Daily Horoscope 18/06/2023: ವ್ಯವಹಾರದಲ್ಲಿ ಅಪೇಕ್ಷಿತ ಫಲಿತಾಂಶ, ಜೊತೆಗೆ ಉದ್ಯೋಗದಲ್ಲಿ ಪ್ರಮುಖ ನಿರ್ಧಾರ ತೆಗದುಕೊಳ್ಳುವಲ್ಲಿ ಈ ರಾಶಿಯವರಿಗೆ ಲಾಭ

Daily Horoscope 18/06/2023

Daily Horoscope 18/06/2023:
ಮೇಷ ರಾಶಿ.
ಉದ್ಯೋಗಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ದೊರೆಯುತ್ತದೆ.ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಹಿರಿಯರೊಂದಿಗೆ ಸಂಪರ್ಕಗಳು ಹೆಚ್ಚಾಗುತ್ತದೆ.ಕೆಲವು ಕೆಲಸಗಳು ಅನುಕೂಲಕರವಾಗಿ ಪರಿಣಮಿಸುತ್ತವೆ. ಆಕಸ್ಮಿಕ ಧನಲಾಭವಿದೆ. ವ್ಯಾಪಾರಗಳು ಅಭಿವೃದ್ಧಿ ಹೊಂದುತ್ತವೆ. ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ.

ವೃಷಭ ರಾಶಿ.
ಕೌಟುಂಬಿಕ ವಿಚಾರಗಳಲ್ಲಿ ತೊಡಕುಗಳು ಉಂಟಾಗುತ್ತವೆ.ಹಣಕಾಸಿನ ತೊಂದರೆಗಳಿವೆ.ಖರ್ಚುಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ದೈವಿಕ ಚಿಂತನೆಯು ಹೆಚ್ಚಾಗುತ್ತದೆ. ವ್ಯವಹಾರಗಳಲ್ಲಿ ಖಿನ್ನತೆಯ ವಾತಾವರಣವಿರುತ್ತದೆ,ಉದ್ಯೋಗದಲ್ಲಿ ಕೆಲವರ ವರ್ತನೆ ಕಿರಿಕಿರಿಯನ್ನುಂಟು ಮಾಡುತ್ತದೆ.

ಮಿಥುನ ರಾಶಿ.
ಕೆಲಸದಲ್ಲಿ ಅಒರಯತ್ನವಾಗಿ ಕಾರ್ಯಸಿದ್ದಿ ದೊರೆಯುತ್ತದೆ.ಬಂಧು ಮಿತ್ರರೊಂದಿಗೆ ಸೌಹಾರ್ದತೆ ಹೆಚ್ಚುತ್ತದೆ.ಹಠಾತ್ ಧನಲಾಭವಿದೆ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವಸ್ತ್ರ ಮತ್ತು ಆಭರಣಗಳನ್ನು ಖರೀದಿಸುತ್ತೀರಿ.ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ. ದೀರ್ಘಾವಧಿಯ ಸಾಲಗಳನ್ನು ತೀರಿಸುತ್ತೀರಿ.

ಕಟಕ ರಾಶಿ.
ಕುಟುಂಬ ಸದಸ್ಯರ ನಡವಳಿಕೆಯು ಆಶ್ಚರ್ಯಕರವಾಗಿರುತ್ತದೆ.ಹೊಸ ಸಾಲಗಳನ್ನು ಮಾಡಬೇಕಾಗಬಹುದು. ಪ್ರಯಾಣಗಳು ಮುಂದೂಡಲ್ಪಡುತ್ತವೆ.ವ್ಯಾಪಾರದಲ್ಲಿ ಅನಿರೀಕ್ಷಿತ ವಿವಾದಗಳು ಉದ್ಭವಿಸುತ್ತವೆ.ನಿರುದ್ಯೋಗಿಗಳು ಅಧಿಕಾರಿಗಳಿಂದ ಅನುಕೂಲತೆ ಇರುವುದಿಲ್ಲ. ಪ್ರಯಾಣದಲ್ಲಿ ಅಪಾಯದ ಸೂಚನೆಗಳಿವೆ.

ಸಿಂಹ ರಾಶಿ.
ಕೈಗೊಂಡ ಕೆಲಸಗಳಲ್ಲಿ ಆಕಸ್ಮಿಕ ಧನಲಾಭ ಉಂಟಾಗುತ್ತದೆ.ಸಮಾಜದಲ್ಲಿ ಹಿರಿಯರ ಸಂಪರ್ಕಗಳು ಹೆಚ್ಚಾಗುತ್ತದೆ.ಅನಿರೀಕ್ಷಿತ ಆಹ್ವಾನಗಳು ಬರುತ್ತವೆ.ಸಮಾಜಕ್ಕೆ ಉಪಯುಕ್ತವಾಗುವ ಕೆಲಸಗಳನ್ನು ನೆರವೇರುಸುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ಹೊಸ ಪ್ರೋತ್ಸಾಹ ದೊರೆಯಲಿದೆ.ಉದ್ಯೋಗದಲ್ಲಿ ಅಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತೀರಿ.

Daily Horoscope 18/06/2023

ಕನ್ಯಾ ರಾಶಿ.
ತಂದೆಯವರ ಕಡೆಯ ಬಂಧುಗಳಿಂದ ಆಹ್ವಾನಗಳು ಬರಲಿವೆ. ಕೌಟುಂಬಿಕ ವಾತಾವರಣ ಲವಲವಿಕೆಯಿಂದ ಕೂಡಿರುತ್ತದೆ.ಭೂಮಿ ಸಂಬಂಧಿತ ವಿವಾದಗಳು ಬಗೆಹರಿಯುತ್ತವೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು ವ್ಯವಹಾರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ.

