Bengaluru: ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಭೀಕರ ಅಪಘಾತ – ಇಬ್ಬರು ಪಾದಚಾರಿಗಳು ದುರ್ಮರಣ
Karnataka accident news Bengaluru urban news two people died after BMTC BUS accident in Bengaluru

BMTC Bus accident : ಬೆಂಗಳೂರು: ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಬಿಎಂಟಿಸಿ ಬಸ್ಸಿಗೆ (BMTC Bus accident) ಇಬ್ಬರು ಬಲಿಯಾದ ದುರಂತ ಘಟನೆ ಬೆಳಕಿಗೆ ಬಂದಿದೆ.

ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ.ಮೃತರ ಗುರುತು ಪತ್ತೆಯಾಗಿಲ್ಲ. ಮೃತರು 25 ರಿಂದ 30 ವರ್ಷದವರು ಎಂದು ಅಂದಾಜಿಸಲಾಗಿದೆ. ರಾಜಾಜಿನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಇದನ್ನೂ ಓದಿ: ಫ್ರಿ ಬಸ್ ಪಡೆಯೋರಿಗೆ ಶಾಕಿಂಗ್ ನ್ಯೂಸ್; ಹೊಸ ದಂಡ ಫಿಕ್ಸ್ ?!