Sakshi shivanand: ಪ್ರೀತಿ ಬಲೆಗೆ ಬಿದ್ದು ಗಂಡನಿಂದಲೇ ಮೋಸ ಹೋದ ಸಾಕ್ಷಿ ಶಿವಾನಂದ್!! ಸಿನಿಮಾ ಬದುಕಿನಿಂದಲೇ ದೂರವಾದ ನಟಿ ಈಗ ಹೇಗಿದ್ದಾರೆ?
latest news cinema news Unknown facts about actress Sakshi Shivanand and her life story reveals
Sakshi shivanand: ಕನ್ನಡದಲ್ಲಿ ‘ಗಲಾಟೆ ಅಳಿಯಂದಿರು’,(Galate aliyandiru) ‘ಕೋದಂಡ ರಾಮ'(Kodamda rama), ‘ನಾನು ನಾನೇ(Nanu nane)’ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಸಾಕ್ಷಿ ಶಿವಾನಂದ್(Sakshi shivanand) ಇಂದು ಹೇಗಿದ್ದಾರೆ ಗೊತ್ತಾ? ಅವರ ನಿಜ ಬದುಕಿನಲ್ಲಾದ ಘಟನೆಗಳೇನು? ಸಿನಿಮಾ ಬದುಕಿನಿಂದ ಆಕೆ ದೂರ ಉಳಿಯಲು ಕಾರಣವೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಸಾಕ್ಷಿ ಶಿವಾನಂದ್ ಬಗ್ಗೆ ಯಾರಿಗೆ ತಾನೇ ನೆನಪಿಲ್ಲ ಹೇಳಿ? ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್(Shivraj kumar) ಜೊತೆ ‘ಸಾಗರಿಯೇ ಸಾಗರಿಯೇ..’ ಎಂದು ಕುಣಿದು ಕುಪ್ಪಳಿಸಿದ ನಟಿ ಇವರು. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಬಹುಭಾಷಾ ನಟಿ. ಮುಂಬೈ ಮೂಲದ ಈ ನಟಿಗೆ ಒಂದು ಕಾಲದಲ್ಲಿ ಎಲ್ಲಿಲ್ಲದ ಬೇಡಿಕೆ. ಆದರೆ ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಹಾಗೂ ಪ್ರಖ್ಯಾತಿಯನ್ನು ಗಳಿಸಿ ಯಶಸ್ಸಿನ ಉತ್ತುಂಗಕ್ಕೆ ಹೋಗಿದ್ದ ಸಾಕ್ಷಿ ಶಿವಾನಂದ್ ಅವರ ವೈಯಕ್ತಿಕ ಬದುಕು ಮಾತ್ರ ಸ್ವಲ್ಪವೂ ಚೆನ್ನಾಗಿರಲಿಲ್ಲ.
ಹೌದು, ತಾಯಿ ಮಗಳ ಗಲಾಟೆ ವಿಚಾರ, ಸಾಕ್ಷಿ ಶಿವಾನಂದ ಅವರ ಸಹೋದರಿ ಶಿಲ್ಪಾ ಆನಂದ್ ಅವರೊಂದಿಗೆ ಕೆಲವೊಂದು ವಿಚಾರಕ್ಕೆ ಮುನಿಸು ಸಾಕ್ಷಿ ಜೀವನವನ್ನು ಬರ್ಬಾತ್ ಮಾಡಲು ಶುರುಮಾಡುತ್ತದೆ. ಇಷ್ಟೇ ಅಲ್ಲದೆ ಅಕ್ಕ ತಂಗಿ ನಡುವಿನ ಗಲಾಟೆ ಪೊಲೀಸ್ ಸ್ಟೇಷನ್(Police station)ಮೆಟ್ಟಿಲೇರಿ ದೂರು ದಾಖಲಾಗುವ ಮಟ್ಟಿಗೆ ಹೋಗುತ್ತದೆ. ಇದರ ಜೊತೆಗೆ ಕುಟುಂಬದಲ್ಲಿ ಒಬ್ಬರನ್ನು ಸಾಯಿಸಲು ಇನ್ನೊಬ್ಬರು ಪ್ರಯತ್ನಪಟ್ಟರು ಎಂಬ ಆರೋಪಗಳು ಕೇಳಿ ಬರಲು ಶುರುವಾಗುತ್ತದೆ ಹಾಗೂ ಸಾಕ್ಷಿ ಶಿವಾನಂದ್ ಅವರ ಹೆಸರು ಬೇರೆ ಬೇರೆ ವಿಚಾರಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತದೆ. ಈ ರೀತಿಯ ವಿಚಾರಗಳು ಸಾಕ್ಷಿ ಶಿವಾನಂದ್ ಅವರನ್ನು ಸಿನಿಮಾರಂಗದಿಂದ ದೂರ ಉಳಿಯುವಂತೆ ಮಾಡುತ್ತದೆ.
