Home Karnataka State Politics Updates BJP-Congress: ನಮ್ಮನ್ನು ನೋಡಿ ಸದಾ ಉರಿಯೋ ಬಿಜೆಪಿಯ ಉರಿ ಶಮನಕ್ಕೆ “ಬರ್ನಲ್ ಭಾಗ್ಯ” ಕರುಣಿಸುತ್ತೇವೆ- ಕಾಂಗ್ರೆಸ್...

BJP-Congress: ನಮ್ಮನ್ನು ನೋಡಿ ಸದಾ ಉರಿಯೋ ಬಿಜೆಪಿಯ ಉರಿ ಶಮನಕ್ಕೆ “ಬರ್ನಲ್ ಭಾಗ್ಯ” ಕರುಣಿಸುತ್ತೇವೆ- ಕಾಂಗ್ರೆಸ್ ಲೇವಡಿ!!

BJP-Congress
Image source- Vijayavani

Hindu neighbor gifts plot of land

Hindu neighbour gifts land to Muslim journalist

BJP-Congress: ಬಿಜೆಪಿ(BJP) ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ, ಬಿಜೆಪಿಯ ಉರಿ ಶಮನಕ್ಕಾಗಿ “ಬರ್ನಲ್ ಭಾಗ್ಯ”(Barnel bhagya) ಕೊಡುವ ಬಗ್ಗೆ ಚಿಂತಿಸುತ್ತೇವೆ ಎಂದು ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ಟೀಕಿಸಿದ ಪ್ರತಿಪಕ್ಷ ಬಿಜೆಪಿಗೆ ಕಾಂಗ್ರೆಸ್ (BJP-Congress) ತಿರುಗೇಟು ನೀಡಿದೆ.

ಹೌದು, ಇತ್ತೀಚೆಗೆ ಹಾವೇರಿಯಲ್ಲಿ(Haveri) ಚಲಿಸುತ್ತಿದ್ದ ಸಾರಿಗೆ ಬಸ್​ನಿಂದ ಶಾಲಾ ಬಾಲಕಿಯೊಬ್ಬಳು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೆಚ್ಚಿನ ಸಂಖ್ಯೆಯ ಪ್ರಾಯಣಿಕರನ್ನು ಬಸ್​ನಲ್ಲಿ ತುಂಬಿದ್ದು ಘಟನೆಗೆ ಕಾರಣವಾಗಿತ್ತು. ಈ ಪ್ರಕರಣವನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ(BJP), ಕಾಂಗ್ರೆಸ್(Congress) ಸರ್ಕಾರದ ವಿರುದ್ಧ ಕಿಡಿಕಾರಿತ್ತು. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ‘ಶಕ್ತಿ ಯೋಜನೆ’(Shakti yojane) ಜಾರಿ ಮಾಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಇದಕ್ಕೆ ಯಾರು ಹೊಣೆ? ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉತ್ತರಿಸಬೇಕು ಎಂದು ಬಿಜೆಪಿ ಟ್ವೀಟ್ ಮಾಡಿ ಪ್ರಶ್ನಿಸಿತ್ತು.

ಇದಕ್ಕೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿರುವ ಕಾಂಗ್ರೆಸ್ ‘ಬಿಜೆ‍ಪಿ ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ. ಬಿಜೆಪಿಯ ಉರಿ ಶಮನಕ್ಕಾಗಿ “ಬರ್ನಲ್ ಭಾಗ್ಯ” ಕೊಡುವ ಬಗ್ಗೆ ಚಿಂತಿಸುತ್ತೇವೆ. ಪೂರ್ವಸಿದ್ಧತೆ ಇಲ್ಲದೆ ಲಾಕ್ ಡೌನ್ ಮಾಡಿ, ನೋಟು ನಿಷೇಧ ಮಾಡಿ ಸತ್ತ ನೂರಾರು ಮಂದಿಯ ಬಗ್ಗೆ ಈ ಕಾಳಜಿ ಇರಲಿಲ್ಲವೇಕೆ? ಹೆಚ್ಚುವರಿ ಬಸ್ ಗಳನ್ನು ಖರೀದಿಸಲು ಚಿಂತಿಸುತ್ತಿದ್ದೇವೆ, ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ‘ ಎಂದು ಹೇಳಿದೆ.

ಅಂದಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ರೀತಿಯ ಒಳ್ಳೆ ಮಜವಾದ ಕೌಂಟ್ರು ಕೊಡೋ ಟ್ವಿಟರ್ ವಾರ್(Twitter war)ನಡೆಯುತ್ತಲೇ ಇದೆ. ಇತ್ತೀಚೆಗೆ ಉಚಿತ ಘೋಷಣೆಗಳ ಕುರಿತಾಗಿಯೂ ಎರಡೂ ಪಕ್ಷಗಳು ಒಂದಕ್ಕೊಂದು ಕೌಂಟ್ರು ಕೊಟ್ಟು ಟ್ವೀಟ್ ಮಾಡಿ, ನೆಟ್ಟಿಗರಿಗೆ ನಗುತರಿಸಿದ್ದವು.

 

ಇದನ್ನೂ ಓದಿ: Uttar pradesh: ಮೋದಿ, ಯೋಗಿಯನ್ನು ಹೊಗಳಿದಕ್ಕೆ ಕಾರು ಹರಿಸಿ ಪ್ರಯಾಣಿಕನನ್ನೇ ಕೊಂದ ಕ್ಯಾಬ್ ಡ್ರೈವರ್!!