Home Karnataka State Politics Updates Prathap simha: ಸಿದ್ದರಾಮಯ್ಯನವ್ರೇ… ತಾಕತ್ತಿದ್ರೆ, ಧೈರ್ಯವಿದ್ರೆ 5 ವರ್ಷವೂ ನಾನೇ ಸಿಎಂ ಎಂದು ಘೋಷಿಸಿ!! ಸಿಎಂ...

Prathap simha: ಸಿದ್ದರಾಮಯ್ಯನವ್ರೇ… ತಾಕತ್ತಿದ್ರೆ, ಧೈರ್ಯವಿದ್ರೆ 5 ವರ್ಷವೂ ನಾನೇ ಸಿಎಂ ಎಂದು ಘೋಷಿಸಿ!! ಸಿಎಂ ಸಿದ್ದುಗೆ ಪ್ರತಾಪ್ ಸಿಂಹ ಸವಾಲ್!!

Prathap simha

Hindu neighbor gifts plot of land

Hindu neighbour gifts land to Muslim journalist

Prathap simha: ಕೆಲ ದಿನಗಳಿಂದ ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress) ನಾಯಕರ ನಡುವೆ ಟಾಕ್ ವಾರ್(Talk war) ನಡೆಯುತ್ತಿದೆ. ಅದರಲ್ಲೂ ಕೂಡ ಮೈಸೂರು ಸಂಸದ ಪ್ರತಾಪ್ ಸಿಂಹ(Prathap simha) ಅವರು ಸಿದ್ದರಾಮಯ್ಯ(Siddaramaiah) ಹಾಗೂ ಇತರ ನಾಯಕರಗಳ ಮೇಲೆ ಅತಿ ತೀಕ್ಷ್ಣವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಈಗ ಸಿಎಂ ಸಿದ್ದುಗೆ ಪ್ರತಾಪ್ ಸಿಂಹ ಅವರು ನೇರವಾಗಿ ಸವಾಲು ಹಾಕಿದ್ದಾರೆ.

ಹೌದು, ಕಾಂಗ್ರೆಸ್ ಸರ್ಕಾರದಲ್ಲಿ 50:50 ಸಿಎಂ ಪಾಲಿಸಿ ಪಾಲಿಸಲಾಗುತ್ತಿದೆ, ಒಪ್ಪಂದವೂ ಆಗಿದೆ ಎಂಬ ಮಾತಿದೆ. ಆದರೆ ಈ ಬಗ್ಗೆ ಕೆಲ ನಾಯಕರು, ಸಚಿವರು ಮಾತನಾಡಿ ಸಿದ್ದರಾಮಯ್ಯನವರೇ ಮುಂದಿನ 5 ವರ್ಷಗಳ ವರೆಗೆ ಸಿಎಂ ಆಗಿರುತ್ತಾರೆ. ಅರ್ಧ ಸಿಎಂ ಅನ್ನೋ ಮಾತುಕತೆ ನಡೆದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಪ್ರತಾಪ್ ಸಿಂಹ ಮಧ್ಯ ಪ್ರವೇಶಿಸಿ, ಸಿದ್ರಾಮಯ್ಯ ಅವರಿಗೆ ತಾಕತ್ತಿದ್ದರೆ 5 ವರ್ಷಗಳ ಕಾಲ ನಾನೇ ಸಿಎಂ ಎಂದು ಧೈರ್ಯವಾಗಿ ಹೇಳಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯರನ್ನು ಸಿಎಂ ಮಾಡಿದೆ. ಆದರೆ ಸಿದ್ದರಾಮಯ್ಯಗೆ ಉದಾರತನದ ಮನಸ್ಸು ಇಲ್ಲ. ಯಾಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಹೀಗಾಗಿ ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ. ಸಚಿವರಾದ ಮಹದೇವಪ್ಪ (Madevappa), ಎಂ.ಬಿ.ಪಾಟೀಲ್ (MB Patil) ​ಮೂಲಕ ಹೇಳಿಸಿದ್ದಾರೆ. ಸಿದ್ದರಾಮಯ್ಯಗೆ ಪೂರ್ಣವಧಿ ಸಿಎಂ ಅಂತಾ ಹೇಳುವ ಧೈರ್ಯವಿಲ್ಲ. ಒಂದು ವೇಳೆ ಇದೆಲ್ಲವೂ ಸುಳ್ಳು ಎಂದಾದಲ್ಲಿ ಸಿದ್ರಾಮಯ್ಯ ಅವರಿಗೆ ತಾಕತ್ತಿದ್ದರೆ 5 ವರ್ಷಗಳ ಕಾಲ ನಾನೇ ಸಿಎಂ ಎಂದು ಧೈರ್ಯವಾಗಿ ಹೇಳಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಅಲ್ಲದೆ ಕಾಂಗ್ರೆಸ್​​ ಸಂಸದ ಡಿ.ಕೆ.ಸುರೇಶ್(DK Suresh) ವಿಧಾನಸೌಧದಲ್ಲಿ(Vidhanasowdha) ಶರ್ಟ್ ಎಳೆದಿದ್ದಾರೆ. ಮತ್ತೊಮ್ಮೆ 5 ವರ್ಷ ಸಿಎಂ ಅಂದರೇ ನಿಮ್ಮ ಕೊರಳ ಪಟ್ಟಿ ಹಿಡಿಯುತ್ತಾರೆ. ಸಿದ್ದರಾಮಯ್ಯ ಅವರಿಗೆ ತಾವೇ ಪೂರ್ಣವಧಿ ಸಿಎಂ ಅಂತ ನೇರವಾಗಿ ಹೇಳುವ ಧೈರ್ಯವೂ ಇಲ್ಲ. ಅವರಿಗೆ ಪುಕ್ಕಲತನ. ಚುನಾವಣೆ ಗೆಲ್ಲಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಪಾತ್ರ ದೊಡ್ಡದಿದೆ ಎಂದು ಹೇಳಿದ್ದಾರೆ.

ಇನ್ನು ಸಂಸದ ಪ್ರತಾಪ್​ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಎಂ.ಬಿ.ಪಾಟೀಲ್​ಗೆ(M B Patil) ಸಿಕ್ಕಿದ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ಒದ್ದಾಡುತ್ತಿದ್ದಾರೆ. ಎಂ.ಬಿ.ಪಾಟೀಲ್ ಅವರಿಗೆ ಬರೀ ಚಿಲ್ಲರೆ, ನೋಟಿನ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ’ ಎಂದು ಹರಿಹಾಯ್ದಿದ್ದಾರೆ.

 

ಇದನ್ನು ಓದಿ: Bus accident: ಫೋನ್‌ನಲ್ಲಿ ಮಾತನಾಡುತ್ತಾ ಸೇತುವೆಗೆ ಡಿಕ್ಕಿ ಹೊಡೆದ ಚಾಲಕ! 26ಮಂದಿ ಗಾಯ, ಇಬ್ಬರ ಸ್ಥಿತಿ ಗಂಭೀರ