ನಂತರ ಸಾಕ್ಷಿ ಶಿವಾನಂದ್ ಅವರು ಯು.ಎಸ್(US) ಹೋದ ಸಂದರ್ಭದಲ್ಲಿ ಸಾಗರ್(Sagar) ಎಂಬ ವ್ಯಕ್ತಿಯ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುತ್ತಾರೆ. ಅವರಿಬ್ಬರ ನಡುವೆ ಒಂದು ಒಳ್ಳೆಯ ಬಾಂಧವ್ಯ ಇರುತ್ತದೆ, ಅಂತಿಮವಾಗಿ ಇವರಿಬ್ಬರು 2016 ರಲ್ಲಿ ಮದುವೆ ಆದರು ಎಂದು ಹೇಳಲಾಗುತ್ತದೆ. ಸಾಕ್ಷಿ ಅವರು ಮದುವೆಯಾದ ಬಳಿಕ ಅವರಿಗೆ ಎಲ್ಲವೂ ಚೆನ್ನಾಗಿರುತ್ತದೆ, ಆದರೆ ದಿನಗಳು ಕಳೆದಂತೆ ಗಂಡನ ಅಸಲಿ ಮುಖ ಗೋಚರಿಸಲು ಶುರುವಾಗುತ್ತದೆ. ಇದಾದನಂತರ ಸಾಕ್ಷಿ ಶಿವಾನಂದ್ ಅವರಿಗೆ ತಿಳಿಯುವುದು ತನ್ನ ಗಂಡ ನನ್ನ ಮೇಲಿನ ಪ್ರೀತಿಯಿಂದ ಮದುವೆಯಾಗಿಲ್ಲ ಅದರ ಬದಲು ನನ್ನ ಬಳಿ ಇರುವ ಹಣವನ್ನು ನೋಡಿ ಹಾಗೂ ಸೌಂದರ್ಯವನ್ನು ನೋಡಿ ಮದುವೆಯಾಗಿದ್ದಾರೆ ಎಂಬುದು ತಿಳಿಯುತ್ತದೆ.
ಹೀಗೆ ಕೆಲವು ತಿಂಗಳು ಕಳೆದ ನಂತರ ಇವರಿಬ್ಬರೂ ಬೇರೆ ಬೇರೆಯಾಗುತ್ತಾರೆ, ಇದರಿಂದ ಸಾಕ್ಷಿ ಶಿವಾನಂದ್ ಅವರು ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ವೈಯಕ್ತಿಕ ಬದುಕಿನಲ್ಲಿ ಆದ ಬದಲಾವಣೆಯಿಂದ ಸಾಕ್ಷಿಯವರು ಸಿನಿಮಾರಂಗದಲ್ಲೂ ಕೂಡ ಏಳುಬೀಳುಗಳು ಕಾಣಲು ಶುರುವಾಗುತ್ತದೆ.
