Sleep Divorce: ದಂಪತಿಗಳಿಂದ ನಿದ್ರೆಗಾಗಿ ವಿಚ್ಛೇದನಕ್ಕೆ ಅರ್ಜಿ! ಇದೆಷ್ಟು ಉಪಯುಕ್ತ ಗೊತ್ತೇ?

What are the benefits of sleep divorce Is it good for married couples to sleep separately here is details

Sleep Divorce: ಇತ್ತೀಚೆಗೆ ಜನರ ಜೀವನ ಬಿಡುವಿಲ್ಲದ ರೀತಿಯಾಗಿ ಹೋಗಿಬಿಟ್ಟಿದೆ. ಹಾಗಾಗಿ ಈ ಜೀವನಶೈಲಿಯಿಂದಾಗಿ ಜನರ ಜೀವನದಲ್ಲಿ ಒತ್ತಡವೂ ಹೆಚ್ಚುತ್ತಿದೆ. ಅದು ಕಚೇರಿ ಅಥವಾ ಮನೆಕೆಲಸಗಳಾಗಿರಲಿ, ಜನರು ತಮ್ಮ ದಿನನಿತ್ಯದ ಬಿಡುವಿಲ್ಲದ ಜೀವನದಿಂದ ತಮ್ಮ ಆರೋಗ್ಯವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳಲ್ಲಿ ನಿದ್ರಾಹೀನತೆ ಕೂಡ ಸೇರಿದೆ.

ಇಡೀ ದಿನ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಅನೇಕ ಜನರು ರಾತ್ರಿಯಲ್ಲಿ ಉತ್ತಮ ನಿದ್ರೆಗಾಗಿ ಪರದಾಡುತ್ತಾರೆ. ವಿಶೇಷವಾಗಿ ಈ ಸಮಸ್ಯೆಗೆ ಒಳಗಾಗುವುದು ದಂಪತಿಗಳು. ಇದೇ ಈಗ ವಿಚ್ಛೇದನಕ್ಕೇ ಕಾರಣವಾಗುತ್ತಿದೆ. ಅದು ಕೂಡಾ ಎಂತ ವಿಚ್ಛೇದನ ಗೊತ್ತೇ? ನಿದ್ರೆಯ ವಿಚ್ಛೇದನ (Sleep Divorce). ಇದು ಹೇಗೆ? ಯಾವಾಗ ತಗೋಬಹುದು? ಇಲ್ಲಿದೆ ಉತ್ತರ.

ಏನಿದು ಸ್ಲೀಪ್‌ ಡಿವೋರ್ಸ್‌?
ಉತ್ತಮ ಮತ್ತು ಗುಣಮಟ್ಟದ ನಿದ್ರೆಗಾಗಿ, ದಂಪತಿಗಳು ವಿವಿಧ ಕೊಠಡಿಗಳು, ಹಾಸಿಗೆಗಳು ಅಥವಾ ವಿವಿಧ ಸಮಯಗಳಲ್ಲಿ ಮಲಗುತ್ತಾರೆ. ಇದನ್ನು ನಿದ್ರೆ ವಿಚ್ಛೇದನ ಎಂದು ಕರೆಯಲಾಗುತ್ತದೆ. ಸುಲಭವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಯು ಲೈಟ್‌ ಆಫ್‌ ಮಾಡುವ ಮೂಲಕ ಮಲಗುವ ಅಭ್ಯಾಸ ಹೊಂದಿರಬೇಕು. ಇನ್ನೊಬ್ಬ ಲೈಟ್‌ ಆನ್‌ ಮಾಡಿ ಮಲಗುವ ಪರಿಪಾಠ ಬೆಳೆಸುತ್ತಾನೆ. ಇದು ದಂಪತಿಗಳು ಪ್ರತ್ಯೇಕ ಕೊಠಡಿಗಳಲ್ಲಿ ಮಲಗಲು ಕೂಡಾ ಇದೊಂದು ಕಾರಣ ಎಂದು ಹೇಳಬಹುದು.

