Jaipur: ಪತ್ನಿಗೆ ಜೀವನಾಂಶ ನೀಡಲು 280 ಕೆಜಿ ನಾಣ್ಯಗಳ ಮೂಟೆ ಸಮೇತ ಕೋರ್ಟ್ ಗೆ ಹಾಜರ್ ಆದ ಪತಿರಾಯ !

Latest national news husband gave 55000 compensation money to wife as form of coin in family court at Jaipur Rajasthan

Jaipur : ಪತ್ನಿಗೆ (wife) ಜೀವನಾಂಶ ನೀಡಲು ಗಂಡ 280 ಕೆಜಿ ನಾಣ್ಯಗಳ ಮೂಟೆ ಸಮೇತ ಕೋರ್ಟ್ ಗೆ ಹಾಜರ್ ಆದ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ. ಕೇವಲ ನಾಣ್ಯದಿಂದಲೇ 55 ಸಾವಿರ ರೂ. ಒಟ್ಟುಗೂಡಿಸಿ, ಪತ್ನಿಯ ಜೀವ​ನಾಂಶ​ವನ್ನು ನೀಡಿರುವುದು ವಿಭಿನ್ನವಾಗಿದೆ.

ದಶರಥ್‌ ಕುಮಾವತ್ ಹಾಗೂ ಸೀಮಾ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ನಂತರ ಈ ದಂಪತಿ ವಿಚ್ಛೇದನ ಪಡೆದಿದ್ದು, ನ್ಯಾಯಾಲಯವು ವಿಚ್ಛೇದನವಾಗಿ ಸೀಮಾಗೆ ಮಾಸಿಕ 5 ಸಾವಿರ ನೀಡುವಂತೆ ಆದೇಶ ಹೊರಡಿಸಿತ್ತು. ಆದರೆ ದಶರಥ್‌ ಹಣ‌ ನೀಡಿರಲಿಲ್ಲ. ಹಾಗಾಗಿ ಆತನನ್ನು ಜೂನ್ 17 ರಂದು
ಬಂಧಿ​ಸ​ಲಾ​ಗಿತ್ತು.

ನಂತರದಲ್ಲಿ ಈತ ತನ್ನ ವಿಚ್ಛೇದಿತ (divorce) ಪತ್ನಿಗೆ 11 ತಿಂಗಳ ಜೀವನಾಂಶವನ್ನು ಒಟ್ಟಿಗೆ ನೀಡಿದ್ದಾನೆ. 11 ತಿಂಗಳ 55 ಸಾವಿರ ರೂ. ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿ​ದ್ದಾನೆ. ಒಂದು ಹಾಗೂ ಎರಡು ರೂಪಾಯಿಯ ನಾಣ್ಯಗಳನ್ನು ಒಟ್ಟು 7 ಚೀಲಗಳಲ್ಲಿ ತುಂಬಿಸಿ ಮೂಟೆ ಸಮೇತ ಕೋರ್ಟ್ ಗೆ ಹಾಜರ್ ಆಗಿದ್ದಾನೆ.

ದಶರಥ್‌’ನ ಈ ವರ್ತನೆಗೆ ಮನೆಯವರು ಸೇರಿದಂತೆ ಕೋರ್ಟ್ ನಲ್ಲಿದ್ದವರೇ ಶಾಕ್ ಆಗಿದ್ದಾರೆ. ಅಲ್ಲದೆ, ಪತ್ನಿ ಸೀಮಾ ಕಡೆ ವಕೀಲರು ಇದು ಒಂದು ರೀತಿಯ ಹಿಂಸೆ ಎಂದು ಆರೋಪಿಸಿದ್ದಾರೆ. ಅದಕ್ಕಾಗಿ ನ್ಯಾಯಾಲಯ, ಜೂ.26 ರಂದು ಕೋ​ರ್ಟನಲ್ಲಿಯೇ ಈ ಎಲ್ಲ ನಾಣ್ಯಗಳನ್ನು ದಶರಥ್‌ ಕಡೆಯವರೇ ಎಣಿಕೆ ಮಾಡಿ ವಿಚ್ಚೇದಿತ ಪತ್ನಿಗೆ ನೀಡಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ: Adipurush: ಮತ್ತೊಂದು ವಿವಾದಕ್ಕೆ ಕಾರಣವಾಯ್ತು ‘ಆದಿಪುರುಷ್’ !! ಪೊಲೀಸ್ ಭದ್ರತೆಯೊಂದಿಗೆ ‘ಹನುಮಂತ ದೇವರೇ ಅಲ್ಲ’ ಎಂದ ಸಂಭಾಷಣೆಕಾರ !!

Leave A Reply

Your email address will not be published.