Home Karnataka State Politics Updates Pratap simha: ‘ಅನ್ನ ಭಾಗ್ಯ’ ಕ್ಕೆ ಎಲ್ಲೂ ದೊರೆಯದ ಅಕ್ಕಿ, ಗಂಡನ ಅಕೌಂಟ್‌ಗೆ ಅಕ್ಕಿಯ ಹಣ!?...

Pratap simha: ‘ಅನ್ನ ಭಾಗ್ಯ’ ಕ್ಕೆ ಎಲ್ಲೂ ದೊರೆಯದ ಅಕ್ಕಿ, ಗಂಡನ ಅಕೌಂಟ್‌ಗೆ ಅಕ್ಕಿಯ ಹಣ!? ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

Mysore MP Pratap Simha
Image source- Oneindia kannada, Public TV

Hindu neighbor gifts plot of land

Hindu neighbour gifts land to Muslim journalist

Mysore MP Pratap Simha: ರಾಜ್ಯ ಸರ್ಕಾರಕ್ಕೀಗ(State Government) ಅನ್ನ ಭಾಗ್ಯ(Anna bhagya) ಯೋಜನೆಗೆ ಅಕ್ಕಿ ಹೊಂದಿಸುವುದು ಭಾರೀ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಹಾಗೂ ಪ್ರತಿಪಕ್ಷಗಳು ದಿನೇ ದಿನೇ ಅಕ್ಕಿ ವಿಚಾರವಾಗಿ ವಾರ್ ಮಾಡುತ್ತಿವೆ. ಅದರಲ್ಲೂ ಸಂಸದ ಪ್ರತಾಪ್ ಸಿಂಹ(Mysore MP Pratap simha) ಅವರು ಸಿಎಂ ಸಿದ್ದರಾಮಯ್ಯನ(C M Siddaramaiah) ಮೇಲೆ, ಸರ್ಕಾರದ ಮೇಲೆ ಆಗಾಗ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಆದರೀಗ ಈ ವಿಚಾರವಾಗಿ ಸರ್ಕಾರಕ್ಕೆ ಮಹತ್ವದ ಸಲಹೆಯೊಂದನ್ನು ಅವರು ನೀಡಿದ್ದು ಭಾರೀ ವೈರಲ್ ಆಗ್ತಿದೆ.

ಕೇಂದ್ರದ ಬಿಜೆಪಿ (Central BJP Government) ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರಗಳ (State Government) ನಡುವೆ ಅಕ್ಕಿ ರಾಜಕೀಯ (Rice politics) ತೀವ್ರಗೊಂಡಿದ್ದು, ಇದೀಗ ಪ್ರತಿಭಟನೆಯ ಸ್ವರೂಪಕ್ಕೆ ತಿರುಗಿದೆ. ದುಡ್ಡುಕೊಟ್ಟರೂ ಅಕ್ಕಿ ಕೊಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಇಂದು ಬೃಹತ್‌ ಪ್ರತಿಭಟನೆಯನ್ನು (Protest tomorrow) ಕಾಂಗ್ರೆಸ್‌ ಹಮ್ಮಿಕೊಂಡಿದೆ. ಆದರೆ ಈ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಹೌದು, ಓಪನ್ ಮಾರ್ಕೆಟ್(Open market) ನಲ್ಲಿ ಅಕ್ಕಿ ಖರೀದಿ ಮಾಡಿ. ಅಕ್ಕಿ ಖರೀದಿ ಆಗದಿದ್ದರೆ, ಗಂಡನ ಅಕೌಂಟ್‌ಗೆ ಅಕ್ಕಿಯ ಹಣ ಹಾಕಿ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಎಲ್ಲಾ ಕಡೆ ಚುನಾವಣೆ ಇದೆ. ಅಲ್ಲೂ ನೀವು ಫ್ರೀ ಅಕ್ಕಿ ಘೋಷಣೆ ಮಾಡಿದರೆ ಅಕ್ಕಿ ಕೋಡೋಕೆ ಆಗುತ್ತಾ? ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ್ ಪ್ರಶ್ನಿಸಿದರು.

ಅಲ್ಲದೆ ಸಿಎಂ ಸಿದ್ದರಾಮಯ್ಯನವರು, ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಬಿಜೆಪಿ ಒತ್ತಡ ತರಲಿ ಎಂದು ಹೇಳಿದ್ದರು. ಈ ಹೇಳಿಕೆಗೆ ಮೈಸೂರಿನಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, 5 ಕೆ.ಜಿ ಅಕ್ಕಿ ಕೊಡುವುದು ಕೇಂದ್ರ ಸರ್ಕಾರ ಅಂತಾ ಪ್ರಥಮ ಬಾರಿಗೆ ಸತ್ಯ ಹೇಳಿದ್ದಕ್ಕೆ ಧನ್ಯವಾದ. ಮೋದಿ(PM Modi) ಅವರ 5 ಕೆ.ಜಿ.ಗೆ ನೀವು 10 ಕೆ.ಜಿ ಸೇರಿಸಿ ಕೊಡಬೇಕು. ಯಾರಾದೋ ದುಡ್ಡ ಕಾಂಗ್ರೆಸ್‌(Congress) ಜಾತ್ರೆನಾ ಇದು? ಮೋದಿ ಸರ್ಕಾರದ ಅಕ್ಕಿ ಸಿದ್ರಾಮಣ್ಣನ ಜಾತ್ರೆನಾ? ಎಂದು ವಾಗ್ದಾಳಿ ನಡೆಸಿದರು.

ಬಳಿಕ ಮಾತನಾಡಿದ ಅವರು ಮಹದೇವಪ್ಪ, ಎಂ.ಬಿ. ಪಾಟೀಲ್ ಇಬ್ಬರು ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಎಂದು ಹೇಳಿದ್ದಾರೆ ಎಂದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಸಿದ್ದರಾಮಯ್ಯ ತಮ್ಮ ಛೇಲಾ ಪಡೆ ಮೂಲಕ ತಾವೂ ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ತಾವೇ ಪೂರ್ಣವಧಿ ಸಿಎಂ ಅಂತಾ ನೇರವಾಗಿ ಹೇಳುವ ಧೈರ್ಯವಿಲ್ಲ. ಅವರಿಗೆ ಪುಕ್ಕಲತನ. ಚುನಾವಣೆ ಗೆಲ್ಲಲು ಡಿಕೆ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿ ಸಿಎಂ ಮಾಡಿದೆ. ಸಿದ್ದರಾಮಯ್ಯಗೆ ಆ ಧಾರಳ ಉದಾರತನದ ಮನಸ್ಸು ಇಲ್ಲ ಎಂದರು.

ಇದನ್ನೂ ಓದಿ: Uttar khand: 8 ಕೋಟಿ ರೂ. ದೋಚಿದ್ದ ಕತರ್ನಾಕ್ ದಂಪತಿ ಕೇವಲ 10 ರೂ. ಜ್ಯೂಸ್ ಗೆ ಆಸೆಪಟ್ಟು ತಗಲಾಕೊಂಡ್ರು!!