Madhu Bangarappa: ‘ಬಿಜೆಪಿ’ ವ್ಯಾಖ್ಯಾನಿಸೋ ಭರದಲ್ಲಿ ‘ಬ್ರಿಟಿಷ್’ ಎಂದೆಲ್ಲಾ ವಾಗ್ದಾಳಿ ನಡೆಸಿದ ಮಧು ಬಂಗಾರಪ್ಪ!! ಶಿಕ್ಷಣ ಸಚಿವರೂ ಹೀಗನ್ನಬಹುದೆ?

latest Karnataka political news BJP means business Janata party British Janata party Education minister Madhu bangarappa statement about BJP

Madhu bangarappa: ಬಿಜೆಪಿ(BJP) ಇಲ್ಲಿಯವರೆಗೂ ಬ್ಯುಸಿನೆಸ್ (ವ್ಯವಹಾರ) ಜನತಾ ಪಕ್ಷವಾಗಿತ್ತು. ಈಗ ಭ್ರಷ್ಟ ಜನತಾ ಪಕ್ಷ ಎಂಬುದೂ ಸಾಬೀತಾಗಿದೆ. ಜೊತೆಗೆ ಅದನ್ನು ಬ್ರಿಟಿಷ್ ಜನತಾ ಪಾರ್ಟಿ ಎಂದೂ ಹೇಳಬಹುದಾಗಿದೆ ಎಂದು ಸಚಿವ ಮಧು ಬಂಗಾರಪ್ಪನವರು(Madhu bangarappa) ಹೇಳಿಕೆಯೊಂದನ್ನು ನೀಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಹೌದು, ಕೆಲವು ತಿಂಗಳುಗಳ ಹಿಂದೆ “ಅಧಿಕಾರಿಗಳ ವರ್ಗಾವಣೆ, ಭಿವೃದ್ಧಿ ಕಾಮಗಾರಿಯಲ್ಲಿ ಕಮಿಷನ್‌ ಪಡೆಯುವ ಬಿಜೆಪಿ ನಾಯಕರಿಂದಾಗಿ(BJP leaders) ಅದು ಬಿಸಿನೆಸ್‌ ಜನತಾ ಪಾರ್ಟಿಯಾಗಿದೆ(Business janata party)ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ(Education Minister madhu bangarappa) ಟೀಕಿಸಿದ್ದರು. ಇದೀಗ ಮತ್ತೆಯೂ ಇದೇ ರೀತಿಯ ಹೇಳಿಕೆಯೊಂದನ್ನು ನೀಡಿ ಬಿಜೆಪಿ ಅಂದರೆ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ(British janata party). ಇದನ್ನೇ ಜನ ತೋರಿಸಿಕೊಟ್ಟಿದ್ದಾರೆ. ಅದನ್ನು ನೋಡಿ ಕಲಿಯಿರಿ, ಭಾಷಣ ಮಾಡುವುದು ಬಿಡಿ ಎಂದು ವಿರುದ್ಧ ಕಿಡಿಕಾರಿದ್ದಾರೆ.

ಗ್ಯಾರಂಟಿ ಸರ್ಕಾರ ಉಳಿಯುವುದಿಲ್ಲ ಎಂಬ ಬಿಎಸ್ವೈ(BSY) ಹೇಳಿಕೆಗೆ ತಿರುಗೇಟು ನೀಡಿದ ಅವರು, ಇವರ 65 ಸ್ಥಾನ ಇರುವುದು 165 ಆಗುತ್ತಾ? ಇನ್ನು ಅದೇ ಲೆಕ್ಕದಲ್ಲೇ ಬಿಜೆಪಿಯವರು ಇದ್ದಾರೆ. ಜೀವಮಾನದಲ್ಲಿ ಯಾವತ್ತಾದರೂ ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಬಿಜೆಪಿ ಕೆಲಸ ಮಾಡಿದ್ದಾರಾ‌? ಇಂತಹ ಬಿಜೆಪಿ ಸರ್ಕಾರ ಬೇಡ ಎಂದು ಜನರೇ ನಿರ್ಧಾರ ಕೊಟ್ಟಿದ್ದಾರೆ ಎಂದಿದ್ದಾರೆ.

ಅಲ್ಲದೆ ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರವಾಗಿ ಮಾತನಾಡಿ, ನಾವು ಪ್ರಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ. ಅವರು ಅದನ್ನು ಓದಲಿ. ಮತಾಂತರ ಮಾಡುತ್ತಾರೆಂದು ಇವರು ಭಾಷಣ ಹೊಡೆದಿದರಲ್ಲಾ ಅದೇ ಜನರೇ ನಮಗೆ ವೋಟ್ ಹಾಕಿ ಗೆಲ್ಲಿಸಿದ್ದು‌. ಮೊದಲು ಪ್ರಣಾಳಿಕೆ ಓದಲಿ, ನಂತರ ನಾನು ಉತ್ತರ ಕೊಡುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು ಬಿಜೆಪಿಯವರಿಗೆ ಸುಳ್ಳು ಹೇಳುವುದಕ್ಕೂ ವಿಷಯವಿಲ್ಲ. ಯುವಕರ ತಲೆಯಲ್ಲಿ ಹಿಂದುತ್ವ ತುಂಬಿ ಸಮಾಜದಲ್ಲಿ ದ್ವೇಷ ಮೂಡಿಸುತ್ತಿದ್ದಾರೆ. ಯುವಕರನ್ನು ಜೈಲುಗಳಲ್ಲಿ ಸಾಲಾಗಿ ನಿಲ್ಲುವಂತೆ ಮಾಡಿದ್ದಾರೆ. ಬಿಜೆಪಿಯ ಪಾಪದ ಕೊಡ ತುಂಬಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮಾಜಿ ಸಚಿವ ಅನ್ಬುಮಣಿ ರಾಮದಾಸ್‌ ಅವರಿಂದ ತಮಿಳು ನಟ ವಿಜಯ್ ಗೆ ಖಡಕ್ ಎಚ್ಚರಿಕೆ! ಅಷ್ಟಕ್ಕೂ ದಳಪತಿ ಮಾಡಿದ ತಪ್ಪಾದರೂ ಏನು?

Leave A Reply

Your email address will not be published.