Home News Subramani swamy: ಮೋದಿ ಎಷ್ಟೇ ಬುದ್ಧಿವಂತ ಆದ್ರೂ ಅರ್ಥಶಾಸ್ತ್ರದಲ್ಲಿ ದಡ್ಡ, ಅನಕ್ಷರಸ್ಥ!! ಬಿಜೆಪಿ ಸಂಸದ ಸುಬ್ರಹ್ಮಣಿಯನ್...

Subramani swamy: ಮೋದಿ ಎಷ್ಟೇ ಬುದ್ಧಿವಂತ ಆದ್ರೂ ಅರ್ಥಶಾಸ್ತ್ರದಲ್ಲಿ ದಡ್ಡ, ಅನಕ್ಷರಸ್ಥ!! ಬಿಜೆಪಿ ಸಂಸದ ಸುಬ್ರಹ್ಮಣಿಯನ್ ವ್ಯಂಗ್ಯ!!

Subramani swamy
Image source- Prajavani

Hindu neighbor gifts plot of land

Hindu neighbour gifts land to Muslim journalist

Subramani swamy: ಬಿಜೆಪಿ ಸಂಸ(BJP MP)ದರೇ ಆದಂತಹ ಸುಬ್ರಮಣಿಸ್ವಾಮಿ(Subramani swamy) ಅವರು ಆಗಾಗ ಸ್ವಪಕ್ಷವನ್ನು ಹಾಗೂ ನಾಯಕರನ್ನು ಟೀಕಿಸುತ್ತಿರುತ್ತಾರೆ. ಒಮ್ಮೊಮ್ಮೆ ಮೋದಿಯವರ ಕಾಲೆಳೆಯುವುದು ಉಂಟು. ಅಂತೆಯೇ ಇದೀಗ ಸಸುಬ್ರಮಣಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ(PM Modi) ”ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ’ ಎಂದು ಗೇಲಿ ಮಾಡಿದ್ದಾರೆ.

 

ಹೌದು, ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿ(Economic roles) ಹಾಗೂ ಹಣಕಾಸು ಇಲಾಖೆಯ(Economic department) ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಹಾಗೂ ಹಿರಿಯ ಸಂಸದ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ ಎಂದು ಕರೆದಿದ್ದಾರೆ.

 

ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿರುವ ಸುಬ್ರಮಣಿಯನ್‌ ಸ್ವಾಮಿ, ಹಣಕಾಸು ಇಲಾಖೆ ಮತ್ತು ಪ್ರಧಾನಿ ಮೋದಿಯನ್ನು ಮೂದಲಿಸಿದ್ದಾರೆ. ‘ಭಾರತ ಆರ್ಥಿಕತೆಗೆ(Indian Economy) ಪ್ರತಿವರ್ಷ ಜಿಡಿಪಿಯ ಶೇ 10ರಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ. ಇದರ ಮೂಲಕ 10 ವರ್ಷಗಳಲ್ಲಿ ನಿರುದ್ಯೋಗವನ್ನು ಕೊನೆಗೊಳಿಸುವ ಶಕ್ತಿ ಹೊಂದಿದೆ. ಈ ಮೂಲಕ ಬಡತನವನ್ನು ತೊಡೆದುಹಾಕಲು ಶಕ್ತವಾಗಿದೆ. ಆದರೆ ಹಣಕಾಸು ಇಲಾಖೆಗೆ ಇದರ ಸುಳಿವೇ ಇಲ್ಲ. ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥರು…’ ಎಂದು ಗೇಲಿ ಮಾಡಿದ್ದಾರೆ.

 

ಅಂದಹಾಗೆ ಬಿಜೆಪಿ(BJP) ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ(Modi) ಅವರ ಹಲವು ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸುವ ಮೂಲಕ ಸುಬ್ರಮಣಿಸ್ವಾಮಿ ಆಗಾಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಕೂಡ ಸುಬ್ರಮಣಿಯನ್ ಸ್ವಾಮಿ, ಕೇಂದ್ರ ಸರ್ಕಾರದ ಬಜೆಟ್ ಸೇರಿದಂತ ಹಲವು ವಿಚಾರಗಳಲ್ಲಿ ಹಣಕಾಸು ಸಚಿವಾಲಯದ ನಡೆಯನ್ನು ಟೀಕಿಸಿದ್ದರು.

 

ಅಲ್ಲದೇ, ಲೋಕಸಭೆಯ ಸದಸ್ಯತ್ವದಿಂದ ರಾಹುಲ್(Rahul gandhi)ಗಾಂಧಿಯನ್ನು ಅನರ್ಹಗೊಳಿಸಿದಾಗ ದೇಶ-ವಿದೇಶದ ರಾಜಕಾರಣಿಗಳು, ಚಿಂತಕರು ಸೇರಿದಂತೆ ಅಮೇರಿಕಾವ ವಿದೇಶಾಂಗ ಇಲಾಖೆಯೂ ಅನರ್ಹತೆ ಕುರಿತು ಖಂಡಿಸಿತ್ತು. ಆಗ ಸುಬ್ರಮಣಿಯನ್ ಸ್ವಾಮಿ, ಸರ್ಕಾರದ ಕ್ರಮವನ್ನು ಅಮೆರಿಕ ವಿದೇಶಾಂಗ ಇಲಾಖೆ ಖಂಡಿಸಿದೆ. ಇದಕ್ಕೆ ಮೋದಿ ಸರ್ಕಾರದ ಉತ್ತರವೇನು? ಎಂದು ಪ್ರಶ್ನಿಸಿದ್ದರು.

 

 

ಇದನ್ನು ಓದಿ: Kerala Dance Class: ಕಲಾಮಂಡಲಂ ನಲ್ಲಿ ಕಥಕ್ಕಳಿ ಕೋರ್ಸ್ ಗೆ ಮೊದಲ ಬಾರಿ ಮುಸ್ಲಿಂ ಬಾಲಕಿ ಸೇರ್ಪಡೆ!