KCET 2023 Results: ನಾಳೆ ಬೆಳಿಗೆ 9:30 ಕ್ಕೆ CET ಫಲಿತಾಂಶ ಪ್ರಕಟ!! ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

KCET 2023 Results :ದಿನಾಂಕ 15, ಗುರುವಾರ ಅಂದರೆ ನಾಳೆ ಬೆಳಿಗ್ಗೆ 9:30 ಕ್ಕೆ 2023 ನೇ ಸಾಲಿನ ಕೆಸಿಇಟಿ ಫಲಿತಾಂಶವು (KCET 2023 Results)ಅಧಿಕೃತ ವೆಬ್​ಸೈಟ್​ kea.kar.nic.in ನಲ್ಲಿ ಪ್ರಕಟವಾಗಲಿದೆ.

 

ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಸಿಇಟಿ -2023 (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಅಥವಾ ಯುಜಿಸಿಇಟಿ(UGCET) ಫಲಿತಾಂಶವನ್ನು ಜೂನ್(June) 15 ರಂದು ಬೆಳಿಗ್ಗೆ 9.30 ಕ್ಕೆ ಬಿಡುಗಡೆ ಮಾಡಲಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್(Dr. M C Sudhakar) ಮಾಹಿತಿ ನೀಡಿದ್ದಾರೆ.

 

ಅಂದಹಾಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಸಿಇಟಿ-2023ರ ಬಹು ನಿರೀಕ್ಷಿತ ಫಲಿತಾಂಶಗಳನ್ನು ಬೆಂಗಳೂರಿನ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಆವರಣದಲ್ಲಿ ಪ್ರಕಟಿಸಲಿದ್ದಾರೆ. ಈ ಕಾರ್ಯಕ್ರಮವು 15 ಜೂನ್ 2023 ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಅಧಿಕೃತ ಬಿಡುಗಡೆಯ ನಂತರ, ಬೆಳಿಗ್ಗೆ 11.00 ರಿಂದ CET-2023 ಫಲಿತಾಂಶಗಳನ್ನು KEA ವೆಬ್‌ಸೈಟ್‌ kea.kar.nic.in ನಲ್ಲಿ ಸಾರ್ವಜನಿಕರು ಪರಿಶೀಲಿಸಬಹುದು.

 

ಫಲಿತಾಂಶ ಪರಿಶೀಲನೆ ಹೇಗೆ?

KCET ಸ್ಕೋರ್ ಕಾರ್ಡ್ ಅನ್ನು ಅಧಿಕೃತ ವೆಬ್‌ಸೈಟ್‌ಗಳಾದ kea.kar.nic.in, cetonline.karnataka.gov.in ಮತ್ತು karresults.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ :ಐಪಿಪಿಬಿಯಲ್ಲಿ ವಿವಿಧ ಹುದ್ದೆ!ಸಂಬಳ ಲಕ್ಷಗಟ್ಟಲೇ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

Leave A Reply

Your email address will not be published.