ಎಷ್ಟು ಸಮಯಕ್ಕೆ ಈ ಸ್ಲೀಪ್‌ ಡಿವೋರ್ಸ್‌ ದೊರೆಯುತ್ತದೆ?
ನಿದ್ರೆಯ ವಿಚ್ಛೇದನಕ್ಕೆ ನಿಗದಿತ ಸಮಯವಿಲ್ಲ. ಕೆಲವರಿಗೆ ನಿದ್ರೆಯ ವಿಚ್ಛೇದನವು ದೀರ್ಘಕಾಲದವರೆಗೆ ಆಗಬಹುದು ಮತ್ತು ಕೆಲವರಿಗೆ ಇದು ಅಲ್ಪಾವಧಿಯದ್ದಾಗಿರಬಹುದು. ನಿದ್ರೆಯ ವಿಚ್ಛೇದನದ ಮಾದರಿಯು ಯುವ ಮತ್ತು ವಯಸ್ಸಾದ ದಂಪತಿಗಳಲ್ಲಿ ಗೋಚರಿಸುತ್ತದೆ ಎಂದು ಹೇಳಲಾಗಿದೆ. ಕಾರಣ ನಿದ್ರೆಯ ಕೊರತೆಯು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಹೆಲ್ತ್ ಟೆಕ್ ಕಂಪನಿ ಫಿಲಿಪ್ಸ್ ಇಂಡಿಯಾದ 2019 ರ ಅಂಕಿಅಂಶಗಳ ಪ್ರಕಾರ, ಸುಮಾರು 93 ಪ್ರತಿಶತ ಭಾರತೀಯರು ಸಾಕಷ್ಟು ನಿದ್ರೆ ಪಡೆಯುವುದಿಲ್ಲ ಎಂದು ವರದಿ ಮಾಡಿದೆ.

ಸ್ಲೀಪ್‌ ಡಿವೋರ್ಸ್‌ನ ಪ್ರಯೋಜನವೇನು?
ಕೆಲವು ಗಂಟೆಗಳ ಕಾಲ ಯಾವುದೇ ತೊಂದರೆಯಿಲ್ಲದೆ ವ್ಯಕ್ತಿ ಉತ್ತಮ ನಿದ್ರೆಯನ್ನು ಹೊಂದಲು ಬಯಸುವ ಸಮಯಕ್ಕಾಗಿ ಇಂತದ್ದೊಂದು ನೀಡಲಾಗಿದೆ. ಸ್ಲೀಪ್ ವಿಚ್ಛೇದನವು ಯಾವುದೇ ವ್ಯಕ್ತಿಯ ವೈಯಕ್ತಿಕ ನಿರ್ಧಾರ. ಇದು ದಂಪತಿಗಳ ಸಂಬಂಧದಲ್ಲಿ ಅಂತರವನ್ನು ತರುವುದಿಲ್ಲ, ಆದರೆ ಪರಸ್ಪರ ಒಪ್ಪಿಗೆ ಮತ್ತು ತಿಳುವಳಿಕೆಯೊಂದಿಗೆ, ದಂಪತಿಗಳು ಪರಸ್ಪರರ ಅಗತ್ಯಗಳನ್ನು ಗೌರವಿಸಬೇಕು. ಪ್ರತ್ಯೇಕ ಕೋಣೆಯಲ್ಲಿ ಮಲಗುವುದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಮಾದಕ ವ್ಯಸನಿಗಳೇ ಎಚ್ಚರ..! ಆಲ್ಕೋಹಾಲ್ ಸೇವನೆಯಿಂದ ʻಯಕೃತ್ತಿನ ಕ್ಯಾನ್ಸರ್ʼ ಪ್ರಕರಣ ಶೇ. 40 ರಷ್ಟು ಹೆಚ್ಚಳ.!

Leave A Reply

Your email address will not be published.