Shakti scheme conditions: ಫ್ರಿ ಬಸ್ ಪಡೆಯೋರಿಗೆ ಶಾಕಿಂಗ್ ನ್ಯೂಸ್; ಹೊಸ ದಂಡ ಫಿಕ್ಸ್ ?!
Karnataka govt congress guarantee Shakti yojana free bus travel for women scheme conditions
Shakti scheme conditions : ಬೆಂಗಳೂರು : ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶವನ್ನು ನೀಡಿದ ಬೆನ್ನಲ್ಲೆ ಕೆಲವೊಂದು ಹೊಸ ರೂಲ್ಸ್‌ಗಳು(Shakti scheme conditions) ಜಾರಿಯಾಗಿದೆ. ಅಪ್ಪಿತಪ್ಪಿ ಹೊಸ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳದೇ ಬಸ್ಸಿಗೆ ಹತ್ತಿದರೆ ಬಸ್ಸಿನಲ್ಲಿ ಹಣ ಕೊಡಬೇಕಾಗುತ್ತದೆ ಯಾವುದೇ ಕಾರಣಕ್ಕೂ ಉಚಿತವಾಗಲು ಸಾಧ್ಯವಿಲ್ಲ. ಹಾಗಿದ್ರೆ ಆ ಷರತ್ತುಗಳೇನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ
ಉಚಿತ ಪ್ರಯಾಣಕ್ಕೆ ಬಯಸುವವರು ಅನುಸರಿಸಬೇಕಾದ ಹೊಸ ಷರತ್ತುಗಳು :
ಉಚಿತ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್ ಪಡೆಯುವವರೆಗೆ ಆಧಾರ್, ರೇಶನ್, ಓಟಾರ್ ಐಡಿ ಇತರ ಸರಕಾರಿ ಐಡಿಯನ್ನು ಬಳಸುವುದು ಅತ್ಯಗತ್ಯ
ನಮ್ಮ ರಾಜ್ಯದಲ್ಲಿ ಮಾತ್ರ ಓಡಾಡುವ ಸಾರಿಗೆ ಬಸ್ಸುಗಳಲ್ಲಿ ಸಂಚಾರ ಮಾಡಿದ್ರೆ ಮಾತ್ರ ಉಚಿತವಾಗಲಿದೆ. ಹೊರ ರಾಜ್ಯಕ್ಕೆ ತೆರಳುವ ಬಸ್ಸಿನಲ್ಲೂ ಉಚಿತವಿರೋದಿಲ್ಲ
ರಾಜ್ಯದಲ್ಲಿರುವ ಅನ್ಯ ರಾಜ್ಯದ ಉದಾಹರಣೆಗೆ ಕೇರಳ ಬಸ್ ಇದ್ದರೆ ಅವರ ಬೋರ್ಡ್ ಮೇಲೆ ಸಹ ಕೆಎಸ್ ಆರ್ಟಿಸಿ (KSRTC) ಎಂದು ಬರೆದಿರುತ್ತದೆ ಉಚಿತ ಬಸ್ ಅನ್ವಯವಾಗೋದಿಲ್ಲ
ಮೂರು ತಿಂಗಳ ಒಳಗಾಗಿ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ಪಡೆದಿರಬೇಕು, ನೀವು ಸೇವಾ ಸಿಂಧು ಆನ್‌ಲೈನ್ ಮೂಲಕ ಜೂನ್ ರೊಳಗೆ ಪಡೆಯತಕ್ಕದ್ದು
ಬಿಎಂಟಿಸಿ ಬಸ್ ಹೊರತು ಪಡಿಸಿ ಉಳಿದ ಮೂರು ಸರಕಾರಿ ಬಸ್ ನಲ್ಲಿಯೂ 50% ಶೇ. ಮೀಸಲಾತಿಯನ್ನು ಪುರುಷ ಪ್ರಯಾಣಿಕರಿಗೆ ನೀಡಲಾಗಿದೆ. ಅವರಿಗೆ ಸೀಟು ಬಿಟ್ಟು ಕೊಡಬೇಕಾಗುತ್ತದೆ
ಉಚಿತ ಬಸ್ ವ್ಯವಸ್ಥೆ ಆಗಿದ್ರೂ ಟಿಕೆಟ್ ಪಡೆಯುವುದು ಕಡ್ಡಾಯ, ಈ ಮೂಲಕ ಎಷ್ಟು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಅನ್ನೋದನ್ನು ತಿಳಿಯಬಹುದಾಗಿದೆ.
ನಿಮ್ಮ ಬಳಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ಚೆಕ್ಕಿಂಗ್ ಬಂದ ಸಂದರ್ಭ ದಂಡ ಕಟ್ಟಬೇಕಾಗುತ್ತದೆ.
ಉಚಿತ ಬಸ್ಸಿನಲ್ಲಿ 30 ಕೆ.ಜಿ. ಲಗೇಜ್ ಕ್ಯಾರಿ ಮಾಡಿದ್ರೆ ಮಾತ್ರ ಹಣ ಪಾವತಿ ಮಾಡಲೇಬೇಕಾಗುತ್ತದೆ.
ಇದನ್ನೂ ಓದಿ: Honda : ಗುರುಗುಡುತ್ತ ಬಂದಿದೆ ಹೊಂಡ ಯುನಿಕಾರ್ನ್ 2023, ಮಾರುಕಟ್ಟೆಗೆ ಬಂದ ಈ ಹೊಸ OBD 2 ವಾಹನದ ಫೀಚರ್ಸ್ ಹೇಗಿದೆ ಗೊತ್ತಾ?