ಈಗ ಸಾಕ್ಷಿ ಶಿವಾನಂದ್ ಅವರು ಯು.ಎಸ್ ಅಲ್ಲಿ ವಾಸ ಮಾಡುತ್ತಿದ್ದು ಕೆಲವರು ಹೇಳುವ ಪ್ರಕಾರ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಇನ್ನು ಕೆಲವರು ಹೇಳುವ ಪ್ರಕಾರ ಅವರು ಒಂದು ಸಣ್ಣದಾದ ಕಂಪನಿಯನ್ನು ಪ್ರಾರಂಭ ಮಾಡಿ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂದು.ಅದು ಏನೇ ಆಗಲಿ ಅವರು ತೆಗೆದುಕೊಂಡ ಒಂದು ತಪ್ಪು ನಿರ್ಧಾರ ಅವರ ವೈಯಕ್ತಿಕ ಬದುಕನ್ನು ಹಾಲು ಮಾಡಿತು ಎಂದರೆ ತಪ್ಪಾಗಲಾರದು.
ಅಂದಹಾಗೆ ಸಾಕ್ಷಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, 1995ರಲ್ಲಿ ತೆರೆಕಂಡ ಹಿಂದಿಯ ‘ಜನಮ್ ಕುಂಡ್ಲಿ’ ಮೂಲಕ. ಆರಂಭದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರು, ಹೀರೋಯಿನ್(Heroin) ಆಗಿ ಬಡ್ತಿ ಪಡೆದುಕೊಂಡಿದ್ದು, ‘ಜಂಜೀರ್’ (Janjeer) ಚಿತ್ರದಿಂದ. ನಂತರ ಅವರಿಗೆ ಮಲಯಾಳಂನಲ್ಲಿ ಮಮ್ಮೂಟ್ಟಿ ಹಾಗೂ ತೆಲುಗಿನಲ್ಲಿ ಚಿರಂಜೀವಿ ಅವರಂತಹ ಸ್ಟಾರ್ ನಟರಿಗೆ ನಾಯಕಿಯಾದ ಮೇಲೆ ಅವರ ಅದೃಷ್ಟವೇ ತಿರುಗಿತು.
ಐದೇ ವರ್ಷದಲ್ಲಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ನಂತರ ಅವರು ಪಯಣ ಬೆಳೆಸಿದ್ದು ಕನ್ನಡದ ಕಡೆಗೆ. 2000ರಲ್ಲಿ ತೆರೆಕಂಡ ‘ಗಲಾಟೆ ಅಳಿಯಂದಿರು’ ಅವರ ಮೊದಲ ಕನ್ನಡ ಸಿನಿಮಾ. ಮೊದಲ ಸಿನಿಮಾವೇ ದೊಡ್ಡ ಹಿಟ್ ಆಯಿತು. 2002ರ ಒಂದೇ ವರ್ಷದಲ್ಲಿ ಉಪೇಂದ್ರ ಜೊತೆ ‘ನಾನು ನಾನೇ’, ಸಿ.ಪಿ. ಯೋಗೇಶ್ವರ್ ಅವರೊಂದಿಗೆ ‘ಸೈನಿಕ’ ಹಾಗೂ ರವಿಚಂದ್ರನ್ ಜೊತೆ ‘ಕೋದಂಡ ರಾಮ’ ಸಿನಿಮಾಗಳಲ್ಲಿ ಅವರು ನಟಿಸಿದರು. ಉಪೇಂದ್ರ ಜೊತೆ ಮತ್ತೊಮ್ಮೆ ‘ತಂದೆಗೆ ತಕ್ಕ ಮಗ’ ಸಿನಿಮಾದಲ್ಲಿ ನಟಿಸಿದ್ದ ಸಾಕ್ಷಿ, ‘ಸೌಂದರ್ಯ’ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆಗೆ ಬಣ್ಣ ಹಚ್ಚಿದ್ದರು. 2014ರಲ್ಲಿ ತೆರೆಕಂಡ ಕನ್ನಡದ ‘ಪರಮಶಿವ’ ಚಿತ್ರವೇ ಕೊನೇ! ಅಲ್ಲಿಂದ ಬಣ್ಣದ ಲೋಕಕ್ಕೆ ಕಂಪ್ಲೀಟ್ ಆಗಿ ದೂರವಾದರು.