಲದ ಹಳೆಯ ಆಭರಣಗಳನ್ನು ಹೊಂದಿದ್ದರೆ, ನೀವು ಅದನ್ನು ಹಾಲ್‌ಮಾರ್ಕ್‌ನೊಂದಿಗೆ ಸ್ಟ್ಯಾಂಪ್ ಮಾಡಬೇಕು.
ಇದಲ್ಲದೆ, ಎರಡು ಗ್ರಾಂಗಿಂತ ಕಡಿಮೆ ಚಿನ್ನ, ಅಂತರರಾಷ್ಟ್ರೀಯ ಪ್ರದರ್ಶನಗಳಿಗೆ ಉದ್ದೇಶಿಸಲಾದ ಆಭರಣಗಳು, ವಿದೇಶಿ ಖರೀದಿದಾರರ ನಿರ್ದಿಷ್ಟ ಅವಶ್ಯಕತೆಗಳನ್ನ ಪೂರೈಸಲು ರಫ್ತು ಮಾಡಲು ಉದ್ದೇಶಿಸಿರುವ ಯಾವುದೇ ಚಿನ್ನದ ವಸ್ತು, ಫೌಂಟೇನ್ ಪೆನ್ನುಗಳು, ಕೈಗಡಿಯಾರಗಳು, ವಿಶೇಷ ಆಭರಣಗಳು ಹಾಲ್ಮಾರ್ಕಿಂಗ್ನಿಂದ ವಿನಾಯಿತಿ ಪಡೆದಿವೆ. ವಾರ್ಷಿಕ 40 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ಆಭರಣ ವ್ಯಾಪಾರಿಗಳಿಗೂ ವಿನಾಯಿತಿ ನೀಡಲಾಗಿದೆ.

ನೀವು ಯಾವುದೇ BIS ಮಾನ್ಯತೆ ಪಡೆದ ಹಾಲ್‌ಮಾರ್ಕಿಂಗ್ ಕೇಂದ್ರದಲ್ಲಿ ಆಭರಣಗಳನ್ನ ಪರೀಕ್ಷಿಸಬಹುದು. ಪರೀಕ್ಷೆಗೆ ಒಳಪಡುವ ವಸ್ತುಗಳ ಸಂಖ್ಯೆ ಐದು ಅಥವಾ ಅದಕ್ಕಿಂತ ಹೆಚ್ಚು ಇದ್ದರೆ, ಪ್ರತಿ ವಸ್ತುವಿಗೆ 45 ರೂಪಾಯಿ. ಕೇವಲ ನಾಲ್ಕು ವಸ್ತುಗಳಿದ್ದರೆ 200 ರೂಪಾಯಿ. ಬಿಐಎಸ್ ನೋಂದಾಯಿತ ಆಭರಣ ವ್ಯಾಪಾರಿಗಳು ತಮ್ಮ ಆಭರಣಗಳನ್ನ ಹಾಲ್‌ಮಾರ್ಕ್ ಮಾಡಬಹುದು. ಆಭರಣ ವ್ಯಾಪಾರಿಯು ಬಿಐಎಸ್ ಅಸ್ಸೇಯಿಂಗ್ ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್‌ಗೆ ಐಟಂನ್ನ ತೆಗೆದುಕೊಂಡು ಮುದ್ರೆ ಹಾಕುತ್ತಾನೆ. ಅಲ್ಲದೇ ಹಾಲ್‌ಮಾರ್ಕಿಂಗ್ ಗುರುತು ಹಾಕದ ಆಭರಣ ಮಾರಾಟ ಮಾಡುವ ವ್ಯಾಪಾರಿಗಳಿಗೆ 1 ವರ್ಷ ಜೈಲು ಶಿಕ್ಷೆ, ಚಿನ್ನಾಭರಣದ (Bangalore) ಬೆಲೆಗಿಂತ ಐದು ಪಟ್ಟು ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಹೊಸ ರೂಲ್ಸ್‌ ಅನ್ವಯ ಆಗುವ ಎಲ್ಲಾ ಸಾಧ್ಯತೆಯಿದೆ ಆ ಕಾರಣದಿಂದಾಗ ಚಿನ್ನ ಖರೀದಿಸುವ ಮುನ್ನ ಈ ನಿಯಮ ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ..

 

ಇದನ್ನು ಓದಿ: Murder: ಮೀಸೆ ಚಿಗುರೊಡೆಯುವ 20ರ ಹುಡುಗನಿಗೆ 35ರ ಆಂಟಿ ಮೇಲೆ ಆಸೆ! ಕೊನೆಗೆ ರುಂಡವಿಲ್ಲದೆ ಹೊಲದಲ್ಲಿ ಪತ್ತೆ! 

Leave A Reply

Your email address will not be published.