ತುಲಾ ರಾಶಿ.
ಪ್ರಮುಖ ವಿಷಯಗಳಲ್ಲಿ ಆಲೋಚನೆಗಳು ಎರಡು ರೀತಿಯಲ್ಲಿ ಬದಲಾಗುತ್ತವೆ, ಕುಟುಂಬ ಸದಸ್ಯರ ಒತ್ತಡ ಹೆಚ್ಚಾಗುತ್ತದೆ, ಸ್ಥಿರಾಸ್ತಿ ವಿವಾದಗಳು ಉದ್ಭವಿಸುತ್ತವೆ. ದೈವಿಕ ಕಾರ್ಯಗಳತ್ತ ಗಮನಹರಿಸುತ್ತೀರಿ.ಅನಾರೋಗ್ಯದ ಸೂಚನೆಗಳಿವೆ.ವ್ಯಾಪಾರ ಮತ್ತು ಉದ್ಯೋಗಳಲ್ಲಿ ಹೆಚ್ಚುವರಿ ಕೆಲಸದ ಹೊರೆ ಆಯಾಸವನ್ನು ಉಂಟುಮಾಡುತ್ತದೆ.

ವೃಶ್ಚಿಕ ರಾಶಿ.
ವ್ಯಾಪಾರದ ವಿಷಯದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೈಗೆತ್ತಿಕೊಂಡ ಕೆಲಸಗಳು ಮುಂದಕ್ಕೆ ಸಾಗದೆ ಕಿರಿಕಿರಿ ಉಂಟಾಗುತ್ತದೆ.ಹೊಸ ಸಾಲ ಮಾಡಬೇಕಾಗಬಹುದು,ಆತ್ಮೀಯರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ.ವೃತ್ತಿ ಮತ್ತು ಉದ್ಯೋಗದಲ್ಲಿ ಖಿನ್ನತೆಯ ವಾತಾವರಣವಿರುತ್ತದೆ.

ಧನುಸ್ಸು ರಾಶಿ.
ಕೈಗೆತ್ತಿಕೊಂಡ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ, ಕುಟುಂಬ ಸದಸ್ಯರೊಂದಿಗೆ ಭೋಜನಾ,ಮನೋರಂಜನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ.ಆರ್ಥಿಕ ಲಾಭ ದೊರೆಯುತ್ತದೆ.ಯೋಜನೆಗಳು ಕೂಡಿ ಬರುತ್ತವೆ. ಹೊಸ ವ್ಯವಹಾರಗಳಿಂದ ಲಾಭ ದೊರೆಯುತ್ತದೆ.ಉದ್ಯೋಗಗಳಿಗೆ ಉನ್ನತಿ ದೊರೆಯುತ್ತದ.

ಮಕರ ರಾಶಿ.
ಬಹುಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಆದ್ಯತೆ ಹೆಚ್ಚಲಿದೆ.ಹೊಸ ವ್ಯಾಪಾರ ವಿಸ್ತರಣೆಗೆ ಪ್ರಯತ್ನಗಳು ಕೂಡಿ ಬರುತ್ತವೆ.ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ವಾಹನ ಮಾರಾಟ ಪ್ರಕ್ರಿಯೆಗಳು ಲಾಭದಾಯಕವಾಗಿರುತ್ತವೆ.

ಕುಂಭ ರಾಶಿ.
ಸಾಲದ ಹೊರೆ ಹೆಚ್ಚಾಗಲಿದೆ ಮತ್ತು ಹೊಸ ಸಾಲಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ವೃತ್ತಿ ವ್ಯವಹಾರಗಳಲ್ಲಿ ಸ್ವಲ್ಪ ಅಡಚಣೆಗಳು ಉಂಟಾಗುತ್ತವೆ. ಬಂಧುಗಳೊಂದಿಗೆ ವಾದ-ವಿವಾದಗಳಿಂದ ದೂರವಿರುವುದು ಉತ್ತಮ.ಪ್ರಯಾಣದಲ್ಲಿ ವಾಹನ ತೊಂದರೆ ಉಂಟಾಗುತ್ತವೆ.ಹೊಸ ಹೂಡಿಕೆಗಳು ಕೂಡಿ ಬರುವುದಿಲ್ಲ.ಉದ್ಯೋಗಗಳಲ್ಲಿ ಟೀಕೆಗಳು ಹೆಚ್ಚಾಗುತ್ತವೆ.

ಮೀನ ರಾಶಿ.
ಹಣಕಾಸಿನ ವಿಷಯಗಳಲ್ಲಿ ಮಿಶ್ರ ಫಲಿತಾಂಶಗಳಿವೆ. ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ.ದೂರದ ಬಂಧುಗಳಿಂದ ಬಂದ ಸುದ್ದಿ ದುಃಖ ತರುತ್ತದೆ. ದೂರದ ಪ್ರಯಾಣದ ಸೂಚನೆಗಳಿವೆ.ನಿರುದ್ಯೋಗಿಗಳಿಗೆ ಸಾಮಾನ್ಯ ವಾತವರಣವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸುವುದು ಒಳ್ಳೆಯದು.

Daily Horoscope 18/06/2023

ಇದನ್ನೂ ಓದಿ: Chamarajnagar: ಉಚಿತ ಬಸ್ ಪ್ರಯಾಣ ಎಫೆಕ್ಟ್ : ಬಸ್ ಹತ್ತೋ ಭರದಲ್ಲಿ ಡೋರ್ ಮುರಿದ ನಾರಿಮಣಿಯರು!! ಕಂಡಕ್ಟರ್ ಪರದಾಟ!!

Leave A Reply

Your email address will not be published.